ರವಿಚಂದ್ರನ್ ಜೊತೆ ನಟಿಸುವುದು ಸುಲಭ, ಆದರೆ ಅವರ ನಿರ್ದೇಶನದಲ್ಲಿ ಕ್ಯಾಮೆರಾ ಎದುರಿಸುವುದು ಕಷ್ಟ: ಕಾವ್ಯಾ ಶೆಟ್ಟಿ
ರವಿಚಂದ್ರನ್ ಸಿನಿಮಾದಲ್ಲಿ ನಾಯಕಿಯರ ಪಾತ್ರ ಕೇವಲ ಗ್ಲಾಮರ್ ಗೆ ಸೀಮಿತವಾಗಿವುದಿಲ್ಲ, ಅಭಿನಯದ ಕಾರ್ಯಕ್ಷಮತೆ ಕೂಡ ಇರುತ್ತದೆ ಎಂದು ಕಾವ್ಯಾ ಶೆಟ್ಟಿ ಹೇಳಿದ್ದಾರೆ. ಪ್ರಚಾರಕ್ಕೋಸ್ಕರ ಹಾಡಿನಲ್ಲಿ ಹೆಚ್ಚಿನ ಗ್ಲಾಮರ್ ಸೇರಿಸಲಾಗಿದೆ.
Published: 08th August 2022 01:26 PM | Last Updated: 08th August 2022 01:40 PM | A+A A-

ಕಾವ್ಯಾ ಶೆಟ್ಟಿ
ರವಿ ಬೋಪಣ್ಣಸಿನಿಮಾದಲ್ಲಿ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ಕಾವ್ಯಾ ಶೆಟ್ಟಿ ಪ್ರಪ್ರಥಮ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.
ರವಿಚಂದ್ರನ್ ಸಿನಿಮಾದಲ್ಲಿ ನಾಯಕಿಯರ ಪಾತ್ರ ಕೇವಲ ಗ್ಲಾಮರ್ ಗೆ ಸೀಮಿತವಾಗಿವುದಿಲ್ಲ, ಅಭಿನಯದ ಕಾರ್ಯಕ್ಷಮತೆ ಕೂಡ ಇರುತ್ತದೆ ಎಂದು ಕಾವ್ಯಾ ಶೆಟ್ಟಿ ಹೇಳಿದ್ದಾರೆ. ಪ್ರಚಾರಕ್ಕೋಸ್ಕರ ಹಾಡಿನಲ್ಲಿ ಹೆಚ್ಚಿನ ಗ್ಲಾಮರ್ ಸೇರಿಸಲಾಗಿದೆ.
ಆದರೆ ನಾನು ಸಿನಿಮಾದಲ್ಲಿ 25 ರಿಂದ 50ವರ್ಷದ ವಯಸ್ಸಿನ ಪಾತ್ರ ನಿರ್ವಹಿಸಿದ್ದೇನೆ, ಆಗಸ್ಟ್ 12 ರಂದು ರವಿಬೋಪಣ್ಣ ಸಿನಿಮಾ ರಿಲೀಸ್ ಆಗಲಿದ್ದು, ನಾನು ಮೊದಲು ರವಿ ಬೋಪಣ್ಣ ಅವರ ಸೆಟ್‌ಗೆ ಪ್ರವೇಶಿಸಿದಾಗ, ಅವರು ಶೂಟ್ ಮಾಡುತ್ತಿದ್ದ ದೃಶ್ಯಗಳನ್ನು ಅರ್ಥಮಾಡಿಕೊಳ್ಳಲು ನಾನು ಸಮಯ ತೆಗೆದುಕೊಂಡೆ ಎಂದು ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡಿದ್ದಾರೆ ಕಾವ್ಯಾ ಶೆಟ್ಟಿ.

