ಕಾಂತಾರ 2 ಮಾಡುವ ಯೋಚನೆ ಸದ್ಯಕ್ಕಿಲ್ಲ ಎಂದ ರಿಷಬ್, ಸೀಕ್ವೆಲ್ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ 'ದೈವ ನರ್ತಕ'!

'ಕಾಂತಾರ' ಖ್ಯಾತಿಯ ನಟ-ನಿರ್ದೇಶಕ-ಬರಹಗಾರ ರಿಷಬ್ ಶೆಟ್ಟಿ ಅವರೀಗ ಮಂದಿಯ ನಿದ್ದೆಗೆಡಿಸಿದ ಚಿತ್ರದ ಮುಂದುವರಿದ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ರಿಷಬ್ ಮಾತ್ರ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಹೀಗಿರುವಾಗ 'ದೈವ ನರ್ತಕ' ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.
ಕಾಂತಾರ ಚಿತ್ರದ ಫೋಸ್ಟರ್
ಕಾಂತಾರ ಚಿತ್ರದ ಫೋಸ್ಟರ್

ಬೆಂಗಳೂರು: 'ಕಾಂತಾರ' ಖ್ಯಾತಿಯ ನಟ-ನಿರ್ದೇಶಕ-ಬರಹಗಾರ ರಿಷಬ್ ಶೆಟ್ಟಿ ಅವರೀಗ ಮಂದಿಯ ನಿದ್ದೆಗೆಡಿಸಿದ ಚಿತ್ರದ ಮುಂದುವರಿದ ಭಾಗಕ್ಕೆ ತಯಾರಿ ನಡೆಸುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ, ರಿಷಬ್ ಮಾತ್ರ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಹೀಗಿರುವಾಗ 'ದೈವ ನರ್ತಕ' ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

'ದೈವ ನರ್ತಕ' ಉಮೇಶ್ ಗಂಧಕಾಡು ಅವರ ಪ್ರಕಾರ, ರಿಷಬ್ ಅವರು 'ಕಾಂತಾರ' ಸೀಕ್ವೆಲ್ ಮಾಡಲು ದೇವರ ಅನುಮತಿ ಕೋರಿದ್ದರು. ಜೊತೆಗೆ 'ಸ್ಥಳೀಯ ದೇವರು ತನ್ನ ಒಪ್ಪಿಗೆಯನ್ನು ನೀಡಿದ್ದಾನೆ' ಎಂದು ತಿಳಿಸಿದ್ದಾರೆ.

‘ಮಂಗಳೂರಿನಲ್ಲಿ ಪಂಜುರ್ಲಿ (ಸ್ಥಳೀಯ ಪದ್ದತಿ) ಸೇವೆಯನ್ನು ನಡೆಸುವಂತೆ ರಿಷಬ್ ಶೆಟ್ಟಿ ಕೇಳಿಕೊಂಡಿದ್ದರು. ಬಂದಲೆಯಲ್ಲಿರುವ ಮಡಿವಾಳಬೆಟ್ಟು ದೇವಸ್ಥಾನದಲ್ಲಿ ಈ ಸೇವೆ ಸಲ್ಲಿಸಿದ್ದೇನೆ’ ಎಂದು ‘ದೈವ ನರ್ತಕ’ ಹೇಳಿದ್ದಾರೆ.

'ಈ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ನಾನು 'ದೈವ ನರ್ತಕ'ನಾದಾಗ ಸ್ಥಳೀಯ ದೇವರು ಮಾತನಾಡುತ್ತಾನೆ ಮತ್ತು ನಾನಲ್ಲ' ಎಂದು ಗಂಧಕಾಡು ತಿಳಿಸಿದ್ದಾರೆ.

ಗಂಧಕಾಡು ತನ್ನ ‘ದೈವ ನರ್ತಕ’ ರೂಪದಲ್ಲಿ ಕೋರಿಕೆ ಸಲ್ಲಿಸಿದಾಗ, ದೇವರು ಒಪ್ಪಿಗೆ ಸೂಚಿಸಿದ್ದಾನೆ. ಹೆಚ್ಚಿನ ಕಾಳಜಿಯಿಂದ ಕಾಂತಾರ ಸೀಕ್ವೆಲ್ ಮಾಡಲು ಮತ್ತು ಯಾತ್ರಾ ಕೇಂದ್ರದ ಉಸ್ತುವಾರಿ, ಬಿಜೆಪಿಯ ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗಡೆ ಅವರನ್ನು ಭೇಟಿ ಮಾಡಲು ದೇವರು ಸೂಚಿಸಿದ್ದಾರೆ. ಅಣ್ಣಪ್ಪ ಪಂಜುರ್ಲಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವಂತೆ ದೇವರು ರಿಷಬ್ ಶೆಟ್ಟಿಯವರಿಗೆ ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com