ಮಾನ್ಸೂನ್ ರಾಗ ಸ್ಟಿಲ್
ಮಾನ್ಸೂನ್ ರಾಗ ಸ್ಟಿಲ್

ಧನಂಜಯ್ - ರಚಿತಾ ರಾಮ್ ಜೋಡಿಯ 'ಮಾನ್ಸೂನ್ ರಾಗ' ಸೆಪ್ಟಂಬರ್ 16 ರಂದು ರಿಲೀಸ್

ಡಾಲಿ  ಧನಂಜಯ್, ರಚಿತಾ ರಾಮ್, ಅಚ್ಯುತ್ ಕುಮಾರ್, ಸುಹಾಸಿನಿ ನಟಿಸಿರುವ 'ಮಾನ್ಸೂನ್ ರಾಗ' ಸಿನಿಮಾದ ಟ್ರೇಲರ್ ಹಾಗೂ ಥೀಮ್ ಸಾಂಗ್ ಎಲ್ಲರ ಗಮನಸೆಳೆದಿದೆ. ಈ ಸಿನಿಮಾವನ್ನು 'ಪುಷ್ಪಕ ವಿಮಾನ' ಖ್ಯಾತಿಯ ಎಸ್. ರವೀಂದ್ರನಾಥ್ ಅವರು ನಿರ್ದೇಶನ ಮಾಡಿದ್ದು, ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ.
Published on

ಡಾಲಿ  ಧನಂಜಯ್, ರಚಿತಾ ರಾಮ್, ಅಚ್ಯುತ್ ಕುಮಾರ್, ಸುಹಾಸಿನಿ ನಟಿಸಿರುವ 'ಮಾನ್ಸೂನ್ ರಾಗ' ಸಿನಿಮಾದ ಟ್ರೇಲರ್ ಹಾಗೂ ಥೀಮ್ ಸಾಂಗ್ ಎಲ್ಲರ ಗಮನಸೆಳೆದಿದೆ. ಈ ಸಿನಿಮಾವನ್ನು 'ಪುಷ್ಪಕ ವಿಮಾನ' ಖ್ಯಾತಿಯ ಎಸ್. ರವೀಂದ್ರನಾಥ್ ಅವರು ನಿರ್ದೇಶನ ಮಾಡಿದ್ದು, ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ.

ಮಾನ್ಸೂನ್ ರಾಗ ಸೆಪ್ಟಂಬರ್ 16 ರಂದು ತೆರೆಕಾಣುತ್ತಿದೆ. ಎಲ್ಲಾ ಪ್ರೇಕ್ಷಕರನ್ನು ಸೆಳೆಯುವಂತ ಸಿನಿಮಾ ಮಾಡಿರುವ ವಿಶ್ವಾಸವಿದೆ ಎಂದು ನಿರ್ದೇಶಕ  ಭರವಸೆ ವ್ಯಕ್ತ ಪಡಿಸಿದ್ದಾರೆ. ಸಮಾನ ಮನಸ್ಕರೊಂದಿಗೆ ಕೆಲಲ ಮಾಡುವುದು ತುಂಬಾ ಸುಲಭ, ತಮ್ಮ ಸಿನಿಮಾ ಕಮರ್ಷಿಯಲ್ ಎಂಟರೈನ್ ಮೆಂಟ್ ಕಥೆ ಹೊಂದಿದೆ ಎಂದು ನಿರ್ದೇಶಕ ರವೀಂದ್ರನಾಥ್ ತಿಳಿಸಿದ್ದಾರೆ.

ಮಾನ್ಸೂನ್ ರಾಗ ಎರಡು ಸುಂದರ ಆತ್ಮಗಳ ನಡುವಿನ ಪ್ರೇಮಕಥೆಯಾಗಿದೆ. ತಮ್ಮ ಸಿನಿಮಾ ಎಲ್ಲಾ ಜನರೇಷನ್ ಸಿನಿಮಾಗಳಿಗೆ ಸ್ಫೂರ್ತಿಯಾಗಲಿದೆ. ಈ ಚಿತ್ರದಲ್ಲಿ ಧನಂಜಯ್ ಮಾಸ್ ಹೀರೋ ಆಗಿ ನಟಿಸಿದ್ದು, ಬಾರ್‌ನಲ್ಲಿ ಕೆಲಸ ಮಾಡುವ ಸಹೃದಯವಂತ ವ್ಯಕ್ತಿ ಪಾತ್ರದಲ್ಲಿ ನಟಿಸಿದ್ದಾರೆ.

80 ಮತ್ತು 90 ರ ದಶಕದ ಲೈಂಗಿಕ ಕಾರ್ಯಕರ್ತೆಯಾಗಿ ರಚಿತಾರಾಮ್ ನಟಿಸಿದ್ದಾರೆ. ಚಿತ್ರದಲ್ಲಿ ಯಶ ಶಿವಕುಮಾರ್, ಅಚ್ಯುತ್ ಕುಮಾರ್ ಮತ್ತು ಸುಹಾಸಿನಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಮಾನ್ಸೂನ್ ರಾಗದಲ್ಲಿ ಪ್ರಕೃತಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ರವೀಂದ್ರನಾಥ್ ಹೇಳಿದ್ದಾರೆ.

ಶೀರ್ಷಿಕೆಯಲ್ಲಿಯೇ ಮಳೆ ಮತ್ತು ಹವಾಮಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ನಮ್ಮ ಚಿತ್ರದಲ್ಲಿ ಪ್ರಕೃತಿಯು ದೊಡ್ಡ ಪಾತ್ರವನ್ನು ವಹಿಸುತ್ತದೆ ಮತ್ತು ನಿಮ್ಮನ್ನು ಕಾಲ್ಪನಿಕ ಜಗತ್ತಿಗೆ ಕೊಂಡೊಯ್ಯುತ್ತದೆ ಎಂದು ನಿರ್ದೇಶಕರು ಅಭಿಪ್ರಾಯ ಪಟ್ಟಿದ್ದಾರೆ.

ವಿಖ್ಯಾತ್ ಪ್ರೊಡಕ್ಷನ್ ಹೌಸ್ ನಿರ್ಮಾಣದ, ಮಾನ್ಸೂನ್ ರಾಗಕ್ಕೆ ಅನೂಪ್ ಸೀಳಿನ್ ನೀಡಿದ್ದಾರೆ. ಎಸ್‌ಕೆ ರಾವ್ ಅವರ ಛಾಯಾಗ್ರಹಣದೊಂದಿಗೆ, ರಾಷ್ಟ್ರ ಪ್ರಶಸ್ತಿ ವಿಜೇತ ಹರೀಶ್ ಕೊಮ್ಮೆ ಸಂಕಲನ ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com