ಸುನಿ ನಿರ್ದೇಶನದ 'ಗತ ವೈಭವ'ದಲ್ಲಿ ಆಶಿಕಾ ರಂಗನಾಥ್ ದೇವಕನ್ಯೆ!
‘ಗತವೈಭವ’ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಫ್ಯಾಂಟಸಿ ಅಂಶಗಳೂ ಇವೆಯಂತೆ. ಆಶಿಕಾ ಈ ಚಿತ್ರದಲ್ಲಿ ದೇವಕನ್ಯೆ ಮತ್ತು ಪೋರ್ಚುಗೀಸ್ ಯುವತಿಯ ಪಾತ್ರ ಮಾಡುತ್ತಿದ್ದಾರಂತೆ.
Published: 04th August 2022 11:29 AM | Last Updated: 06th August 2022 06:51 PM | A+A A-

ಆಶಿಕಾ ರಂಗನಾಥ್
ವರ್ಷದ ಆರಂಭದಲ್ಲಿ ದುಶ್ಯಂತ್ ಅಭಿನಯದಲ್ಲಿ ‘ಗತವೈಭವ’ ಎಂಬ ಹೊಸ ಚಿತ್ರವನ್ನು ಘೋಷಿಸಿದ್ದರು ಸಿಂಪಲ್ ಸುನಿ. ದುಶ್ಯಂತ್ ಎಂಬ ಹೊಸ ಹುಡುಗನನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿರುವ ಸುನಿ, ನಾಯಕನ ಪರಿಚಯದ ವಿಡಿಯೋವನ್ನು ಬಿಡುಗಡೆ ಮಾಡಿದ್ದರು.
ಈಗ ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆಯಾಗಿರುವ ಸುದ್ದಿ ಬಂದಿದ್ದು, ನಾಯಕಿಯನ್ನು ಪರಿಚಯಿಸುವ ವಿಡಿಯೋ, ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ.
‘ಗತವೈಭವ’ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಫ್ಯಾಂಟಸಿ ಅಂಶಗಳೂ ಇವೆಯಂತೆ. ಆಶಿಕಾ ಈ ಚಿತ್ರದಲ್ಲಿ ದೇವಕನ್ಯೆ ಮತ್ತು ಪೋರ್ಚುಗೀಸ್ ಯುವತಿಯ ಪಾತ್ರ ಮಾಡುತ್ತಿದ್ದಾರಂತೆ.

ಕಳೆದ ಮೇ ತಿಂಗಳಲ್ಲಿ ತೆರೆಕಂಡಿದ್ದ ಸುನಿ ನಿರ್ದೇಶನದ ‘ಅವತಾರ ಪುರುಷ’ದಲ್ಲೂ ಆಶಿಕಾ ನಾಯಕಿಯಾಗಿದ್ದರು. ಇದೀಗ ಯುವನಟ ದುಷ್ಯಂತ್ ಅವರ ಚೊಚ್ಚಲ ಸಿನಿಮಾ ‘ಗತವೈಭವ’ಕ್ಕೂ ಆಶಿಕಾ ಜೋಡಿಯಾಗಿದ್ದಾರೆ. ಫ್ಯಾಂಟಸಿ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ಈ ಸಿನಿಮಾದಲ್ಲಿ ವಿಎಫ್‌ಎಕ್ಸ್ ಕಲಾವಿದನ ಪಾತ್ರದಲ್ಲಿ ದುಷ್ಯಂತ್ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಸುನಿ ನಿರ್ದೇಶನದ 'ಗತ ವೈಭವ'ದಲ್ಲಿ ದುಶ್ಯಂತ್ ಗೆ ಆಶಿಕಾ ರಂಗನಾಥ್ ನಾಯಕಿ?
ಹೀಗಾಗಿ ಸಿನಿಮಾದಲ್ಲಿ ಅವರೆತ್ತುವ ಅವತಾರಕ್ಕೆ ಪೂರಕವಾಗಿ ಆಶಿಕಾ ಕೂಡಾ ಹಲವು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇವಕನ್ಯೆಯಾಗಿ, ಪೋರ್ಚುಗೀಸ್ ಮರ್ಚೆಂಟ್ ಆಗಿ ಹೀಗೆ ನಾನಾ ಪಾತ್ರಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಆಶಿಕಾ.
‘ಗತವೈಭವ’ ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಂತಿದ್ದು, ಆಶಿಕಾ ಶೇಕಡ 30ರಷ್ಟು ಚಿತ್ರೀಕರಣ ಈಗಾಗಲೇ ಮುಗಿಸಿದ್ದಾರೆ. ಸುನಿ ನಿರ್ದೇಶನದ ಜತೆಗೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ಅಷ್ಟೇ ಅಲ್ಲ, ದೀಪಕ್ ಜತೆಗೆ ಸೇರಿ ಸುನಿ ಸಿನಿಮಾಸ್ ಸಂಸ್ಥೆಯಡಿ ಚಿತ್ರವನ್ನೂ ನಿರ್ವಿುಸುತ್ತಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಜೂಡಾ ಸ್ಯಾಂಡಿ ಸಂಗೀತ ಈ ಚಿತ್ರಕ್ಕಿದೆ.