ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 14 ದಿನಗಳಲ್ಲಿ 1 ಬಿಲಿಯನ್ ಡಾಲರ್ ಗಳಿಸಿದ ಅವತಾರ್: ದಿ ವೇ ಆಫ್ ವಾಟರ್!

ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಬಹು ನಿರೀಕ್ಷಿತ ಸೀಕ್ವೆಲ್ ಅವತಾರ್: ದಿ ವೇ ಆಫ್ ವಾಟರ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕೇವಲ 14 ದಿನಗಳಲ್ಲಿ 1 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಈ ಮೂಲಕ, ಅತ್ಯಂತ ವೇಗವಾಗಿ ಈ ಮೈಲಿಗಲ್ಲನ್ನು ದಾಟಿದ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಅವತಾರ್: ದಿ ವೇ ಆಫ್ ವಾಟರ್
ಅವತಾರ್: ದಿ ವೇ ಆಫ್ ವಾಟರ್

ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಬಹು ನಿರೀಕ್ಷಿತ ಸೀಕ್ವೆಲ್ ಅವತಾರ್: ದಿ ವೇ ಆಫ್ ವಾಟರ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕೇವಲ 14 ದಿನಗಳಲ್ಲಿ 1 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಈ ಮೂಲಕ, ಅತ್ಯಂತ ವೇಗವಾಗಿ ಈ ಮೈಲಿಗಲ್ಲನ್ನು ದಾಟಿದ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಅವತಾರ್: ದಿ ವೇ ಆಫ್ ವಾಟರ್ ಸೀಕ್ವೆಲ್ 2022 ರ 'ಟಾಪ್ ಗನ್: ಮೇವರಿಕ್‌ 770 ಮಿಲಿಯನ್ ಡಾಲರ್ ಗಳಿಸಿ ಅತ್ಯಧಿಕ ಗಳಿಕೆಯ ಅಂತರರಾಷ್ಟ್ರೀಯ ಚಿತ್ರದ ದಾಖಲೆಯನ್ನು ಮುರಿಯುವ ಸನಿಹದಲ್ಲಿದೆ. 20ನೇ ಶತಮಾನ/ಡಿಸ್ನಿ ಬಿಡುಗಡೆಯು ಮಂಗಳವಾರ ಈ ಮೈಲಿಗಲ್ಲನ್ನು ದಾಟಿದೆ.

ಬಿಡುಗಡೆಯಾದ ದಿನದಿಂದ ಕೇವಲ 14 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸನ್ನು ಸಾಧಿಸಿಕೊಂಡು ಬರುತ್ತಿದೆ. ಈ ಮೂಲಕ ಅವತಾರ್‌ ಸಿನಿಮಾ 19 ದಿನಗಳಲ್ಲಿ ಗಳಿಸಿದ್ದ 1 ಬಿಲಿಯನ್ ಡಾಲರ್ ದಾಖಲೆಯನ್ನು ಸರಿಗಟ್ಟಿದೆ.

2009 ರಲ್ಲಿ ಬಿಡುಗಡೆಯಾದ ಫ್ರ್ಯಾಂಚೈಸ್‌ನ ಮೊದಲ ಸನಿಮಾವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಯಿತು ಮತ್ತು 10 ವರ್ಷ ಕಳೆದರೂ ತನ್ನ ದಾಖಲೆಯನ್ನು ಉಳಿಸಿಕೊಂಡಿದೆ. 2019 ರಲ್ಲಿ ತೆರೆಕಂಡ ಮಾರ್ವೆಲ್‌ನ ಅವೆಂಜರ್ಸ್: ಎಂಡ್‌ಗೇಮ್ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಜೇಮ್ಸ್ ಕ್ಯಾಮರೂನ್ ಅವರ ಟೈಟಾನಿಕ್ ಸಿನಿಮಾ ಇದೆ.

ವರದಿಗಳ ಪ್ರಕಾರ, ಜೇಮ್ಸ್ ಕ್ಯಾಮರೂನ್ ಅವರು ಅವತಾರ್ 5 ವರೆಗೆ ಸೀಕ್ವೆಲ್‌ಗಳನ್ನು ಮಾಡಲು ಯೋಜಿಸಿದ್ದಾರೆ ಮತ್ತು ಈಗಾಗಲೇ ಅವತಾರ್ 3 ಮತ್ತು 4 ರ ಭಾಗಗಳನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com