'ವಿಕ್ರಾಂತ್ ರೋಣಾ'ದ ತೆರೆ ಹಿಂದಿನ ಹಿರೋಗಳು ಇವರು...

ಶಾಲಿನಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಸುದೀಪ್ ನಟನೆಯ ವಿಕ್ರಾಂತ್ ರೋಣಾ ಬಿಡುಗಡೆಗೆ ಸಜ್ಜುಗೊಂಡಿದ್ದು, ನಿರೀಕ್ಷೆಗಳು ಹೆಚ್ಚಿವೆ. 
ವಿಕ್ರಾಂತ್ ರೋಣ ಸಿನಿಮಾದ ದೃಶ್ಯ
ವಿಕ್ರಾಂತ್ ರೋಣ ಸಿನಿಮಾದ ದೃಶ್ಯ

ಶಾಲಿನಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಸುದೀಪ್ ನಟನೆಯ ವಿಕ್ರಾಂತ್ ರೋಣಾ ಬಿಡುಗಡೆಗೆ ಸಜ್ಜುಗೊಂಡಿದ್ದು, ನಿರೀಕ್ಷೆಗಳು ಹೆಚ್ಚಿವೆ. 

ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರ ಕುತೂಹಲವನ್ನೂ ಮೂಡಿಸಿದ್ದು, ಕಲಾ ನಿರ್ದೇಶಕ ಶಿವಕುಮಾರ್, ಸಂಗೀತ ಸಂಯೋಜಕ ಅಂಜನೀಶ್ ಲೋಕನಾಥ್, ಸಿನಿಮಾಟೋಗ್ರಾಫರ್ ವಿಲಿಯಂ ಡೇವಿಡ್ ಅವರ ಕಲೆಗೆ ಜನರು ಈಗಾಗಲೆ ಮಾರುಹೋಗಿದ್ದಾರೆ. 

ವಿಕ್ರಾಂತ್ ರೋಣಾದ ತೆರೆ ಹಿಂದಿನ ಹೀರೋಗಳನ್ನು ಪರಿಚಯಿಸುವ ಲೇಖನ ಇದಾಗಿದೆ.

ನಿರ್ದೇಶಕ ಅನೂಪ್ ಭಂಡಾರಿ ವಿಕ್ರಾಂತ್ ರೋಣಾ ಅವರು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದು, ಆ ಹೊಸ ಪ್ರಪಂಚವನ್ನು ಜನರಿಗೆ ತಲುಪಿಸುವ ಕೆಲಸ ನನ್ನ ಸಂಗೀತದ ಮೇಲಿತ್ತು ಎನ್ನುತ್ತಾರೆ ಸಂಗೀತ ಸಂಯೋಜಕ ಅಂಜನೀಶ್ ಲೋಕನಾಥ್. 

ಸ್ಟಾರ್ ನಟರಾಗಿರುವ ಸುದೀಪ್ ಸಿನಿಮಾದಲ್ಲಿ ನಟಿಸಿದ್ದು, ಅವರ ಅಭಿಮಾನಿಗಳಿಗಾಗಿ ಈ ಸಿನಿಮಾವನ್ನು ಕಮರ್ಷಿಯಲ್ ಆಯಾಮದಲ್ಲೇ ಇಡುವುದು ಅಗತ್ಯವಿತ್ತು. ಇದಕ್ಕೆ ಹೊಂದುವಂತೆ ಸಂಗೀತ ಸಂಯೋಜನೆ, ವಿಕ್ರಾಂತ್ ರೋಣಾದ ಬ್ಯಾಕ್ ಗ್ರೌಂಡ್ ಸ್ಕೋರ್ ನ್ನು ಸಂಯೋಜಿಸಲು  ಸಾಕಷ್ಟು ಬುದ್ಧಿವಂತಿಕೆ ಉಪಯೋಗಿಸಲಾಯಿತು. ಆದ್ದರಿಂದ ಜನರೇ ಆಗಾಗ ಗುನುಗುವಂತಹ ಹಾಡುಗಳನ್ನು ಸಂಯೋಜಿಸುವುದು ಮುಖ್ಯವಾಗಿತ್ತು.  ಕೆಲವೊಂದು ಹಾಡುಗಳು ಜನರಿಗೆ ಕೇಳಲು ಮಾತ್ರ ಇಷ್ಟವಾಗುತ್ತದೆ. ಇನ್ನೂ ಕೆಲವು ಹಾಡುಗಳನ್ನು ಜನತೆ ಗುನುಗುವುದಕ್ಕೆ ಇಷ್ಟಪಡುತ್ತಾರೆ. ಜನರೇ ಹಾಡಿಕೊಳ್ಳುವಂತಹ ಹಾಡನ್ನು ಸಂಯೋಜಿಸಲು ನಾನು ಬಯಸಿದ್ದೆ, ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ರಾ ರಾ ರಕ್ಕಮ್ಮ ಹಾಡು, ಅದು ಈಗಲೂ ಟ್ರೆಂಡ್ ಆಗಿದೆ ಎನ್ನುತ್ತಾರೆ ಅಂಜನೀಶ್ ಲೋಕನಾಥ್.

