'ವಿಕ್ರಾಂತ್ ರೋಣ' ಎರಡನೇ ಲಿರಿಕಲ್ ಹಾಡು 'ರಾಜಕುಮಾರಿ' ಬಿಡುಗಡೆ
ಬಹುನಿರೀಕ್ಷಿತ ಕನ್ನಡದ ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಲಿರಿಕಲ್ ಹಾಡು ಬಿಡುಗಡೆಯಾಗಿದೆ. ರಾಜಕುಮಾರಿ ಎಂಬ ಲಾಲಿ ಹಾಡು ಬಿಡುಗಡೆಯಾಗಿದ್ದು, ಇದ್ದು ಅಪ್ಪ-ಮಗಳ ನಡುವಿನ ಬಾಂಧವ್ಯವನ್ನು ಸಾರುತ್ತದೆ.
Published: 02nd July 2022 11:04 PM | Last Updated: 02nd July 2022 11:07 PM | A+A A-

ಕಿಚ್ಚ ಸುದೀಪ್
ಬೆಂಗಳೂರು: ಬಹುನಿರೀಕ್ಷಿತ ಕನ್ನಡದ ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಲಿರಿಕಲ್ ಹಾಡು ಬಿಡುಗಡೆಯಾಗಿದೆ. ರಾಜಕುಮಾರಿ ಎಂಬ ಲಾಲಿ ಹಾಡು ಬಿಡುಗಡೆಯಾಗಿದ್ದು, ಇದ್ದು ಅಪ್ಪ-ಮಗಳ ನಡುವಿನ ಬಾಂಧವ್ಯವನ್ನು ಸಾರುತ್ತದೆ.
ಅನೂಪ್ ಭಂಡಾರಿ ಅವರ ಸಾಹಿತ್ಯವಿರುವ ಈ ಹಾಡಿಗೆ ಗಾಯಕ ವಿಜಯ್ ಪ್ರಕಾಶ್ ದನಿಗೂಡಿಸಿದ್ದಾರೆ. ಬಿ.ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಪ್ರೊಸಿಕ್ ಪ್ರೊಗ್ರಾಮಿಂಗ್ ಹಾಗೂ ಅರೇಜ್ಮೆಂಟ್ ಈ ಹಾಡಿಗಿದೆ.
ಇದನ್ನೂ ಓದಿ:'ವಿಕ್ರಾಂತ್ ರೋಣ' ಟ್ರೇಲರ್ ಶೇರ್ ಮಾಡಿದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್!
ರಾಜಕುಮಾರಿ ಹಾಡಿನ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ವಿಕ್ರಾಂತ್ ರೋಣ ಆಲ್ಬಂನಲ್ಲಿರುವ ನನ್ನ ಫೇವರಿಟ್ ಹಾಡು ಇಲ್ಲಿದೆ. ಈ ಹಾಡು ನಿಜಕ್ಕೂ ನನ್ನ ಮನಮುಟ್ಟಿದೆ. ಈ ಹಾಡಿನ ಮೇಕಿಂಗ್ ವೇಳೆ ನಾನು ತುಂಬಾ ಎಂಜಾಯ್ ಮಾಡಿದ್ದೆ ಎಂದು ಹೇಳಿದ್ದಾರೆ.
'His Arrival Is The Beginning of A New Chapter'
— Kichcha Sudeepa (@KicchaSudeep) June 23, 2022
Official #VikrantRonaTrailer -https://t.co/v5TyUav2LA#VikrantRonaJuly28 @anupsbhandari @nirupbhandari @JackManjunath @shaliniartss @InvenioF @ZeeStudios_ @LahariMusic @SKFilmsOfficial #VRonJuly28