ಪುನೀತ್ ರಾಜ್ ಕುಮಾರ್ ಗಂಧದ ಗುಡಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಬಯಸಿದ್ದರು: ಸಂಗೀತ ನಿರ್ದೇಶಕ ಲೋಕನಾಥ್

ವಿಕ್ರಾಂತ್ ರೋಣ, ಗುರು ಶಿಷ್ಯರು ಮತ್ತು ಕಾಂತಾರ ಚಿತ್ರಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಅವರು, ಗಂಧದ ಗುಡಿ ಚಿತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಚಿತ್ರ ಕುರಿತು ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ ಕೊನೆಯ ಕ್ಷಣಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಗಂಧದ ಗುಡಿ
ಗಂಧದ ಗುಡಿ

ವಿಕ್ರಾಂತ್ ರೋಣ, ಗುರು ಶಿಷ್ಯರು ಮತ್ತು ಕಾಂತಾರ ಚಿತ್ರಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಅವರು, ಗಂಧದ ಗುಡಿ ಚಿತ್ರದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಚಿತ್ರ ಕುರಿತು ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ ಕೊನೆಯ ಕ್ಷಣಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 

ನಟ ದಿ.ಪುನೀತ್​ ರಾಜ್​ಕುಮಾರ್​​ ಡ್ರೀಮ್​ ಪ್ರಾಜೆಕ್ಟ್ ಗಂಧದಗುಡಿ ಚಿತ್ರವಾಗಿದ್ದು, ಚಿತ್ರವು ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ. ಅಕ್ಟೋಬರ್ 29 ಕ್ಕೆ ಅಪ್ಪು ಅಗಲಿ ಒಂದು ವರ್ಷ ತುಂಬಲಿದ್ದು, ಅವರ ಸ್ಮರಣೆಗಾಗಿ ಗಂಧಧಗುಡಿ ಬೆಳ್ಳಿತೆರೆಗೆ ಬರಲಿದೆ.

ಇಹಲೋಕ ತ್ಯಜಿಸುವುದಕ್ಕೂ ಮುನ್ನ ನಟ ಪುನೀತ್ ರಾಜ್ ಕುಮಾರ್ ಚಿತ್ರ ಕುರಿತು ಅಜನೀಶ್ ಅವರ ಬಳಿ ಮಾತನಾಡಿದ್ದು, ಈ ಕುರಿತು ಹಾಗೂ ಚಿತ್ರದ ಕುರಿತು ಅಜನೀಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

ಕಳೆದ ವರ್ಷ ನವೆಂಬರ್ 1ಕ್ಕೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದ್ದೆವು. ಚಿತ್ರದಲ್ಲಿನ ನನ್ನ ಕಾರ್ಯಕ್ಕೆ ಅಪ್ಪು ಸರ್ ಪ್ರಶಂಸಿದ್ದರು. ಗಂಧದ ಗುಡಿ ಚಿತ್ರವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದರು. ಅವರ ಮಾತುಗಳು ಈಗಲೂ ನನ್ನ ಕಿವಿಗಳಲ್ಲಿ ಗುನುಗುತ್ತಿದೆ ಎಂದು ಹೇಳಿದ್ದಾರೆ. 

ಇನ್ನು ಚಿತ್ರದ ಕುರಿತು ಮಾತನಾಡಿರುವ ಅಜನೀಶ್ ಅವರು, ಗಂಧದ ಗುಡಿಗಾಗಿ ನಾವು ನಾಲ್ಕು ಹಾಡುಗಳನ್ನು ಸಂಯೋಜಿಸಿದ್ದೇವೆ. 1973 ರಲ್ಲಿ ಬಿಡುಗಡೆಯಾದ ಡಾ ರಾಜ್‌ಕುಮಾರ್ ನಟನೆಯ ಗಂಧದ ಗುಡಿ ಚಿತ್ರದ ಹಾಡನ್ನು (ನಾವಾಡುವ ನುಡಿಯೇ) ಮರುಸೃಷ್ಟಿಸಿದ್ದೇವೆ. ಹಾಡನ್ನು ಸಂಯೋಜಿಸುವಾಗ ಅಪ್ಪು ಅವರು ತಮ್ಮ ಧ್ವನಿಯಲ್ಲಿ ಗುನುಗುತ್ತಿರುವ ಕೆಲವು ತುಣುಕುಗಳಿವೆ. ಅವುಗಳನ್ನು ಪ್ರೇಕ್ಷಕರು ಕೇಳಬಹುದು. ಆರಂಭದಲ್ಲಿ ಅಪ್ಪು ಅವರೊಂದಿಗೆ ಚಿತ್ರದ ಬಗ್ಗೆ ಮಾತನಾಡುವಾಗ ಕೇವಲ ಒಂದು ಹಾಡನ್ನು ಸಂಯೋಜಿಸುವ ಕುರಿತು ಮಾತುಕತೆ ನಡೆದಿತ್ತು. ನಂತರದ ದಿನಗಳಲ್ಲಿ ಮತ್ತಷ್ಟು ಹಾಡುಗಳು ಸೇರಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. 

ಕರ್ನಾಟಕದ ದಟ್ಟ ಅರಣ್ಯದೊಳಗಿನ ರಣರೋಚಕಗಳನ್ನ ವಿವರಿಸುವ ಹಾಗೂ ವಿವಿಧ ಸಂಸ್ಕೃತಿಗಳನ್ನು ಚಿತ್ರದಲ್ಲಿ ವಿವರಿಸಲಾಗಿದೆ. ಚಿತ್ರದಲ್ಲಿ ಜಾನಪದ ರಾಗಗಳು ಇವೆ. ಅಪ್ಪು ಗಾಯಕರಾಗಿದ್ದು, ತಂದೆಯಂತೆಯೇ ಸಹಜವಾಗಿ ಹಾಡುತ್ತಿದ್ದರು. ಅಪ್ಪು ಸರ್ ಇನ್ನಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರಿಲ್ಲದ ಸಮಯದಲ್ಲಿ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವುದು ಕಷ್ಟವಾಯಿತು. ಕೆಲಸ ಸಂದರ್ಭದಲ್ಲಿ ಸಾಕಷ್ಟು ನೆನಪಾಗುತ್ತಿದ್ದರು. 10 ನಿಮಿಷ ಕುಳಿತು ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಪ್ಪು ಸರ್ ಅದ್ಭುತ ವ್ಯಕ್ತಿ. ಅವರ ವಿವಿಧ ರೀತಿಯ ಸಾಮಾಜಿಕ ಕಾರ್ಯಗಳ ಬಗ್ಗೆ ತಿಳಿದುಕೊಂಡ ಬಳಿಕ ಅವರ ಆಫ್‌ಸ್ಕ್ರೀನ್‌ನಲ್ಲಿರುವ ವ್ಯಕ್ತಿತ್ವ ಅವರ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಪುನೀತ್ ರಾಜ್ ಕುಮಾರ್ ಅವರ ಚಿತ್ರದಲ್ಲಿ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆಂದು ಅಜನೀಶ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com