ಅಂಜನೀಷ್ ಲೋಕನಾಥ್ ಪ್ರಕಾರ, ಓರ್ವ ಸಂಗೀತ ಸಂಯೋಜಕನಿಗೆ ಜನರ ಗಮನ ಸೆಳೆಯುವುದಕ್ಕೆ ಕೇವಲ 5-10 ಸೆಕೆಂಡ್ ಗಳಷ್ಟು ಸಮಯ ಮಾತ್ರವಿರುತ್ತದೆ.

ನಿರ್ದೇಶಕ ಅನೂಪ್ ಭಂಡಾರಿ ಸಾಹಿತಿಯೂ ಆಗಿದ್ದು, ಅಂಜನೀಷ್ ನಿರ್ಧಾರದಲ್ಲಿ ಅವರ ಸಹಾಯವೂ ಇದೆ. 

ರಾಗಗಳೊಂದಿಗೆ ಹೊಂದಾಣಿಕೆಯಾಗಲು ಇಂದು ಸಾಹಿತ್ಯವೂ ಬಹಳ ಮುಖ್ಯವಾಗುತ್ತದೆ, ವಿಕ್ರಾಂತ್ ರೋಣ ಸಿನಿಮಾ ಹಡಗಿನ ಕ್ಯಾಪ್ಟನ್ ಆ ಗಿರುವ ಅನೂಪ್ ಯಾವುದು ಅತ್ಯಂತ ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಚೆನ್ನಾಗಿ ಬಲ್ಲವರಾಗಿದ್ದರು ಎನ್ನುತ್ತಾರೆ ಅಂಜನೀಶ್ ಲೋಕನಾಥ್.

ನಾವು ಸಿನಿಮಾದಲ್ಲಿ ಅರಣ್ಯವನ್ನು ಸೃಷ್ಟಿಸುವುದಕ್ಕೆ 22 ಟ್ರಕ್ ನಷ್ಟು ಗಿಡಗಳನ್ನು ಬಳಕೆ ಮಾಡಲಾಗಿದೆ.
 
ಕೆಜಿಎಫ್ ಚಾಪ್ಟರ್ 2 ನಲ್ಲಿ ಶಿವಕುಮಾರ್ ಅವರ ಕಲಾಚಾತುರ್ಯವನ್ನು ಚರ್ಚೆ ಮಾಡುತ್ತಿರುವಾಗಲೇ ವಿಕ್ರಾಂತ್ ರೋಣಾದಲ್ಲಿನ ಅವರ ಕಲೆಯೂ ಎಲ್ಲರನ್ನೂ ಆಕರ್ಷಿಸುತ್ತಿದೆ. ವಿಕ್ರಾಂತ್ ರೋಣಾ, ಶಿವಕುಮಾರ್ ಅವರಿಗೆ ಕೆಜಿಎಫ್ ನಂತರದ 2 ನೇ ಸಿನಿಮಾ ಆಗಿದೆ. "ನಾನು ಕಲಾ ನಿರ್ದೇಶಕನಾಗಿ ಇದೇ ಮೊದಲ ಬಾರಿಗೆ ಅರಣ್ಯದ ಮಾದರಿಯ ವ್ಯವಸ್ಥೆಯನ್ನು ಮಾಡಿದ್ದೆ. ನನಗೆ ಅದು ಪ್ರಕೃತಿಯನ್ನು ಯಥಾವತ್ ಅನುಕರಣೆ ಮಾಡುವಂತಾಗಿತ್ತು, ಅದು ತಾಂತ್ರಿಕ ಪ್ರಗತಿಗಳ ನಡುವೆಯೂ ಪರಿಪೂರ್ಣಗೊಳಿಸಲು ಸಾಧ್ಯವಾಗದ ಸಂಗತಿಯಾಗಿತ್ತು ಎನ್ನುತ್ತಾರೆ ಕಲಾ ನಿರ್ದೇಶಕ ಶಿವಕುಮಾರ್.

ಅನೂಪ್ ಭಂಡಾರಿ ಅವರ ರಂಗಿತರಂಗ ಸಿನಿಮಾದ ಮೂಲಕ ಗುರುತಿಸಿಕೊಂಡಿದ್ದ ಸಿನಿಮಾಟೋಗ್ರಾಫರ್ ವಿಲಿಯಮ್ ಡೇವಿಡ್ ಮಾತನಾಡಿ, ವಿಕ್ರಾಂತ್ ರೋಣಾಗೆ ತಮ್ಮ ವಿಷನ್ ನ್ನು ಸೆರೆಹಿಡಿಯುವುದು ಸವಾಲಿನ ಕೆಲಸವಾಗಿತ್ತು, ಈ ರೀತಿಯ ಸಿನಿಮಾದಲ್ಲಿ ಅಷ್ಟು ದೊಡ್ಡ ಸ್ಟಾರ್ ನಟನೊಂದಿಗೆ ಕಾರ್ಯನಿರ್ವಹಿಸಿದ್ದು, ಹಲವು ಹೊಸ ಸಂಗತಿಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com