ಸೇಡಿನ ಜ್ವಾಲೆಯ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ನಾಯಕ!
ನಿರ್ದೇಶಕ ರಾಜ್ ಬಿ ಶೆಟ್ಟಿ, 'ಸ್ವಾತಿನ ಮುತ್ತಿನ ಮಳೆ ಹನಿಯೇ'ಚಿತ್ರದ ನಾಯಕ ನಟರಾಗಿ ಅಭಿನಯಿಸುತ್ತಿರುವಂತೆಯೇ, ಮತ್ತೊಂದು ಚಿತ್ರಕ್ಕೂ ಸಜ್ಜಾಗುತ್ತಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ರಾಜ್ ಬಿ ಶೆಟ್ಟಿ ನಿರ್ದೇಶನದ ಮೂರನೇ ಚಿತ್ರವಾಗಿದ್ದು, ಪ್ರಸ್ತುತ ಇದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಇತ್ತೀಚಿಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಶೀರ್ಷಿಕೆ ಕುತೂಹಲಕಾರಿಯಾಗಿತ್ತಲ್ಲದೇ, ಅವರ ಮುಂದಿನ ಚಿತ್ರದ ಸುಳಿವು ಸ್ಪಷ್ಟವಾಗಿತ್ತು. ರಾಜ್ ಬಿ ಶೆಟ್ಟಿ ಚಿತ್ರಕಥೆ ಬರೆದಿರುವ ಚಿತ್ರಕ್ಕೆ, ಈ ಹಿಂದೆ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ಬಾಸಿಲ್ ಅಲ್ಚಲಕ್ಕಲ್ ನಿರ್ದೇಶಿಸಲಿದ್ದಾರೆ.
ಇದು ಸೇಡಿನ ಜ್ವಾಲೆಯ ಚಿತ್ರ ಎಂದು ನಿರೀಕ್ಷಿಸಲಾಗಿದೆ. ಬಾಸಿಲ್ 'ಒಂದು ಮೊಟ್ಟೆಯ ಕಥೆ'ಯಿಂದ ರಾಜ್ ಬಿ ಶೆಟ್ಟಿ ಅವರೊಂದಿಗೆ ಒಡನಾಟ ಹೊಂದಿದ್ದು, ಈ ಚಿತ್ರದೊಂದಿಗೆ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಲಿದ್ದು, ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣ ಇರಲಿದೆ.
ಈ ಮಧ್ಯೆ ರಾಜ್ ಬಿ ಶೆಟ್ಟಿ, ರುಧಿರಾಮ್ ಚಿತ್ರದೊಂದಿಗೆ ಮಲಯಾಳಂಗೆ ಪಾದಾರ್ಪಣೆ ಮಾಡಲಿದ್ದಾರೆ. ಇದರಲ್ಲಿ ಅಪರ್ಣಾ ಬಾಲಮುರಳಿ ಸಹ-ನಟಿಯಾಗಿ ನಟಿಸುತ್ತಿದ್ದಾರೆ ಮತ್ತು ಜಿಶೋ ಲೋನ್ ಆಂಟೋನಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