ವೈಯಕ್ತಿಕ ವಿಚಾರವನ್ನು ಕ್ಯಾಮರಾ ಮುಂದೆ ಹೇಳಲು ಆಗಲ್ಲ; ಕಾಂತಾರ ಸಿನಿಮಾ ನೋಡಿ ಟೀಮ್ ಗೆ ಮೆಸೇಜ್ ಮಾಡಿದ್ದೆ: ರಶ್ಮಿಕಾ ಮಂದಣ್ಣ
ಆಂಗ್ಲ ಮಾಧ್ಯಮದ ಸಂದರ್ಶನವೊಂದರಲ್ಲಿ ಮೊದಲ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಸನ್ನೆ ಮೂಲಕ ಮಾತನಾಡಿದ್ದ ರಶ್ಮಿಕಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
Published: 09th December 2022 02:34 PM | Last Updated: 09th December 2022 04:46 PM | A+A A-

ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗನ ದಿನಗಳಲ್ಲಿ ಮತ್ತೆ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಆಂಗ್ಲ ಮಾಧ್ಯಮದ ಸಂದರ್ಶನವೊಂದರಲ್ಲಿ ಮೊದಲ ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಸನ್ನೆ ಮೂಲಕ ಮಾತನಾಡಿದ್ದ ರಶ್ಮಿಕಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.
ರಶ್ಮಿಕಾ ತಮ್ಮ ವೃತ್ತಿಜೀವನವನ್ನು ಕನ್ನಡ ಚಿತ್ರರಂಗದಲ್ಲಿ ಕಿರಿಕ್ ಪಾರ್ಟಿ ಮೂಲಕ ಆರಂಭಿಸಿದರು. ಕಾಂತಾರ ಚಿತ್ರವನ್ನು ನೋಡಿದ್ದೀರಾ ಎಂದು ರಶ್ಮಿಕಾ ಅವರನ್ನು ಕೆಲದಿನಗಳ ಹಿಂದೆ ಕೇಳಿದಾಗ, ಸಿನಿಮಾ ವೀಕ್ಷಿಸಿಲ್ಲ ಎಂದು ಉತ್ತರಿಸಿದರು. ಕನ್ನಡದವರಾಗಿ ತಮಗೆ ವೃತ್ತಿಜೀವನ ಆರಂಭಿಸಲು ಅವಕಾಶ ಕೊಟ್ಟಿದ್ದ ನಿರ್ದೇಶಕನ ಸಿನಿಮಾ ನೋಡಿಲ್ಲ ಎಂಬ ಕಾರಣಕ್ಕೆ ರಶ್ಮಿಕಾ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಕನ್ನಡ ಚಲನಚಿತ್ರೋದ್ಯಮವು ನಟಿಯ ಮೇಲೆ ಬ್ಯಾನ್ ಹೇರಲು ಯೋಜಿಸುತ್ತಿದೆ ಎಂಬ ಊಹಾಪೋಹಗಳು ಸಹ ಕೇಳಿಬಂದಿದ್ದವು.
ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ರಶ್ಮಿಕಾ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. "ಬಿಡುಗಡೆಯಾದ ಎರಡು ದಿನಗಳ ನಂತರ ಕಾಂತಾರ ಚಿತ್ರವನ್ನು ನೋಡಿದ್ದೀರಾ ಎಂದು ನನ್ನನ್ನು ಕೇಳಿದರು ಮತ್ತು ನಾನು ಆಗ ನೋಡಿರಲಿಲ್ಲ. ಅದಕ್ಕೆ ನಾನು ಪ್ರಾಮಾಣಿಕವಾಗಿ ಉತ್ತರಿಸಿದೆ.
ಇದನ್ನೂ ಓದಿ: ಕೈ ಸನ್ನೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲ್; ರಿಷಬ್ ಶೆಟ್ಟಿ ಏನಂದ್ರು?
ಆದರೆ, ನಾನು ಇತ್ತೀಚೆಗೆ ಕಾಂತಾರ ಸಿನಿಮಾ ನೋಡಿದ್ದೇನೆ. ಅಲ್ಲದೇ ಟೀಂಗೆ ಮೆಸೇಜ್ ಮಾಡಿ ಅಭಿನಂದಿಸಿದೆ" ಆ ಕಡೆಯಿಂದಲೂ ನನಗೆ ರಿಪ್ಲೈ ಬಂದಿತ್ತು ಎಂದು ರಶ್ಮಿಕಾ ಹೇಳಿದರು.
ಇದೇ ವೇಳೆ ಬ್ಯಾನ್ ವಿಚಾರವಾಗಿ ಕೇಳಿದಾಗ, ಒಳಗಡೆ ಏನಾಗ್ತಿದೆ ಎಂದು ಈ ಪ್ರಪಂಚಕ್ಕೆ ಗೊತ್ತಿಲ್ಲ. ಇಲ್ಲಿ ಏನಾಗಿದೆ ಎನ್ನುವುದು ದೇವರಿಗೆ ಗೊತ್ತು. ನಾನು ಎಲ್ಲಾ ವೈಯಕ್ತಿಕ ವಿಚಾರಗಳನ್ನು ಕ್ಯಾಮರಾ ಮುಂದೆ ಬಂದು ಹೇಳಲು ಸಾಧ್ಯವಿಲ್ಲ.
ನನ್ನ ವೈಯಕ್ತಿಕ ಜೀವನದ ಬಗ್ಗೆ ಜನ ಏನು ಹೇಳುತ್ತಾರೋ ಅದು ಮ್ಯಾಟರ್ ಆಗಲ್ಲ. ವೃತ್ತಿಪರ ಜೀವನದ ಬಗ್ಗೆ ಮಾತನಾಡಿದ್ರೆ ನಾವು ಅದರ ಬಗ್ಗೆ ಗಮನ ಕೊಡಬಹುದು. ಬ್ಯಾನ್ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ' ಎಂದು ಹೇಳಿದ್ದಾರೆ.