ತಿಮ್ಮಯ್ಯ & ತಿಮ್ಮಯ್ಯ: ಮತ್ತೆ ಬಂದ್ರು ವಜ್ರಕಾಯದ ಬೆಡಗಿ ಶುಭ್ರಾ ಅಯ್ಯಪ್ಪ

2015ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿದ್ರದ ನೋ ಪ್ರಾಬ್ಲಂ ಹಾಡಿನ ಮೂಲಕ ಮನೆ ಮಾತಾಗಿದ್ದ ನಟಿ, ಮಾಡೆಲ್ ಶುಭ್ರಾ ಅಯ್ಯಪ್ಪ ಅವರು ಸುಮಾರು ಏಳು ವರ್ಷಗಳ ಸುದೀರ್ಘ ಬ್ರೇಕ್ ನಂತರ, ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.
ಶುಭ್ರಾ ಅಯ್ಯಪ್ಪ, ದಿಗಂತ್
ಶುಭ್ರಾ ಅಯ್ಯಪ್ಪ, ದಿಗಂತ್
Updated on

2015ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿದ್ರದ ನೋ ಪ್ರಾಬ್ಲಂ ಹಾಡಿನ ಮೂಲಕ ಮನೆ ಮಾತಾಗಿದ್ದ ನಟಿ, ಮಾಡೆಲ್ ಶುಭ್ರಾ ಅಯ್ಯಪ್ಪ ಅವರು ಸುಮಾರು ಏಳು ವರ್ಷಗಳ ಸುದೀರ್ಘ ಬ್ರೇಕ್ ನಂತರ, ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ.

ಈ ವಾರ ಬಿಡುಗಡೆಯಾಗಲಿರುವ ತಿಮ್ಮಯ್ಯ ಮತ್ತು ತಿಮ್ಮಯ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಶುಭ್ರಾ ಅಯ್ಯಪ್ಪ ಮರಳಿದ್ದಾರೆ. ಸಂಜಯ್ ಶರ್ಮಾ ನಿರ್ದೇಶನದ, ರಾಜೇಶ್ ಶರ್ಮಾ ನಿರ್ಮಿಸಿದ ತಿಮ್ಮಯ್ಯ ಮತ್ತು ತಿಮಯ್ಯ ಚಿತ್ರದ ಮೂಲಕ ಶುಭ್ರ ಮತ್ತೆ ಬಂದಿದ್ದಾರೆ. ಇದರಲ್ಲಿ ಅನಂತ್ ನಾಗ್, ದಿಗಂತ್ ಮತ್ತು ಐಂದ್ರಿತಾ ರೇ ಕೂಡ ಇದ್ದಾರೆ. 

“ನಾನು ಸುನಿ ನಿರ್ದೇಶನದ ಜಾನ್ ಸೀನಾ ಎಂಬ ಶೀರ್ಷಿಕೆಯ ಚಿತ್ರ ಮಾಡಿದ್ದೆ. ಅದರಲ್ಲಿ ನಾನು ವಿಶಿಷ್ಟವಾದ ಪಾತ್ರವನ್ನು ಮಾಡಿದ್ದೇನೆ. ಆದರೆ ದುರದೃಷ್ಟವಶಾತ್, ಅದು ಟೇಕಾಫ್ ಆಗಲಿಲ್ಲ” ಎಂದು ಶುಭ್ರಾ ಹೇಳುತ್ತಾರೆ.

