ಮೈಸೂರಿನ ಹೊಟೇಲ್ ನಲ್ಲಿ ನರೇಶ್-ಪವಿತ್ರಾ ಲೋಕೇಶ್: ಚಪ್ಪಲಿಯಲ್ಲಿ ಹೊಡೆಯಲು ಮುಂದಾದ ರಮ್ಯಾ ರಘುಪತಿ; ಹೈಡ್ರಾಮಾ

ತೆಲುಗಿನ ಸ್ಟಾರ್ ನಟ ನರೇಶ್ ಹಾಗೂ ಅವರ ಪತ್ನಿ ರಮ್ಯಾ ರಘುಪತಿ ನಡುವಣ ಕಲಹ ಹಾದಿರಂಪ-ಬೀದಿರಂಪವಾಗಿದೆ. ಇದಕ್ಕೆಲ್ಲಾ ಕಾರಣ ಬಹುಭಾಷಾ ನಟಿ ಕನ್ನಡ ಮೂಲದ ಪವಿತ್ರಾ ಲೋಕೇಶ್ಎಂದು ರಮ್ಯಾ ರಘುಪತಿ ನೇರವಾಗಿ ಆರೋಪ ಮಾಡುತ್ತಿದ್ದರು.
ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್(ಸಂಗ್ರಹ ಚಿತ್ರ)
ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್(ಸಂಗ್ರಹ ಚಿತ್ರ)

ಮೈಸೂರು: ತೆಲುಗಿನ ಸ್ಟಾರ್ ನಟ ನರೇಶ್ (Actor Naresh) ಹಾಗೂ ಅವರ ಪತ್ನಿ ರಮ್ಯಾ ರಘುಪತಿ (Ramya Raghupati) ನಡುವಣ ಕಲಹ ಹಾದಿರಂಪ-ಬೀದಿರಂಪವಾಗಿದೆ. ಇದಕ್ಕೆಲ್ಲಾ ಕಾರಣ ಬಹುಭಾಷಾ ನಟಿ ಕನ್ನಡ ಮೂಲದ ಪವಿತ್ರಾ ಲೋಕೇಶ್ (Pavitra Lokesh) ಎಂದು ರಮ್ಯಾ ರಘುಪತಿ ನೇರವಾಗಿ ಆರೋಪ ಮಾಡುತ್ತಿದ್ದರು.

ಇಷ್ಟು ದಿನ ಬೆಂಗಳೂರಿನಲ್ಲಿ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದ ಮೂವರ ವಿಷಯ ಈಗ ಮೈಸೂರಿಗೆ ತಲುಪಿದೆ. ಕಳೆದ ರಾತ್ರಿ ಮೈಸೂರಿನ ಹೊಟೇಲ್ ನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ರೂಂ ಮಾಡಿಕೊಂಡು ಒಂದೇ ಕೊಠಡಿಯಲ್ಲಿ ತಂಗಿದ್ದಾರೆ ಎಂಬ ಸುಳಿವು ಸಿಕ್ಕ ತಕ್ಷಣ ತನ್ನ ಗಂಡ ಬಣ್ಣ ಬಯಲು ಮಾಡಬೇಕೆಂದು ಹಠದಿಂದ ರಾತ್ರೋ ರಾತ್ರಿ ರಮ್ಯಾ ರಘುಪತಿ ಮೈಸೂರಿನ ಹೊಟೇಲ್ ಗೆ ತೆರಳಿದರು. 

ಅಲ್ಲಿ ರಾತ್ರಿಯಿಡೀ ಹೊಟೇಲ್ ನ ಮುಂದೆ ಕಾದು ನಿಂತು ಬೆಳಗ್ಗೆಯಾದ ತಕ್ಷಣ ಬಾಗಿಲು ಬಡಿದರು. ಆ ಹೊತ್ತಿಗೆ ಅಲ್ಲಿಗೆ ಪೊಲೀಸರು, ಮಾಧ್ಯಮದವರು ಬಂದಿದ್ದರು. ರಮ್ಯಾ ರಘುಪತಿ ಕೈಯಲ್ಲಿ ಚಪ್ಪಲಿ ಹಿಡಿದು ನಿಂತಿದ್ದರು. ಎಷ್ಟು ಹೊತ್ತಿಗೆ ಹೊರಗೆ ಬರುತ್ತಾರೆ ಎಂದು ನೋಡುತ್ತಿದ್ದರು. 

