ಹಿನ್ನೋಟ 2022: ಕೆಜಿಎಫ್ 2 ನಿಂದ ಕಾಂತಾರ- 2022 ರಲ್ಲಿ 100 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು

ವಿಮರ್ಶಕರು, ಪ್ರೇಕ್ಷಕರು ಮತ್ತು ಸಿನಿಮಾ ಪಂಡಿತರು ಒಟ್ಟಾಗಿ 2022 ಸ್ಯಾಂಡಲ್‌ವುಡ್‌ಗೆ ಸುವರ್ಣ ಯುಗದ ಆರಂಭ ಎಂದು ಕರೆದಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕನ್ನಡ ಚಿತ್ರಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಾನ್ಯತೆ ಸಿಕ್ಕಿದೆ.
ಕಾಂತಾರ - ಕೆಜಿಎಫ್ 2 ಪೋಸ್ಟರ್
ಕಾಂತಾರ - ಕೆಜಿಎಫ್ 2 ಪೋಸ್ಟರ್

ವಿಮರ್ಶಕರು, ಪ್ರೇಕ್ಷಕರು ಮತ್ತು ಸಿನಿಮಾ ಪಂಡಿತರು ಒಟ್ಟಾಗಿ 2022 ಸ್ಯಾಂಡಲ್‌ವುಡ್‌ಗೆ ಸುವರ್ಣ ಯುಗದ ಆರಂಭ ಎಂದು ಕರೆದಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕನ್ನಡ ಚಿತ್ರಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಾನ್ಯತೆ ಸಿಕ್ಕಿದೆ. ಪ್ರಪಂಚದಾದ್ಯಂತ ಗಮನ ಸೆಳೆಯುವುದರಿಂದ ಹಿಡಿದು ಬಾಕ್ಸ್ ಆಫೀಸ್‌ನಲ್ಲಿ ಕೋಟಿಗಟ್ಟಲೆ ಗಳಿಸುವವರೆಗೆ ಗುಣಮಟ್ಟದ ವಿಷಯವನ್ನು ತಲುಪಿಸುವವರೆಗೆ, ಸ್ಯಾಂಡಲ್‌ವುಡ್ ಸಿನಿಮಾಗಳು ಯಶಸ್ಸಿಗೆ ಸಮಾನಾರ್ಥಕವಾಗಿವೆ. ಕನ್ನಡ ಚಿತ್ರೋದ್ಯಮ ಈ ಸಾಧನೆ ಮಾಡಲು 84 ವರ್ಷಗಳನ್ನು ತೆಗೆದುಕೊಂಡಿತು ಮತ್ತು ಈ ಪಟ್ಟಿಗೆ ಏಳು ಚಿತ್ರಗಳನ್ನು ಸೇರಿಸಲು ಕೇವಲ ನಾಲ್ಕು ವರ್ಷಗಳು ಬೇಕಾಯಿತು. ಈ ವರ್ಷವೇ ಐದು ಚಿತ್ರಗಳು 100 ಕೋಟಿ ಕ್ಲಬ್‌ಗೆ ಸೇರ್ಪಡೆಗೊಂಡಿವೆ.

ಕೆಜಿಎಫ್ ಚಾಪ್ಟರ್ 2 (2022ರ ಏಪ್ರಿಲ್‌ನಲ್ಲಿ ಬಿಡುಗಡೆ)

