ಬೇಷರಂ ರಂಗ್ ವಿವಾದ: ಅಕ್ಷಯ್-ಕತ್ರಿನಾಗೆ ಇಲ್ಲದ 'ಕೇಸರಿ' ವಿರೋಧ ಶಾರುಖ್-ದೀಪಿಕಾಗೆ ಯಾಕೆ? ನೆಟ್ಟಿಗರ ಮರು ಪ್ರಶ್ನೆ!
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಚಿತ್ರದ 'ಬೇಷರಂ ರಂಗ್' ಹಾಡು ಇದೀಗ ವಿವಾದಕ್ಕೆ ಕಾರಣವಾಗಿದ್ದು ಚಿತ್ರದಲ್ಲಿನ ಅಶ್ಲೀಲ ಉಡುಪು ಇದೀಗ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.
Published: 15th December 2022 03:26 PM | Last Updated: 15th December 2022 03:26 PM | A+A A-

ದೀಪಿಕಾ-ಶಾರುಖ್-ಅಕ್ಷಯ್-ಕತ್ರಿನಾ
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಪಠಾಣ್' ಚಿತ್ರದ 'ಬೇಷರಂ ರಂಗ್' ಹಾಡು ಇದೀಗ ವಿವಾದಕ್ಕೆ ಕಾರಣವಾಗಿದ್ದು ಚಿತ್ರದಲ್ಲಿನ ಅಶ್ಲೀಲ ಉಡುಪು ಇದೀಗ ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.
ಪಿಟಿಐ ಪ್ರಕಾರ, ವೀರ ಶಿವಾಜಿ ಎಂಬ ಆಂದೋಲನದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ನಟ ಶಾರುಖ್ ಖಾನ್ ಅವರ ಪ್ರತಿಕೃತಿಗಳನ್ನು ದಹಿಸಲಾಗಿದೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಆಕ್ರಮಣಕಾರಿ ರೂಪವನ್ನು ಪಡೆದುಕೊಂಡಿದೆ. ಶಾರುಖ್ ಮತ್ತು ದೀಪಿಕಾ ಅವರನ್ನು ಬೆಂಬಲಿಸುತ್ತಿರುವ ನೆಟಿಜನ್‌ಗಳು ನಿಷೇಧದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಾರಿ ಅಕ್ಷಯ್ ಕುಮಾರ್ ಅವರ ಫೋಟೋ ಕೂಡ ವೈರಲ್ ಆಗಿದೆ.
क्या आप इस पोज़, ड्रेस से comfortable महसूस कर पा रहे हैं @drnarottammisra actor @akshaykumar actress- katrina Kaif, movie- de dana dan pic.twitter.com/byFsIDiPOa
— Rakesh Ranjan (@cartoonistrrs) December 14, 2022
#BoycottBesharamRang #BoycottDeepika, #BoycottShahrukhKhan ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದರೆ, ಕೆಲವರು ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅವರ ಫೋಟೋವನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ. ಅಕ್ಷಯ್ ಕುಮಾರ್ ಕೇಸರಿ ಸೀರೆಯಲ್ಲಿ ಕತ್ರಿನಾ ಅವರನ್ನು ಚುಂಬಿಸುವುದು ಅಶ್ಲೀಲ ಅಲ್ಲವಾ? ನೆಟಿಜನ್ ಗಳು ಮರು ಪ್ರಶ್ನೆ ಎತ್ತುತ್ತಿದ್ದಾರೆ.
इस गाने के रंग हमारी संस्कृति को जोड़ कर रखते है @akshaykumar #KatrinaKaif one of my favourite song #Gerua #Bhagwa #PathaanFirstDayFirstShow #Pathaan pic.twitter.com/P5Xg5lSptI
— Ishu Samar (The Dollywood Reporter) (@IshuSamarLive) December 14, 2022
ದೇ ದಾನಾ ದಾನ್ ಚಿತ್ರದ ಗಲೇ ಲಗ್ ಜಾ ಹಾಡಿನಲ್ಲಿ ಕೇಸರಿ ಬಣ್ಣದ ಸೀರೆಯುಟ್ಟು ಡ್ಯಾನ್ಸ್ ಮಾಡಿದ್ದಾರೆ. ಇದು ಬಿಕಿನಿನಾ ಎಂದು ಕೆಲ ನೆಟ್ಟಿಗರು ಮರುಪ್ರಶ್ನೆ ಮಾಡುತ್ತಿದ್ದಾರೆ.
ಈ ಮಧ್ಯೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡ ಚಿತ್ರದಲ್ಲಿ ದೀಪಿಕಾ ಬಿಕಿನಿ ತೊಟ್ಟ ಹಾಡಿನ ಸಾಹಿತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಪಠಾಣ್ ಚಿತ್ರವು ದೋಷಪೂರಿತವಾಗಿದೆ ಮತ್ತು ವಿಷಕಾರಿ ಮನಸ್ಥಿತಿಯನ್ನು ಆಧರಿಸಿದೆ. ಕೇಸರಿ, ಹಸಿರು ಬಟ್ಟೆ ತೊಟ್ಟಿರುವ ನಿರ್ಮಾಪಕರು ‘ಬೇಷರಂ ರಂಗ’ ಹಾಡಿನ ಸಾಹಿತ್ಯ ಮತ್ತು ಹಾಡನ್ನು ಬದಲಾಯಿಸುವುದು ಅಗತ್ಯ. ಮಧ್ಯಪ್ರದೇಶದಲ್ಲಿ ಚಿತ್ರವನ್ನು ಪ್ರದರ್ಶಿಸಲು ಬಿಡಬೇಕೆ ಅಥವಾ ಬೇಡವೇ ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.