'ಗಿರ್ಕಿ' ಮೂಲಕ ವೀರೇಶ್, ತರಂಗ ವಿಶ್ವ ಅದೃಷ್ಟ ಪರೀಕ್ಷೆ!

ನಿರ್ದೇಶಕ ಯೋಗರಾಜ್ ಭಟ್ ಮತ್ತು ಮಹೇಶ್ ಬಾಬು ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ವೀರೇಶ್ ಪಿಎಂ ಅವರ ಚೊಚ್ಚಲ ನಿರ್ದೇಶನದ 'ಗಿರ್ಕಿ' ಇದೇ ಜುಲೈ 8 ರಂದು ತೆರೆಗೆ ಬರುತ್ತಿದೆ.
ಗಿರ್ಕಿ ಚಿತ್ರದ ಸ್ಟಿಲ್
ಗಿರ್ಕಿ ಚಿತ್ರದ ಸ್ಟಿಲ್

ನಿರ್ದೇಶಕ ಯೋಗರಾಜ್ ಭಟ್ ಮತ್ತು ಮಹೇಶ್ ಬಾಬು ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ವೀರೇಶ್ ಪಿಎಂ ಅವರ ಚೊಚ್ಚಲ ನಿರ್ದೇಶನದ 'ಗಿರ್ಕಿ' ಇದೇ ಜುಲೈ 8 ರಂದು ತೆರೆಗೆ ಬರುತ್ತಿದೆ.

ರೋಮ್ಯಾಂಟಿಕ್ ಕಾಮಿಡಿ ಥ್ರಿಲ್ಲರ್ ಅಂಶಗಳಿರುವ ಕಥೆ ಗಿರ್ಕಿಯಾಗಿದ್ದು, ರಿಯಾಲಿಟಿ ಕಾಮಿಡಿ ಶೋ,ಮಜಾ ಟಾಕೀಸ್ ಮೂಲಕ ಗಮನ ಸೆಳೆದ ತರಂಗ ವಿಶ್ವ ಅವರ ಮೊದಲ ನಿರ್ಮಾಣದ ಚಿತ್ರವಾಗಿದ್ದು ಇದರಲ್ಲಿ ಅವರು ಕೂಡ ನಟಿಸಿದ್ದಾರೆ.

ನನ್ನ ಚಿತ್ರವು ಇಬ್ಬರು ಜೋಡಿಗಳ ಕಥೆಯಾಧರಿಸಿದ ಚಿತ್ರ. ಪ್ರೀತಿ, ಸೆಂಟಿಮೆಂಟ್ಸ್, ಆಕ್ಷನ್, ಕಾಮಿಡಿ ಮತ್ತು ಥ್ರಿಲ್ಲರ್‌ನಂತಹ ಬಹು ಅಂಶಗಳನ್ನು ಇದು ಹೊಂದಿದೆ ಎನ್ನುತ್ತಾರೆ. 

ಪೂರ್ಣ ಪ್ರಮಾಣದ ನಾಯಕನಾಗಿ ವಿಲೋಕ್ ರಾಜ್ ಮತ್ತು ಪ್ರಮುಖ ಪಾತ್ರದಲ್ಲಿ ತರಂಗ ವಿಶ್ವ, ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಮತ್ತು ರಾಶಿ ಮಹದೇವ್ ನಾಯಕಿಯರಾಗಿ ನಟಿಸಿದ್ದಾರೆ. ಎಡಿತ್ ಫಿಲ್ಮ್ ಫ್ಯಾಕ್ಟರಿ ಅಡಿಯಲ್ಲಿ ತಯಾರಾದ ಗಿರ್ಕಿ ಚಿತ್ರಕ್ಕೆ ವೀರಸಮರತ್ ಸಂಗೀತ ಮತ್ತು ನವೀನ್ ಕುಮಾರ್ ಚಲ್ಲಾ ಅವರ ಛಾಯಾಗ್ರಹಣವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com