ಯೋಗರಾಜ್ ಭಟ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಡೈರೆಕ್ಟ್ ಮಾಡುತ್ತಿರುವ ವಿಷಯ ಕೆಲ ದಿನಗಳ ಹಿಂದೆ ರಿವೀಲ್ ಆಗಿತ್ತು. ಈಗ ಚಿತ್ರ ತಂಡದಿಂದ ಮತ್ತೊಂದು ಅಪ್ ಡೇಟ್ ಹೊರ ಬಿದ್ದಿದೆ.
ಚಿತ್ರೀಕರಣ ಆರಂಭಿಸಿದ್ದ ಯೋಗರಾಜ್ ಭಟ್ ಚಿತ್ರದ ಟೈಟಲ್ ಫಿಕ್ಸ್ ಮಾಡಿರಲಿಲ್ಲ. ಈಗ ಚಿತ್ರದ ಟೈಟಲ್ ರಿವೀಲ್ ಮಾಡಿದ್ದು, ‘ಕರಟಕ ದಮನಕ’ ಎಂದು ಭಿನ್ನವಾದ ಶೀರ್ಷಿಕೆಯನ್ನಿಟ್ಟು ಪ್ರೇಕ್ಷಕರ ತಲೆಗೆ ಕುತೂಹಲದ ಹುಳು ಬಿಟ್ಟಿದ್ದಾರೆ ಯೋಗರಾಜ್ ಭಟ್.
ರಾಕ್ ಲೈನ್ ಪ್ರೂಡಕ್ಷನ್ಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಯೋಗರಾಜ್ ಭಟ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ನಾಲ್ಕವರ ಹೆಸರಿದೆ. ಮೇಲೆ ಶ್ರೀ ಶಿವಣ್ಣ+ ಶ್ರೀ ಪ್ರಭುದೇವ ಅಂತಿದೆ. ಅದೇ ಕೆಳಗೆ ಶ್ರೀ ರಾಕ್‌ಲೈನ್ ವೆಂಕಟೇಶ್ + ಶ್ರೀ ಯೋಗರಾಜ್ ಭಟ್ ಅಂತಿದೆ. ಮಧ್ಯೆ K ಮುಂದೆ ಕರಟಕ D ಮುಂದೆ ದಮನಕ ಅಂತಲೂ ಇದೆ. ಇದೇ ಮುಂದಿನ ಸಿನಿಮಾ ಅಂತ ಬರೆದುಕೊಂಡಿದ್ದಾರೆ.
ಕರಟಕ' ಹಾಗೂ 'ದಮನಕ' ಅನ್ನೋ ಎರಡು ಪದಗಳನ್ನು ಡಿಕೋಡ್ ಮಾಡಲು ಹೋದರೆ, ಪಂಚತಂತ್ರದ ಕಡೆ ಹೋಗುತ್ತೆ. ಪಂಚತಂತ್ರದ ಕಥೆಯಲ್ಲಿ ಕರಟಕ ಹಾಗೂ ದಮನಕ ಎಂಬುದು ಎರಡು ನರಿಗಳು. ಇವು ಕಾಡಿನ ರಾಜ ಸಿಂಹದ ಮಂತ್ರಿಗಳು. ಎರಡೂ ಬೇರೆ ಸ್ವಭಾವ ಹೊಂದಿದ್ದು, ಸಿಂಹರಾಜನ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಪ್ರಭುದೇವ ಹಾಗೂ ಶಿವರಾಜ್‌ಕುಮಾರ್ ಇಬ್ಬರೂ ಈಗಾಗಲೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ಆರಂಭ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಭುದೇವ ಹಾಗೂ ಶಿವರಾಜ್‌ಕುಮಾರ್ ಇಬ್ಬರೂ ಜೋಷ್‌ನಲ್ಲೇ ಭಾಗಿಯಾಗಿದ್ದಾರೆ.
ಬಹಳ ದಿನಗಳ ಬಳಿಕ ರಾಕ್‌ಲೈನ್ ವೆಂಕಟೇಶ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಾಕ್‌ಲೈನ್ ಕಾಣಿಸಿಕೊಳ್ಳುತ್ತಿದ್ದು, ನಾಲ್ವರು ದಿಗ್ಗಜರು ಒಂದೇ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ.
ಶಿವಣ್ಣ ಹಾಗೂ ಪ್ರಭುದೇವ ಇಬ್ಬರಿಗೂ ಒಬ್ಬೊಬ್ಬರು ನಾಯಕಿಯರು. 'ಜೇಮ್ಸ್' ಸಿನಿಮಾದಲ್ಲಿ ನಟಿಸಿರೋ ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು ಈ ಸಿನಿಮಾದಲ್ಲಿದ್ದಾರೆ. ವಿ ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಈ ಸಿನಿಮಾಗಿದೆ.
Advertisement