ಏಪ್ರಿಲ್‌ನಲ್ಲಿ ಬಿಡುಗಡೆಯಾದ ಯಶ್ ಮತ್ತು ಪ್ರಶಾಂತ್ ನೀಲ್ ಅವರ ಕಾಂಬಿನೇಶನ್‌ನಲ್ಲಿ ಮೂಡಿಬಂದ ಕೆಜಿಎಫ್ 2 ಈ ವರ್ಷ ಭಾರತದಾದ್ಯಂತ 1,000 ಕೋಟಿ ರೂ. ಕಲೆಕ್ಷನ್ ಮಾಡಿದ ಮೊದಲ ಚಿತ್ರವಾಗಿದೆ. ಎರಡು ಭಾಗಗಳ ಈ ಸಿನಿಮಾವು ರಾಜಾ ಕೃಷ್ಣಪ್ಪ ಬೈರಿಯಾ ಅಲಿಯಾಸ್ ರಾಕಿ ಭಾಯಿಯ ಕಥೆಯನ್ನು ವಿವರಿಸುತ್ತದೆ. ಸಿನಿಮಾವು ತಾಯಿಯ ಭಾವನೆ, ಚಿನ್ನದ ಕಳ್ಳಸಾಗಣೆ ಮತ್ತು ಅದರ ಸುತ್ತಲಿನ ರಾಜಕೀಯದೊಂದಿಗೆ ಹೆಣೆದುಕೊಂಡಿದೆ. ಕೆಜಿಎಫ್ 3 ಮಾಡುವಂತೆ ಭಾರಿ ಕೂಗು ಎದ್ದಿದೆ. ಆದಾಗ್ಯೂ, ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಕೆಜಿಎಫ್ 2 ಮಾತ್ರ ವಿಶ್ವದಾದ್ಯಂತ 1,250 ಕೋಟಿ ರೂ. ಗಳನ್ನು ಗಳಿಸಿದರೆ, ಫ್ರ್ಯಾಂಚೈಸ್ ಒಟ್ಟಾರೆಯಾಗಿ 1,500 ಕೋಟಿ ರೂ. ಗಳಿಸಿದೆ. ಕನ್ನಡದಲ್ಲಿ 2022ರಲ್ಲಿ 100 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ.

ಕಾಂತಾರ (2022ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ)

16 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ ಕಾಂತಾರ ಚಿತ್ರವು ಬಿಡುಗಡೆಯಾದ 50 ದಿನಗಳ ನಂತರವೂ ಗಲ್ಲಾಪೆಟ್ಟಿಗೆಯಲ್ಲಿ ರಿಂಗಣಿಸುತ್ತಲೇ ಇದೆ. ಸೆಪ್ಟೆಂಬರ್ 30 ರಂದು ತೆರೆಕಂಡ ಈ ಚಿತ್ರವು ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆದರೆ, ಭಾರಿ ಬೇಡಿಕೆಯ ಕಾರಣದಿಂದ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ತುಳು ಭಾಷೆಗಳಿಗೆ ಡಬ್ ಆಗಿದ್ದು, ವಿಶ್ವದಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿದೆ. ಕಾಂತಾರ ಸಿನಿಮಾ ಸಾರ್ವಕಾಲಿಕ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ಕಥಾವಸ್ತುವು ಮನುಷ್ಯ-ಪ್ರಕೃತಿಯ ಸಂಘರ್ಷದ ಸುತ್ತ ಸುತ್ತುತ್ತದೆ. ಇದನ್ನು ಕೆಜಿಎಫ್ ಫ್ರಾಂಚೈಸ್ ಬ್ಯಾನರ್‌ನ ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

ವಿಕ್ರಾಂತ್ ರೋಣ (2022ರ ಜುಲೈನಲ್ಲಿ ಬಿಡುಗಡೆ)

ಕಿಚ್ಚ ಸುದೀಪ್ ಅಭಿನಯದ ರಂಗಿತರಂಗದ ನಿರ್ದೇಶಕ ಅನುಪ್ ಭಂಡಾರ ನಿರ್ದೇಶಿಸಿದ ಚಿತ್ರ ವಿಕ್ರಾಂತ್ ರೋಣ. ಬಾಕ್ಸ್‌ ಆಫೀಸ್‌ನಲ್ಲಿ ಚಿತ್ರವು ಭರ್ಜರಿ ಕಲೆಕ್ಷನ್ ಮಾಡಿದ್ದು, 100 ಕೋಟಿ ಕ್ಲಬ್‌ಗೆ ಸೇರಿತು. ಜುಲೈನಲ್ಲಿ ಬಿಡುಗಡೆಯಾದ ಪ್ಯಾನ್-ಇಂಡಿಯಾ ಸಿನಿಮಾ ವಿಶ್ವದಾದ್ಯಂತ 158.5 ಕೋಟಿ ರೂ. ಗಳನ್ನು ಗಳಿಸಿತು. ಚಿತ್ರವು 80ರ ದಶಕದಲ್ಲಿ ನಡೆಯುವ ಕಥೆಯನ್ನು ಹೊಂದಿದೆ ಮತ್ತು ಮಕ್ಕಳ ನಾಪತ್ತೆ ಪ್ರಕರಣವನ್ನು ತನಿಖೆ ಮಾಡಲು ಸಣ್ಣ ಪಟ್ಟಣಕ್ಕೆ ಭೇಟಿ ನೀಡುವ ಪೊಲೀಸ್ ಅಧಿಕಾರಿ ವಿಕ್ರಾಂತ್ ರೋಣ ಅವರ ಕಥೆಯನ್ನು ವಿವರಿಸುತ್ತದೆ.