<strong>ಶುಭ್ರಾ ಅಯ್ಯಪ್ಪ</strong>
ಶುಭ್ರಾ ಅಯ್ಯಪ್ಪ

ಸುದೀರ್ಘ ಬ್ರೇಕ್ ಬಗ್ಗೆ ಪ್ರತಿಕ್ರಿಯಿಸಿದ ಶುಭ್ರಾ, “ನಾನು ಚಿತ್ರರಂಗಕ್ಕೆ ಪ್ರವೇಶಿಸಿದಾಗ, ನಾನು ನಟನೆಯಲ್ಲಿ ಯಾವುದೇ ತರಬೇತಿ ಪಡೆದಿರಲಿಲ್ಲ. ಹಾಗಾಗಿ ಆ್ಯಕ್ಟಿಂಗ್ ಕೋರ್ಸ್ ಮಾಡಲು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಗೆ ಹೋಗಿದ್ದೆ. ನಂತರ, ಕೋವಿಡ್ ಬಂತು. ಅದು ನಾನು ನಿಜವಾಗಿಯೂ ದೀರ್ಘ ವಿರಾಮವನ್ನು ತೆಗೆದುಕೊಂಡಿದ್ದೇನೆ ಎಂಬ ಭಾವನೆ ಜನರಿಗೆ ನೀಡಿತು. ವಾಸ್ತವವಾಗಿ, ನನಗೆ ಕೆಲವು ಪಾತ್ರಗಳು ಬಂದಿದ್ದವು. ಆದರೆ ನಾನು ಅವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನಾನು ಚಿತ್ರರಂಗಕ್ಕೆ ಮರಳಲು ಸಾಕಷ್ಟು ಉತ್ಸುಕಳಾಗಿದ್ದೆ ಎಂದು ಶುಭ್ರಾ ತಿಳಿಸಿದ್ದಾರೆ.

ಶುಭ್ರಾ ಅವರ ನಟನೆಯ ಉತ್ಸಾಹದ ಬಗ್ಗೆ ಅನೇಕರಿಗೆ ಗೊತ್ತಿಲ್ಲ. "ನನ್ನ ತಲೆಯಲ್ಲಿ, ನಾನು ಒಬ್ಬ ನಟಿ ಅಂತ ಮಾತ್ರ ಇತ್ತು. ಆದರೆ ನನ್ನ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿರಲಿಲ್ಲ. ವಾಸ್ತವವಾಗಿ ನಾನು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿ ತರಗತಿಯಲ್ಲಿ ಅಗ್ರಸ್ಥಾನ ಪಡೆದಿದ್ದೇನೆ. ಆದರೆ ಪ್ರಾಯೋಗಿಕವಾಗಿ, ನಾನು ಬಯಸಿದ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ಅದೇ ಸಮಯಕ್ಕೆ ತಿಮ್ಮಯ್ಯ ಮತ್ತು ತಿಮ್ಮಯ್ಯ ನಿರ್ಮಾಪಕರಿಂದ ಕರೆ ಬಂದಾಗ ನನಗೆ ತುಂಬಾ ಸಂತೋಷವಾಯಿತು” ಎನ್ನುತ್ತಾರೆ ಶುಭ್ರಾ.

ತಿಮ್ಮಯ್ಯ ಮತ್ತು ತಿಮ್ಮಯ್ಯ ಚಿತ್ರದಲ್ಲಿ ಜನ ನನ್ನ ಅಭಿನಯವನ್ನು ಗುರುತಿಸುತ್ತಾರೆ ಮತ್ತು ಇದು ನನ್ನ ವೃತ್ತಿಜೀವನಕ್ಕೆ ಉತ್ತಮ ಪುನರಾರಂಭವಾಗಲಿದೆ ಎಂದು ಶುಭ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಿಮ್ಮಯ್ಯ ಮತ್ತು ತಿಮ್ಮಯ್ಯ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ ನಟಿ, ಚಿತ್ರದಲ್ಲಿ ಸೌಮ್ಯ ಹೆಸರಿನ ಪಾತ್ರ ಮಾಡಿದ್ದೇನೆ. ಇದು ನನ್ನ ರಿಯಲ್ ಜೀವನದ ಆ್ಯಟಿಟ್ಯೂಡ್​ಗೂ ಮ್ಯಾಚ್ ಆಗುತ್ತದೆ ಎಂದು ಹೇಳಿದ್ದಾರೆ.

ತಿಮ್ಮಯ್ಯ ಮತ್ತು ತಿಮ್ಮಯ್ಯ ಚಿತ್ರದಲ್ಲಿ ಶುಭ್ರಾ ಅಯ್ಯಪ್ಪ ಅವರು ನಟ ದಿಗಂತ್ ಅವರಿಗೆ ನಾಯಕಿ ಅಭಿನಯಿಸಿದ್ದಾರೆ. ದಿಗಂತ್ ಜೊತೆಗೇನೆ ಈ ಚಿತ್ರದಲ್ಲಿ ಶುಭ್ರಾ ಅಯ್ಯಪ್ಪ ಹೆಚ್ಚಿನ ಸೀನ್​ಗಳೂ ಇವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com