ಟಾಲಿವುಡ್ ಹಿರಿಯ ನಟ ಕೈಕಾಲ ಸತ್ಯನಾರಾಯಣ ವಿಧಿವಶ: ರಾಜ್​ಕುಮಾರ್ ನಟನೆಯ ‘ಸ್ವರ್ಣಗೌರಿ’ ಚಿತ್ರದಲ್ಲಿಯೂ ನಟನೆ

ಹಿರಿಯ ನಟ ಕೈಕಾಲ ಸತ್ಯನಾರಾಯಣ ಅವರು 87ನೇ ವರ್ಷದಲ್ಲಿ ನಿಧನರಾಗಿದ್ದಾರೆ. 2021ರ ನವೆಂಬರ್ ನಂತರದಲ್ಲಿ ಕೃತಕ ಉಸಿರಾಟದ ಸಹಾಯ ಪಡೆದಿದ್ದರು.
ಕೈಕಾಲ ಸತ್ಯನಾರಾಯಣ
ಕೈಕಾಲ ಸತ್ಯನಾರಾಯಣ
Updated on

ಹಿರಿಯ ನಟ ಕೈಕಾಲ ಸತ್ಯನಾರಾಯಣ ಅವರು 87ನೇ ವರ್ಷದಲ್ಲಿ ನಿಧನರಾಗಿದ್ದಾರೆ. 2021ರ ನವೆಂಬರ್ ನಂತರದಲ್ಲಿ ಕೃತಕ ಉಸಿರಾಟದ ಸಹಾಯ ಪಡೆದಿದ್ದರು.

ಅಕ್ಟೋಬರ್‌ನಲ್ಲಿ ಮನೆಯಲ್ಲಿ ಕುಸಿದು ಬಿದ್ದ ನಂತರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರ ಆರೋಗ್ಯ ಸ್ಥಿರವಾಗಿರಲಿಲ್ಲ.  ನವರಸ ನಟನ ಸಾರ್ವಭೌಮ ಎಂದೇ ಹೆಸರು ಪಡೆದಿದ್ದ ಕೈಕಾಲ ಅವರು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ 1935 ಜುಲೈ 25ರಂದು ಜನಿಸಿದ್ದರು. 200 ನಿರ್ದೇಶಕರ ಜೊತೆ ಸೇರಿಕೊಂಡು 770 ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ಕೈಕಾಲ ಅವರಿಗೆ ಸಲ್ಲುತ್ತದೆ.

1962ರಲ್ಲಿ ತೆರೆಗೆ ಬಂದ ರಾಜ್​ಕುಮಾರ್ ನಟನೆಯ ‘ಸ್ವರ್ಣಗೌರಿ’ ಚಿತ್ರದಲ್ಲಿ ಅವರು ಶಿವನ ಪಾತ್ರ ಮಾಡಿದ್ದರು ಎಂಬುದು ವಿಶೇಷ. ಕೈಕಾಲ ಸತ್ಯನಾರಾಯಣ ಅವರು 1935ರ ಜುಲೈ 25ರಂದು ಆಂಧ್ರ ಪ್ರದೇಶದಲ್ಲಿ ಜನಿಸಿದರು. 1959ರಂದು ಅವರು ಚಿತ್ರರಂಗಕ್ಕೆ ಕಾಲಿಟ್ಟರು. 1960ರಲ್ಲಿ ನಾಗೇಶ್ವರಮ್ಮ ಅವರನ್ನು ಮದುವೆ ಆದರು. ಈ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಈಗ ಸತ್ಯನಾರಾಯಣ ಅವರು ನಿಧನ ಹೊಂದಿರುವ ಸುದ್ದಿ ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳಿಗೆ ಸಾಕಷ್ಟು ದುಃಖ ನೀಡಿದೆ.

1959ರಲ್ಲಿ 'ಸಿಪಾಯಿ ಕುತುರು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅವರು, ಕೊನೆಯದಾಗಿ ಮಹೇಶ್ ಬಾಬು ನಟನೆಯ 'ಮಹರ್ಷಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. , ಹೀರೋ, ಪೋಷಕ ನಟ, ಖಳನಾಯಕನಾಗಿ ಐದು ದಶಕಗಳ ಕಾಲ ಚಿತ್ರರಂಗಕ್ಕೆ ಕೊಡುಗೆ ಸಲ್ಲಿಸಿದ್ದಾರೆ. ಕೈಕಾಲ ಅವರು 'ಕೃಷ್ಣಾರ್ಜುನ ಯುದ್ಧಂ', 'ನರ್ತನಾಸಲ', 'ಯಮಗೋಲ', 'ಸೊಗ್ಗಡು', 'ಅಡವಿ ರಾಮುಡು', 'ದಾನ ವೀರ ಸೂರ ಕರ್ಣ', 'ತಯರಮ್ಮ ಬಂಗಾರಯ್ಯ', 'ಗ್ಯಾಂಗ್ ಲೀಡರ್' ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com