ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಆರ್.ಆರ್.ಆರ್ ನಾಮನಿರ್ದೇಶನ: ಅಭಿಮಾನಿಗಳಿಗೆ ರಾಜಮೌಳಿ ಧನ್ಯವಾದ!
ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಾಗಿ ಎರಡು ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಇಂಗ್ಲಿಷ್ ಹೊರತಾದ ಸಿನಿಮಾಗಳಿಗೆ ನೀಡುವ ವಿಭಾಗದಲ್ಲಿ ಈ ಸಿನಿಮಾ ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ಗೀತೆ ವಿಭಾಗದಲ್ಲಿ ಸಿನಿಮಾ ನಾಮಿನೇಟ್ ಆಗಿದೆ.
ಇಂಗ್ಲಿಷ್ ಹೊರತಾದ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಹಾಗೂ ಹಾಡಿನ ವಿಭಾಗದಲ್ಲಿ ಈ ಸಿನಿಮಾದ ನಾಟು ನಾಟು ಚಿತ್ರ ಪ್ರಬಲ ಸ್ಪರ್ಧೆಯನ್ನು ನೀಡಲಿದೆ. ಹೀಗಾಗಿ ಸಹಜವಾಗಿಯೇ ರಾಜಮೌಳಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ.
ಇಂಗ್ಲಿಷ್ ಹೊರತಾದ ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ಹಾಡು (ನಾಟು ನಾಟು) ವಿಭಾಗದಲ್ಲಿ ಈ ಚಿತ್ರ ಪೈಪೋಟಿ ನೀಡುತ್ತಿದೆ. ಈ ಸುದ್ದಿ ಕೇಳಿ ರಾಜಮೌಳಿ ಫ್ಯಾನ್ಸ್ ಖುಷಿ ಆಗಿದ್ದಾರೆ. ಟಾಲಿವುಡ್ ಮಂದಿ ಹೆಮ್ಮೆಯಿಂದ ಬೀಗುತ್ತಿದ್ದಾರೆ.
‘ಆರ್ಆರ್ಆರ್’ ಸಿನಿಮಾದಲ್ಲಿ ರಾಮ್ ಚರಣ್, ಜೂನಿಯರ್ ಎನ್ಟಿಆರ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರವನ್ನು ರಾಮ್ ಚರಣ್ ನಿಭಾಯಿಸಿದ್ದರೆ, ಕೊಮರಮ್ ಭೀಮ್ ಪಾತ್ರಕ್ಕೆ ಜೂನಿಯರ್ ಎನ್ಟಿಆರ್ ಬಣ್ಣ ಹಚ್ಚಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಬ್ಬರ ಕಾಲ್ಪನಿಕ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್’ ಮೂಲಕ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ನೀಡಲಾಗುತ್ತದೆ. ಅಮೆರಿಕದ ಸಿನಿಮಾ ಹಾಗೂ ಕಿರುತೆರೆ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ. ಇಂಗ್ಲಿಷ್ ಹೊರತಾದ 2 ವಿಭಾಗದಲ್ಲಿ ‘ಆರ್ಆರ್ಆರ್’ ಚಿತ್ರ ನಾಮಿನೇಟ್ ಆಗಿದ್ದು, ಪ್ರಶಸ್ತಿ ಗೆಲ್ಲಲಿದೆಯಾ ಎಂಬ ಕೌತುಕ ಮೂಡಿದೆ. 2023ರ ಜನವರಿ 11ರಂದು ಲಾಸ್ ಎಂಜಲೀಸ್ನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
‘ಆಲ್ ಕ್ವಾಯ್ಟ್ ಆನ್ ದಿ ವೆಸ್ಟರ್ನ್ ಫ್ರಂಟ್’ (ಜರ್ಮನಿ), ಅರ್ಜೆಂಟೀನಾ 1985 (ಅರ್ಜೆಂಟೀನಾ), ಕ್ಲೋಸ್ (ಬೆಲ್ಜಿಯಂ), ಡಿಸಿಷನ್ ಟು ಲೀವ್ (ದಕ್ಷಿಣ ಕೋರಿಯಾ) ಚಿತ್ರಗಳು ‘ಆರ್ಆರ್ಆರ್’ ಸಿನಿಮಾ ಜೊತೆ ಸೆಣೆಸುತ್ತಿವೆ. ತಮ್ಮ ಚಿತ್ರವನ್ನು ನಾಮಿನೇಟ್ ಮಾಡಿದ್ದಕ್ಕಾಗಿ ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿಯ ಜ್ಯೂರಿಗಳಿಗೆ ಹಾಗೂ ಅಭಿಮಾನಿಗಳಿಗೆ ರಾಜಮೌಳಿ ಅವರು ಧನ್ಯವಾದ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