ರವಿಚಂದ್ರನ್ ಸರ್ ನಮಗೆ ಸ್ಥಳದಲ್ಲೇ ಡೈಲಾಗ್ ಕೊಡಲು ಇಷ್ಟಪಡುತ್ತಾರೆ. ಏನೆಲ್ಲ ಸಿದ್ಧತೆಗಳು ಮತ್ತು ಸುಧಾರಣೆ ಇದ್ದರೂ ಅದನ್ನು ಆಗಲೇ ಮಾಡಬೇಕಿತ್ತು. ಅವರು ನಮಗೆ ಪ್ರತಿ ಅಭಿವ್ಯಕ್ತಿಯನ್ನು ತೋರಿಸುತ್ತಾರೆ ಮತ್ತು ಪಾತ್ರಕ್ಕೆ ಬೇಕಾದ ಬಾಡಿ ಲಾಂಗ್ವೇಜ್ ಕೂಡ ಹೇಳಿ ಕೊಡುತ್ತಾರೆ.
ಪರದೆಯ ಮೇಲೆ ಏನಾಗುತ್ತದೆ ಎಂಬುದರ ಸೂಕ್ಷ್ಮ ವಿವರಗಳು ಸಹ ಅವರ ಸೃಜನಶೀಲತೆಯಾಗಿದೆ. ರವಿ ಬೋಪಣ್ಣ ಸಿನಿಮಾದಿಂದ ಎಕ್ಸ್ ಪ್ರೆಸನ್ ಗಳನ್ನು ಹೇಗೆ ನಿಯಂತ್ರಿಸಬೇಕೆಂದು ನಾನು ಕಲಿತಿದ್ದೇನೆ, ಅವರ ಜೊತೆಯಲ್ಲಿ ನಟಿಸುವುದು ತುಂಬಾ ಸುಲಭ. ಆದರೆ ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದು ಕಷ್ಟಕರವಾಗಿದೆ ಏಕೆಂದರೆ ಅವರು ಆ ನಿಮಿಷದ ಪರಿಪೂರ್ಣತೆಯನ್ನು ಹುಡುಕುತ್ತಾರೆ. ಅವರ ಜೊತೆ ಕೆಲಸ ಮಾಡುವುದು ನನ್ನ ಇತರ ಚಿತ್ರಗಳಿಗಿಂತ ವಿಭಿನ್ನವಾದ ಅನುಭವವಾಗಿದೆ ಎಂದು ಕಾವ್ಯಾ ತಿಳಿಸಿದ್ದಾರೆ.
ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ರವಿ ಬೋಪಣ್ಣ' ಆಗಸ್ಟ್12 ರಂದು ಬಿಡುಗಡೆಗೆ ಸಿದ್ಧ
ಹಾಡಿನ ಶೂಟಿಂಗ್ ವೇಳೆ ನಾನು ಹಿಂಜರಿಯುತ್ತಿದ್ದೆ ಮತ್ತು ಭಯಗೊಂಡಿದ್ದೇನೆ ಏಕೆಂದರೆ , ಸಾಂಗ್ ಗೆ ಸೆಟ್‌ಗಳನ್ನು ಬೆಂಕಿಯಿಂದ ಅಲಂಕರಿಸಿದ್ದರು, ಸರಿಯಾದ ಕ್ಷಣಗಳಲ್ಲಿ ಶಾಟ್‌ಗಳನ್ನು ಚಿತ್ರೀಕರಿಸಬೇಕಾಗಿತ್ತು.
ನನ್ನ ಮುಖದ ಪಕ್ಕದಲ್ಲಿ ಬೆಂಕಿ ಇದೆ ಎಂದು ನಾನು ಭಾವಿಸಿದ್ದೆ, ಆದರೆ ಅವರು ಆತ್ಮವಿಶ್ವಾಸವನ್ನು ತುಂಬುತ್ತಿದ್ದರು. ಈ ಹಾಡಿನಲ್ಲಿ ಕೆಲಸ ಮಾಡುವುದರಿಂದ ಅವರಿಗೆ ಕ್ರೇಜಿ ಟ್ಯಾಗ್ ಎಲ್ಲಿಂದ ಬರುತ್ತದೆ ಎಂದು ನನಗೆ ಅರ್ಥವಾಯಿತು ಎಂದು ಕಾವ್ಯಾ ವಿವರಿಸಿದ್ದಾರೆ. ಇದೊಂದು ವಿಭಿನ್ನ ಅನುಭವ ಕೊಟ್ಟ ಸಿನಿಮಾವಾಗಿದೆ ಎಂದು ಹೇಳಿದ್ದಾರೆ.