ಜೇಮ್ಸ್ (2022ರ ಮಾರ್ಚ್‌ನಲ್ಲಿ ಬಿಡುಗಡೆ)

ಮಾರ್ಚ್‌ನಲ್ಲಿ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ಅವರ ಅಂತಿಮ ಆಕ್ಷನ್-ಥ್ರಿಲ್ಲರ್ ಚಿತ್ರವಾದ ಜೇಮ್ಸ್, ಭರ್ಜರಿ ಕಲೆಕ್ಷನ್ ಮಾಡಿತು. ಹಲವಾರು ಗಲ್ಲಾಪೆಟ್ಟಿಗೆಯ ದಾಖಲೆಗಳನ್ನು ಪುಡಿಮಾಡಿತು. ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಚಿತ್ರವು 100 ಕೋಟಿ ರೂಪಾಯಿ ಗಳಿಸುವ ಮೂಲಕ ಅತ್ಯಂತ ವೇಗವಾಗಿ 100 ಕೋಟಿ ಕ್ಲಬ್‌ಗೆ ಸೇರಿದ ಕನ್ನಡ ಚಿತ್ರ ಎನಿಸಿಕೊಂಡಿತು. ಪ್ರಪಂಚದಾದ್ಯಂತ ಭಾರಿ ಪ್ರತಿಕ್ರಿಯೆಯೊಂದಿಗೆ ಜೇಮ್ಸ್ ದೇಶದಾದ್ಯಂತ 151 ಕೋಟಿ ರೂ. ಗಳಿಸಿತು.

777 ಚಾರ್ಲಿ (2022ರ ಜೂನ್‌ನಲ್ಲಿ ಬಿಡುಗಡೆ)

ಜೂನ್‌ನಲ್ಲಿ ಬಿಡುಗಡೆಯಾದ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿಯು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿತು. ಭಾವನಾತ್ಮಕವಾಗಿದ್ದ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಅವರ ನಟನೆಗೆ ಪ್ರಶಂಸೆ ವ್ಯಕ್ತವಾಯಿತು. ರಕ್ಷಿತ್ ಮತ್ತು ಚಾರ್ಲಿ ಎಂಬ ಹೆಸರಿನ ಲ್ಯಾಬ್ರಡಾರ್‌ನ ಅತ್ಯುತ್ತಮ ಸಂಬಂಧ ಪ್ರೇಕ್ಷಕರಿಗೆ ಇಷ್ಟವಾಯಿತು. ಈ ಚಿತ್ರವು 105 ಕೋಟಿ ರೂ. ಗಳಿಸಿತು. ಇದು ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಐದನೇ ಕನ್ನಡ ಚಲನಚಿತ್ರವಾಗಿದೆ.

2018 ರಲ್ಲಿ ಗೋಲ್ಡನ್ ರನ್ ಪ್ರಾರಂಭ

ಕೆಜಿಎಫ್ ಚಾಪ್ಟರ್ 1, 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಮೊದಲ ಚಿತ್ರ. ಈ ಚಿತ್ರವು ವಿಶ್ವದಾದ್ಯಂತ 250 ಕೋಟಿ ರೂ. ಗಳಿಸಿದೆ. ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ (2021) 102 ಕೋಟಿ ರೂ. ಗಳಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com