ಕಾಂತಾರ ಬಗ್ಗೆ ಎಸ್‌ಎಸ್ ರಾಜಮೌಳಿ: 'ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಸಾಧಿಸಲು ದೊಡ್ಡ ಬಜೆಟ್ ಚಿತ್ರಗಳ ಅಗತ್ಯವಿಲ್ಲ'
ಆಸ್ಕರ್ ಅಭಿಯಾನದಲ್ಲಿ ನಿರತರಾಗಿರುವ ನಿರ್ದೇಶಕ ಎಸ್ಎಸ್ ರಾಜಮೌಳಿ, ಕನ್ನಡ ಚಲನಚಿತ್ರ ಕಾಂತಾರ ಯಶಸ್ಸಿನಿಂದ ನಿರ್ದೇಶಕರು ಚಲನಚಿತ್ರಗಳನ್ನು ಮಾಡುವ ತಂತ್ರವನ್ನು ಹೇಗೆ ಮರುಚಿಂತನೆಗೊಳಪಡಿಸಬೇಕು ಎಂಬುದರ ಕುರಿತು ಮಾತನಾಡಿದ್ದಾರೆ.
Published: 11th December 2022 01:43 PM | Last Updated: 12th December 2022 03:35 PM | A+A A-

ನಿರ್ದೇಶಕ ಎಸ್ಎಸ್ ರಾಜಮೌಳಿ
ಆಸ್ಕರ್ ಪ್ರಶಸ್ತಿಯತ್ತ ಗಮನಹರಿಸಿರುವ ನಿರ್ದೇಶಕ ಎಸ್ಎಸ್ ರಾಜಮೌಳಿ, ಕನ್ನಡ ಚಲನಚಿತ್ರ ಕಾಂತಾರ ಯಶಸ್ಸಿನಿಂದ ನಿರ್ದೇಶಕರು ಚಲನಚಿತ್ರಗಳನ್ನು ಮಾಡುವ ತಂತ್ರವನ್ನು ಹೇಗೆ ಮರುಚಿಂತನೆಗೊಳಪಡಿಸಬೇಕು ಎಂಬುದರ ಕುರಿತು ಮಾತನಾಡಿದ್ದಾರೆ.
ರಾಜಮೌಳಿ ಅವರು ಕಾಂತಾರ ಸಿನಿಮಾದ ಉದಾಹರಣೆ ನೀಡಿದರು ಮತ್ತು ಸಿನಿಮಾಗಳಿಂದ ದೊಡ್ಡ ಮಟ್ಟದ ಹಣವನ್ನು ಗಳಿಸಲು, ಒಬ್ಬರು ತಮ್ಮ ಸಿನಿಮಾಗಳನ್ನು ದೊಡ್ಡ ಮಟ್ಟದ ಬಜೆಟ್‌ನಲ್ಲಿ ನಿರ್ಮಿಸುವ ಅಗತ್ಯವಿಲ್ಲ. 'ದೊಡ್ಡ ಬಜೆಟ್ ಸಿನಿಮಾ ಎನ್ನುವುದು ಅಷ್ಟೇ, ಇದ್ದಕ್ಕಿದ್ದಂತೆ ಕಾಂತಾರ ಸಿನಿಮಾ ಬರುತ್ತದೆ ಮತ್ತು ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತದೆ. ಹೀಗಾಗಿ, ದೊಡ್ಡ ಮಟ್ಟದ ಹಣ ಮಾಡಲು ಹೆಚ್ಚಿನ ಬಜೆಟ್ ಸಿನಿಮಾದ ಅಗತ್ಯವಿಲ್ಲ. ಕಾಂತಾರದಂತಹ ಸಣ್ಣ ಚಿತ್ರವೂ ಅದನ್ನು ಮಾಡಬಹುದು' ಎಂದಿದ್ದಾರೆ.
ಕಾಂತಾರದಂತಹ ಸಣ್ಣ ಬಜೆಟ್‌ನ ಸಿನಿಮಾವನ್ನು ಪ್ರೇಕ್ಷಕರಾಗಿ ನೋಡುವಾಗ ರೋಮಾಂಚನಕಾರಿಯಾಗಿದೆ. ಆದರೆ, ಸಿನಿಮಾ ನಿರ್ದೇಶಕರಾಗಿ, ನಾವು ಹಿಂತಿರುಗಬೇಕು ಮತ್ತು ನಾವು ಏನು ಮಾಡುತ್ತಿದ್ದೇವೆ ಎಂಬುದನ್ನು ಪರಿಶೀಲಿಸಬೇಕಾಗಿದೆ' ಎಂದು ಅವರು ಹೇಳಿದರು.
ಇದನ್ನೂ ಓದಿ: ವೈಯಕ್ತಿಕ ವಿಚಾರವನ್ನು ಕ್ಯಾಮರಾ ಮುಂದೆ ಹೇಳಲು ಆಗಲ್ಲ; ಕಾಂತಾರ ಸಿನಿಮಾ ನೋಡಿ ಟೀಮ್ ಗೆ ಮೆಸೇಜ್ ಮಾಡಿದ್ದೆ: ರಶ್ಮಿಕಾ ಮಂದಣ್ಣ
ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕಾಂತಾರ ಸದ್ದಿಲ್ಲದೆ ಬಿಡುಗಡೆ ಹೊಂದಿತ್ತು. ಇದೇ ವೇಳೆ ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 1 ಕೂಡ ಬಿಡುಗಡೆಯಾಗಿತ್ತು. ಆದಾಗ್ಯೂ, ಈ ಸಿನಿಮಾ ಜನರ ಬಾಯಿಂದ ಬಾಯಿಗೆ ಉತ್ತಮವಾಗಿ ಹರಡಿತು. ರಾಷ್ಟ್ರವ್ಯಾಪಿ ಗಲ್ಲಾಪೆಟ್ಟಿಗೆಯಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾವಾಯಿತು. ಚಿತ್ರವು ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಿಗೆ ಡಬ್ ಮಾಡಲ್ಪಟ್ಟಿತು. ಈ ಸಿನಿಮಾ ವಿಶ್ವದಾದ್ಯಂತ ಈವರೆಗೆ 200 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಗಳಿಸಿದೆ.