ನನ್ನ ಜೀವನದ ಅನುಭವಗಳಿಂದಲೇ ನನ್ನ ಸಿನಿಮಾದ ಕಥೆಗಳನ್ನು ರಚಿಸಲಾಗಿದೆ: ವಿಜಯ್ ಪ್ರಸಾದ್

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ವಿಜಯ ಪ್ರಸಾದ್, ಡಬಲ್ ಮೀನಿಂಗ್‌ನೊಂದಿಗೆ ಹಾಸ್ಯವನ್ನು ಬೆರೆಸುವಲ್ಲಿ ಹೆಸರುವಾಸಿ. ಆದರೆ, ಅವರ ಕಥೆಗಳು ಯಾವಾಗಲೂ ಪ್ರಮುಖ ಸಂದೇಶವನ್ನು ಕೂಡ ಹೊಂದಿರುತ್ತವೆ. ಅವರ ಮುಂದಿನ ತೋತಾಪುರಿ ಕೂಡ ಆಸಕ್ತಿದಾಯಕ ವಿಷಯವನ್ನು ಹೊಂದಿದೆ.
ತೋತಾಪುರಿ ಚಿತ್ರ ತಂಡ
ತೋತಾಪುರಿ ಚಿತ್ರ ತಂಡ
Updated on

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ವಿಜಯ ಪ್ರಸಾದ್, ಡಬಲ್ ಮೀನಿಂಗ್‌ನೊಂದಿಗೆ ಹಾಸ್ಯವನ್ನು ಬೆರೆಸುವಲ್ಲಿ ಹೆಸರುವಾಸಿ. ಆದರೆ, ಅವರ ಕಥೆಗಳು ಯಾವಾಗಲೂ ಪ್ರಮುಖ ಸಂದೇಶವನ್ನು ಕೂಡ ಹೊಂದಿರುತ್ತವೆ. ಅವರ ಮುಂದಿನ ತೋತಾಪುರಿ ಕೂಡ ಆಸಕ್ತಿದಾಯಕ ವಿಷಯವನ್ನು ಹೊಂದಿದೆ.

'ಇದು ಸಮಾಜದಲ್ಲಿ ಮನುಷ್ಯರ ಸಹಬಾಳ್ವೆಯ ಕುರಿತಾದ ಸರಳ ರೊಮ್ಯಾಂಟಿಕ್ ಸಿನಿಮಾವಾಗಿದ್ದು, ಮಾನವರ ಸಹಬಾಳ್ವೆಯ ಪ್ರಮುಖ ವಿಚಾರವನ್ನು ತೆರೆಯ ಮೇಲೆ ತರುತ್ತಿದೆ' ಎಂದು ನಿರ್ದೇಶಕ ವಿಜಯ್ ಪ್ರಸಾದ್ ಹೇಳುತ್ತಾರೆ.

<strong>ವಿಜಯ್ ಪ್ರಸಾದ್</strong>
ವಿಜಯ್ ಪ್ರಸಾದ್

'ತೋತಾಪುರಿಯ ವಿಶೇಷತೆ ಏನೆಂದರೆ, ಶಾಂತಿ ಸೌಹಾರ್ದತೆಯಿಂದ ಬದುಕುವ ವಿಭಿನ್ನ ಹಿನ್ನೆಲೆಯ ಪಾತ್ರಗಳನ್ನು ಒಳಗೊಂಡಿದೆ. ನನ್ನ ಜೀವನದಲ್ಲಿ ನಾನು ಗಮನಿಸಿದ ಸಂಗತಿಗಳು ಮತ್ತು ನನ್ನ ಬಾಲ್ಯದಿಂದಲೂ ವಿವಿಧ ಧರ್ಮಗಳ ಜನರೊಂದಿಗೆ ಪ್ರಯಾಣಿಸಿದ ನನ್ನ ಸ್ವಂತ ಅನುಭವಗಳನ್ನು ಆಧರಿಸಿದ ಚಿತ್ರ ಇದಾಗಿದೆ ಎನ್ನುತ್ತಾರೆ. ವಿಜಯಪ್ರಸಾದ್ ಅವರು ತಮ್ಮ ಬರವಣಿಗೆಗಾಗಿಯೇ ಸಾಕಷ್ಟು ಮೆಚ್ಚುಗೆ ಪಡೆದವರು.

