ಕಾಂತಾರ ಸಿನಿಮಾ ನೋಡಿ ಸಾಕಷ್ಟು ವಿಷಯ ಕಲಿತುಕೊಂಡೆ: ರಿಷಬ್​ ಶೆಟ್ಟಿ ಚಿತ್ರಕ್ಕೆ ಹೃತಿಕ್​ ರೋಷನ್​ ಮೆಚ್ಚುಗೆ

ಬಾಲಿವುಡ್​ನ ಖ್ಯಾತ ನಟ ಹೃತಿಕ್ ರೋಷನ್​ ಅವರು ಕೂಡ ‘ಕಾಂತಾರ’ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಚಿತ್ರದ ಕ್ಲೈಮ್ಯಾಕ್ಸ್​ ಸಖತ್​ ಇಷ್ಟ ಆಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಹೃತಿಕ್ ರೋಷನ್
ಹೃತಿಕ್ ರೋಷನ್

ದೇಶಾದ್ಯಂತ ಹೊಸ ಸಂಚಲನ ಮೂಡಿಸಿದ ‘ಕಾಂತಾರ’ ಚಿತ್ರದ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಭಾಷೆಗಳ ಗಡಿ ಮೀರಿ ಈ ಚಿತ್ರ ಯಶಸ್ಸು ಕಂಡಿದೆ. ರಿಷಬ್​ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ.

ಬಾಲಿವುಡ್​ನ ಖ್ಯಾತ ನಟ ಹೃತಿಕ್ ರೋಷನ್​ ಅವರು ಕೂಡ ‘ಕಾಂತಾರ’ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಚಿತ್ರದ ಕ್ಲೈಮ್ಯಾಕ್ಸ್​ ಸಖತ್​ ಇಷ್ಟ ಆಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕಾಂತಾರ ಸಿನಿಮಾವನ್ನು ನೋಡಿ ಸಾಕಷ್ಟು ವಿಷಯ ಕಲಿತುಕೊಂಡೆ. ರಿಷಬ್​ ಶೆಟ್ಟಿ ಅವರಿಂದಾಗಿ ಈ ಸಿನಿಮಾ ಅಸಾಧಾರಣ ಎನಿಸಿಕೊಂಡಿದೆ. ನಿರೂಪಣೆ, ನಟನೆ ಮತ್ತು ನಿರ್ದೇಶನ ಅತ್ಯುತ್ತಮವಾಗಿದೆ. ಕ್ಲೈಮ್ಯಾಕ್ಸ್​ನಲ್ಲಿ ಕಂಡ ಬದಲಾವನಣೆಯಿಂದ ನನಗೆ ರೋಮಾಂಚನ ಆಯಿತು. ಇಡೀ ತಂಡಕ್ಕೆ ನನ್ನ ಗೌರವ ಮತ್ತು ಅಭಿನಂದನೆಗಳು’ ಎಂದು ಹೃತಿಕ್​ ರೋಷನ್​ ಪೋಸ್ಟ್​ ಮಾಡಿದ್ದಾರೆ.

ಕನ್ನಡ ಸಿನಿಮಾಗಳು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ‘ಕೆಜಿಎಫ್​: ಚಾಪ್ಟರ್​ 2’ ಬಳಿಕ ‘ಕಾಂತಾರ’ ಚಿತ್ರದಿಂದ ಚಂದನವನದ ಚಾರ್ಮ್​ ಹೆಚ್ಚಿದೆ. ರಜನಿಕಾಂತ್​, ವಿವೇಕ್​ ಅಗ್ನಿಹೋತ್ರಿ, ಕಂಗನಾ ರಣಾವತ್​, ಅನುಷ್ಕಾ ಶೆಟ್ಟಿ, ಪ್ರಭಾಸ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾವನ್ನು ಕೊಂಡಾಡಿದ್ದಾರೆ. ಅವರ ಸಾಲಿಗೆ ಹೃತಿಕ್ ರೋಷನ್​ ಕೂಡ ಸೇರ್ಪಡೆ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com