ವಿಕ್ರಾಂತ್ ರೋಣ: 'ಹೇ ಫಕೀರಾ' ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ವಿಕ್ರಾಂತ್ ರೋಣ' ಚಿತ್ರದ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ರಾ..ರಾ.. ರುಕ್ಕಮ್ಮ, ರಾಜಕುಮಾರಿ ಸಾಂಗ್ ನಂತರ ಇದೀಗ 'ಹೇ ಫಕೀರಾ ಲಿರಿಕಲ್ ವಿಡಿಯೋ ಸಾಂಗ್ ಇಂದು ಹೊರಗೆ ಬಂದಿದೆ.
Presenting the next track #HeyFakira from #VikrantRona.https://t.co/bxfQl8JwwD#VRonJuly28 @anupsbhandari @JackManjunath @AJANEESHB @nirupbhandari @Sanjheg @Chinmayi #VikrantRona pic.twitter.com/u815bdYwqU
ಈ ಸಾಂಗ್ ನಲ್ಲಿ ಮಾಲಾಶ್ರೀ ಕೂಡಾ ಕಾಣಿಸಿಕೊಂಡಿದ್ದು, ಅಭಿಮಾನಿಗಳ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅನೂಪ್ ಭಂಡಾರಿ ಸಾಹಿತ್ಯವಿರುವ ಈ ಸಾಂಗ್ ಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಶಾಲಿನಿ ಆರ್ಟ್ಸ್ ಬ್ಯಾನರ್ ಅಡಿ ಜಾಕ್ ಮಂಜು ಚಿತ್ರ ನಿರ್ಮಾಣ ಮಾಡಿದ್ದು, ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಪಕರಾಗಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ, ನೀತಾ ಅಶೋಕ್ ನಟಿಸಿದ್ದು ವಿವಿಧ ಭಾಷೆಗಳಿಗೆ ಡಬ್ ಆಗಿದೆ. 3ಡಿ ಅವತರಣಿಕೆಯಲ್ಲಿ ಈ ಚಿತ್ರ ಮೂಡಿಬರುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