ತೋತಾಪುರಿ ಸಿನಿಮಾದ ಕಥೆಯ ಬರವಣಿಗೆ ಬಗ್ಗೆ ಕೇಳಿದಾಗ, 'ನನ್ನ ಕಥೆಗಳು ನನ್ನ ಜೀವನದ ಅನುಭವಗಳಿಂದಲೇ ಚಿತ್ರಿಸಲಾಗಿದೆ. ನಾನು ನನ್ನ ಸುತ್ತಲಿನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವವನು. ಒಳ್ಳೆಯದು, ಕೆಟ್ಟದ್ದು, ಬೆಳಕು ಮತ್ತು ಕತ್ತಲೆಯನ್ನು ನೋಡುತ್ತೇನೆ. ಒಂದು ಘಟನೆ ಅಥವಾ ಸಮಸ್ಯೆಯು ಬರವಣಿಗೆಯಾಗಿ ರೂಪುಗೊಳ್ಳಲು ಅದು ನನ್ನನ್ನು ಕಾಡಬೇಕು. ನಾನು ಏಕಕಾಲದಲ್ಲಿ ಪಾತ್ರಗಳು ಮತ್ತು ಸಂಭಾಷಣೆಗಳನ್ನು ರೂಪಿಸುತ್ತೇನೆ. ನಂತರ ಕಥೆಯನ್ನು ಬರೆಯುತ್ತೇನೆ. ನಂತರವೇ ಅದನ್ನು ಸಂಪೂರ್ಣ ಸ್ಕ್ರಿಪ್ಟ್ ಆಗಿ ಅಭಿವೃದ್ಧಿಪಡಿಸುತ್ತೇನೆ' ಎನ್ನುತ್ತಾರೆ.

ಸಿನಿಮಾಗಳಲ್ಲಿ ಅಡಲ್ಟ್ ಕಾಮಿಡಿ ಮತ್ತು ಸಾಮಾಜಿಕ ಸಂದೇಶವನ್ನು ಹೇಗೆ ತೋರಿಸಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಚಿಕ್ಕವನಿದ್ದಾಗಲೇ ನನ್ನ ತಂದೆಯನ್ನು ಕಳೆದುಕೊಂಡಿದ್ದರಿಂದ, ಜೀವನದಲ್ಲಿ ಬಹಳ ಬೇಗ ನಾನು ಜಗತ್ತನ್ನು ಅನ್ವೇಷಿಸಲು ಪ್ರಾರಂಭಿಸಿದೆ. ಇದು ಅನೇಕ ಮುಖಗಳ ಹಿಂದಿನ ವಾಸ್ತವವನ್ನು ನೋಡಲು ನನಗೆ ಸಹಾಯ ಮಾಡಿತು. ಯಾವುದು ನಿಜ ಮತ್ತು ಯಾವುದು ಅಲ್ಲ ಎಂಬುದರ ನಡುವಿನ ವ್ಯತ್ಯಾಸವನ್ನು ನಾನು ಅರ್ಥಮಾಡಿಕೊಂಡಿದ್ದೇನೆ' ಎಂದು ಹೇಳುತ್ತಾರೆ.

'ನಾನು ಜಗತ್ತನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಆಳವಾಗಿ ಹೋದೆ ಮತ್ತು ಅದು ನಾವು ಸಂತೋಷವಾಗಿರುವುದು ಮತ್ತು ನಮ್ಮ ಸುತ್ತಲಿರುವ ಪ್ರತಿಯೊಬ್ಬರನ್ನು ಸಂತೋಷವಾಗಿರಿಸುವುದು ಎಂಬುದನ್ನು ಅರಿತುಕೊಂಡೆ. ಅದಕ್ಕಾಗಿಯೇ ನಾನು ನನ್ನ ಚಲನಚಿತ್ರಗಳ ಮೂಲಕ ಮತ್ತು ಜೀವನದಲ್ಲೂ ಮನರಂಜನೆಯನ್ನು ನೀಡಲು ಉದ್ದೇಶಿಸಿದೆ' ಎಂದು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com