ಸಲ್ಮಾನ್ ಖಾನ್ ಗೆ ಆ್ಯಕ್ಷನ್ ಕಟ್ ಹೇಳ್ತಾರಾ 'ವಿಕ್ರಮ್' ನಿರ್ದೇಶಕ ಲೋಕೇಶ್ ಕನಗರಾಜ್?
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ 'ವಿಕ್ರಮ್' ಸಿನಿಮಾ ನಿರ್ದೇಶಕ ಲೋಕೇಶ್ ಕನಗರಾಜ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ವರದಿಯಾಗಿದೆ.
ಮೈತ್ರಿ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ತಯಾರಿಸಲು ಈಗಾಗಲೇ ಪ್ರೊಡಕ್ಷನ್ ಕಂಪನಿ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಿದೆ, ಹೈದರಾಬಾದ್ ನಲ್ಲಿ ಲೋಕೇಶ್ ಮತ್ತು ಸಲ್ಮಾನ್ ಖಾನ್ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮುಂದಿನ ಪ್ರಾಜೆಕ್ಟ್ ಬಗ್ಗೆ ಮೂವರು ಒಟ್ಟಾಗಿ ಚರ್ಚಿಸಿದ್ದು, ಸಲ್ಮಾನ್ ಮತ್ತು ಲೋಕೇಶ್ ಈಗಾಗಲೇ ತಾವು ಕೈಗೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಿದ ನಂತರ ಮುಂದಿನ ಚಿತ್ರಕ್ಕಾಗಿ ಸಿದ್ಧತೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ಸಲ್ಮಾನ್ ಖಾನ್ ಗೆ ನಿರ್ದೇಶಕ ಲೋಕೇಶ್ ಎರಡನೇ ಬಾರಿಗೆ ಆಫರ್ ನೀಡಿದ್ದಾರ ಎನ್ನಲಾಗಿದೆ.
ಕಳೆದ ವರ್ಷ, ಮುರಾದ್ ಖೇತಾನಿ ಅವರಿಂದ 'ಮಾಸ್ಟರ್' ನ ಅಧಿಕೃತ ರಿಮೇಕ್ ಗೆ ಆಹ್ವಾನ ನೀಡಲಾಯಿತು. ಸದ್ಯ ಸಲ್ಮಾನ್ ಪ್ರಸ್ತುತ ಶೆಹನಾಜ್ ಗಿಲ್, ಪೂಜಾ ಹೆಗ್ಡೆ ಮತ್ತು ಜಸ್ಸಿ ಗಿಲ್ ಅವರೊಂದಿಗೆ ಕಭಿ ಈದ್ ಕಭಿ ದೀಪಾವಳಿ ಚಿತ್ರೀಕರಣದಲ್ಲಿದ್ದಾರೆ. ಇದರ ಜೊತೆಗೆ ಕತ್ರೀನಾ ಕೈಫ್ ಜೊತೆ ಟೈಗರ್ 2 ಸಿನಿಮಾ ಕೂಡ ಇದೆ.
ವರ್ಷದ ಅಂತ್ಯದ ವೇಳೆಗೆ ಸಲ್ಮಾನ್ ಖಾನ್ ನೋ ಎಂಟ್ರಿ 2 ಚಿತ್ರೀಕರಣವನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಚಿರಂಜೀವಿ ಅವರ ಗಾಡ್‌ಫಾದರ್‌ನಲ್ಲಿಯೂ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಮೋಹನ್ ರಾಜ ನಿರ್ದೇಶಿಸಿದ್ದಾರೆ ಮತ್ತು ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಮತ್ತು ಸೂಪರ್ ಗುಡ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