ಕೊನೆಗೂ ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ರೂಂನಿಂದ ಹೊರಗೆ ಬಂದರು. ಆ ಹೊತ್ತಿಗೆ ರಮ್ಯಾ ಚಪ್ಪಲಿಯಲ್ಲಿ ಹೊಡೆಯಲು ಮುಂದಾದಾಗ ಪೊಲೀಸರು ತಡೆದರು. ನರೇಶ್ ನಗುತ್ತಾ ಕೇಕೆ ಹಾಕುತ್ತಾ ಜಯದ ಸಂಕೇತ ತೋರಿಸುತ್ತಾ ನೀನು ಮೋಸಗಾರ್ತಿ, ನೀನು ಸುಳ್ಳುಗಾರ್ತಿ ಎಂದು ಕೂಗುತ್ತಾ ಹೊರಬಂದರೆ ಪವಿತ್ರಾ ಲೋಕೇಶ್ ಅವರನ್ನು ಅನುಸರಿಸಿಕೊಂಡು ಹೋಗಿ ಕಾರು ಹತ್ತಿ ಅಲ್ಲಿಂದ ತೆರಳಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ರಮ್ಯಾ ರಘುಪತಿ, ತಾವು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದೆ ಎಂದು ಅವರಿಗೆ ಮುಜುಗರವಾಗಿದೆ. ತಮ್ಮ ಪಾಪಪ್ರಜ್ಞೆಯನ್ನು ಮುಚ್ಚಿಹಾಕಲು ನಗುತ್ತಾ ಕೇಕೆ ಹಾಕುತ್ತಾ ಹೋಗಿದ್ದಾರೆ. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಅವರು ನಗುತ್ತಾ ಹೋಗಿದ್ದು ಅದುವೇ ನನ್ನ ಮೊದಲ ಜಯ ಎಂದರು.

ನಾನು ಡಿವೋರ್ಸ್ ನೊಟೀಸ್ ವಿರುದ್ಧ ಕಾನೂನುಬದ್ಧವಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇನೆ. ನನಗೆ ನ್ಯಾಯ ಸಿಗಬೇಕು, ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದು, ಹಿಂದೂ ಸಂಸ್ಕೃತಿಯಲ್ಲಿ ನಂಬಿಕೆಯಿಟ್ಟಿರುವವಳು ನಾನು, ನನಗೆ ವಿಚ್ಛೇದನ ಬೇಡ, ಕಷ್ಟ-ಸುಖ ಅನುಭವಿಸಿಕೊಂಡು ಹೋಗುತ್ತೇನೆ. ನಮಗೆ ಮಗ ಇದ್ದಾನೆ, ಅವನಿಗೆ ತಂದೆ-ತಾಯಿ ಇಬ್ಬರೂ ಬೇಕು, ನನಗೆ ಅನ್ಯಾಯವಾಗಿದೆ. ನ್ಯಾಯಕ್ಕಾಗಿ ನಾನೊಬ್ಬಳೇ ಹೋರಾಡುತ್ತೇನೆ. ನನ್ನ ಕುಟುಂಬದ ರಾಜಕೀಯ ಹಿನ್ನೆಲೆ ನೋಡಿಕೊಂಡು ಮದುವೆಯಾಗಿದ್ದರು. ಆದರೆ ರಾಜಕೀಯವಾಗಿ ಅವರಿಗೆ ಸಹಾಯವಾಗಲಿಲ್ಲ ಎಂದ ಮೇಲೆ ನನಗೆ ಈ ರೀತಿ ಪರಿಸ್ಥಿತಿಯಾಗಿದೆ. ನನ್ನ ಅತ್ತೆ ಅಂದರೆ ನರೇಶ್ ತಾಯಿ ಇರುತ್ತಿದ್ದರೆ ನನಗೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನೊಂದುಕೊಂಡು ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com