ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ರವಿ ಬೋಪಣ್ಣ' ಆಗಸ್ಟ್12 ರಂದು ಬಿಡುಗಡೆಗೆ ಸಿದ್ಧ

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಬಹು ನಿರೀಕ್ಷಿತ 'ರವಿ ಬೋಪಣ್ಣ' ಸಿನಿಮಾ ರಿಲೀಸ್ ಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ.
ರವಿ ಬೋಪಣ್ಣ ಸ್ಟಿಲ್
ರವಿ ಬೋಪಣ್ಣ ಸ್ಟಿಲ್

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಬಹು ನಿರೀಕ್ಷಿತ 'ರವಿ ಬೋಪಣ್ಣ' ಸಿನಿಮಾ ರಿಲೀಸ್ ಗೆ ಕೊನೆಗೂ ದಿನಾಂಕ ಫಿಕ್ಸ್ ಆಗಿದೆ.

'ಕರ್ಮ ಈಸ್ ಕ್ರೇಜಿ' ಎಂಬ ಕುತೂಹಲಕಾರಿ ಅಡಿಬರಹದೊಂದಿಗೆ ತಯಾರಾಗಿರುವ ಈ ಸಿನಿಮಾ ಇನ್ ವೆಸ್ಟಿಗೇಷನ್ ಥ್ರಿಲ್ಲರ್ ಕಥೆ ಒಳಗೊಂಡಿದ್ದು ಆಗಸ್ಟ್ 12 ರಂದು ರಿಲೀಸ್ ಆಗಲಿದೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರ ಕೂಡ ಅಂದೇ ತೆರೆ ಕಾಣಲಿದೆ.

ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ ನಲ್ಲಿ ಸ್ವತಃ ರವಿಚಂದ್ರನ್ ಅವರೇ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಈಶ್ವರಿ ಪ್ರೊಡಕ್ಷನ್ ನ 50ನೇ ಸಿನಿಮಾವಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಅಂಗಾಂಗ ಕಳ್ಳ ಸಾಗಣೆ ದಂಧೆಯ ಸುತ್ತ ಕಥೆ ಹೆಣೆಯಲಾಗಿದೆ.

'ರವಿ ಬೋಪಣ್ಣ' ಚಿತ್ರಕ್ಕೆ ಸಂಗೀತ, ಸಂಯೋಜನೆ ಮಾಡಿ ಕಂಟೆಂಟ್ ಡಿಕ್ಟೇಟರ್ ಆಗಿರುವವರು ವಿ.ರವಿಚಂದ್ರನ್. ಚಿತ್ರಕ್ಕೆ ಜಿ.ಎಸ್.ವಿ.ಸೀತಾರಾಮ್ ಛಾಯಾಗ್ರಹಣ ಮಾಡಿದ್ದಾರೆ. ರವಿ ಬೋಪಣ್ಣ ಮತ್ತೊಂದು ಪ್ರೇಮಲೋಕವಾಗಿದೆ ಎಂದು ಹೇಳಿರುವ ರವಿಚಂದ್ರನ್ ಅವರೇ ಈ ಸಿನಿಮಾ ನಿರ್ದೇಶಕರಾಗಿದ್ದಾರೆ.

ರವಿ ಬೋಪಣ್ಣ' ಚಿತ್ರದಲ್ಲಿ ರವಿಚಂದ್ರನ್, ರಾಮಕೃಷ್ಣ, ಜೈ ಜಗದೀಶ್, ರವಿಶಂಕರ್ ಗೌಡ, ಮೋಹನ್, ಕಾವ್ಯ ಶೆಟ್ಟಿ ಅಭಿನಯಿಸಿದ್ದಾರೆ. ಸಿನಿಮಾದ ವಿಶೇಷ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿದ್ದಾರೆ. 'ರವಿ ಬೋಪಣ್ಣ' ಸಿನಿಮಾದಲ್ಲಿ ವಕೀಲನಾಗಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com