'ಬಾಲಿವುಡ್ ಸಾಂಗ್ಸ್ ಹೆಚ್ಚು ರೊಮ್ಯಾಂಟಿಕ್..ಸೌತ್ ಸಿನಿಮಾಗಳಲ್ಲಿ ಮಸಾಲೆ, ಐಟಂ ಸಾಂಗ್ ಗಳು ಹೆಚ್ಚು': ಮತ್ತೆ ಟ್ರೋಲ್ ಗೆ ಗುರಿಯಾದ ರಶ್ಮಿಕಾ ಮಂದಣ್ಣ!
ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುವ ನಟಿ. ಸಕಾರಣವಲ್ಲದೆ, ಹಲವು ವಿವಾದಾತ್ಮಕ ಮಾತುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗುತ್ತಾರೆ, ಅಷ್ಟೇ ಏಕೆ ದಕ್ಷಿಣದ ಸಿನಿಪ್ರಿಯರ ವಿಶೇಷವಾಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ.
ಅವರ ಬಹುನಿರೀಕ್ಷಿತ ಮಿಷನ್ ಮಜ್ನು ಚಿತ್ರ ಜನವರಿ 19ರಂದು ನೇರವಾಗಿ ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಿದ್ದು ಈಗ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್ ನಲ್ಲಿನ ಹಾಡುಗಳಿಗೂ ದಕ್ಷಿಣ ಚಿತ್ರರಂಗದ ಹಾಡುಗಳಿಗೂ ಇರುವ ವ್ಯತ್ಯಾಸಗಳನ್ನು ಹೇಳಿ ಮತ್ತೊಮ್ಮೆ ಟ್ರೋಲ್ ಗೆ ತುತ್ತಾಗಿದ್ದಾರೆ. ದಕ್ಷಿಣ ಭಾರತದ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ.
ಮಿಷನ್ ಮಜ್ನು ಹಾಡಿನ ಬಿಡುಗಡೆ ಸಮಾರಂಭದಲ್ಲಿ, ರಶ್ಮಿಕಾ ಮಂದಣ್ಣ ಬಾಲಿವುಡ್ ಹಾಡುಗಳನ್ನು ಹಾಡಿಹೊಗಳಿದ್ದಾರೆ. ನಾನು ಚಿಕ್ಕವಳಿದ್ದಾಗಿನಿಂದ ಬೆಳೆಯುತ್ತಾ ಬಾಲಿವುಡ್ ರೊಮ್ಯಾಂಟಿಕ್ ಹಾಡುಗಳನ್ನು ನೋಡುತ್ತಿದ್ದೇನೆ. ಬಾಲಿವುಡ್ ಹಾಡುಗಳು ಹೆಚ್ಚು ರೋಮ್ಯಾಂಟಿಕ್ ಆಗಿವೆ. ದಕ್ಷಿಣದಲ್ಲಿ ಹೆಚ್ಚು ಮಾಸ್ ಮತ್ತು ಐಟಂ ಹಾಡುಗಳಿವೆ ಎಂದಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗದ ಅಭಿಮಾನಿಗಳು ಇದೀಗ ರಶ್ಮಿಕಾ ಮಂದಣ್ಣ ಅವರನ್ನು ಟ್ವಿಟರ್‌ನಲ್ಲಿ ನಿಂದಿಸುತ್ತಿದ್ದಾರೆ. ರಶ್ಮಿಕಾ ದಕ್ಷಿಣದಲ್ಲಿ ಎಂದಿಗೂ ‘ಪರಿಣಾಮಕಾರಿ ರೊಮ್ಯಾಂಟಿಕ್ ಹಾಡುಗಳು’ ಇರಲಿಲ್ಲ ಎಂದು ಭಾವಿಸುತ್ತಾರೆ, ‘ಬಾಲಿವುಡ್ ಗೆಲ್ಲುತ್ತದೆ ಎಂದು ಹೇಳುತ್ತಾರೆ. ಎಷ್ಟು ಭಯಾನಕ ವಿಷಯ, ಸತ್ಯಗಳನ್ನು ಸಂಪೂರ್ಣವಾಗಿ ಮರೆತುಬಿಟ್ಟಂತೆ ಹೇಳುತ್ತಾರೆ, ಹೀಗೆ ಹೇಳುವ ರಶ್ಮಿಕಾ ಇತ್ತೀಚೆಗೆ ಬಾಲಿವುಡ್ ನಲ್ಲಿ ಹಿಟ್ ಆದ ಒಂದು ಚಿತ್ರದ ಹೆಸರು ಹೇಳಲಿ ನೋಡೋಣ, ಇತ್ತೀಚೆಗೆ ದಕ್ಷಿಣದ ಪ್ಯಾನ್ ಇಂಡಿಯಾ ಚಿತ್ರಗಳೇ ಗೆಲ್ಲುತ್ತಿವೆ ಎನ್ನುತ್ತಿದ್ದಾರೆ.
ರಶ್ಮಿಕಾ ತನ್ನ ಮೂರ್ಖತನವನ್ನು ಜಗತ್ತಿಗೆ ಬಹಿರಂಗಪಡಿಸಿದ್ದಾರೆ ಎಂದು ಮತ್ತೊಬ್ಬರು ಬರೆದಿದ್ದಾರೆ, “ರಶ್ಮಿಕಾ ನಿಮಗೆ ಅರ್ ರೆಹಮಾನ್ ಹಾಡುಗಳ ಬಗ್ಗೆ ಗೊತ್ತಿಲ್ಲವೇ…, ಇಳಯರಾಜ ಹಾಡುಗಳು .ಅವರು ಮಾಸ್ ಮತ್ತು ಐಟಂ ತೆಲುಗು ಹಾಡುಗಳೆಂದು ಹೇಳಬೇಕು. ಬಾಲಿವುಡ್ ಹೆಚ್ಚು ಐಟಂಗಳ ಹಾಡುಗಳನ್ನು ಹೊಂದಿದ್ದು ಅವು ವಿಕೃತವಾಗಿವೆ ಎಂದಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ಪ್ರೊಡಕ್ಷನ್ ಹೌಸ್ ಹೆಸರು ಹೇಳದ ಕಾರಣಕ್ಕೆ ವಿವಾದಕ್ಕೆ ಒಳಗಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