'ವಿಕ್ರಾಂತ್ ರೋಣ' ನೋಡುವುದೇ ಒಂದು ಥ್ರಿಲ್ಲಿಂಗ್ ಅನುಭವ: 3ಡಿ ತಜ್ಞ ರಾಜ್. ಎಸ್!

ಕಿಚ್ಚ ಸುದೀಪ್ ನಟಿಸಿರುವ ವಿಕ್ರಾಂತ್ ರೋಣ ಜುಲೈ 28 ರಂದು ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, 3D ನಲ್ಲಿಯೂ ರಿಲೀಸ್ ಆಗಲಿದೆ.
ಸುದೀಪ್
ಸುದೀಪ್

ಕಿಚ್ಚ ಸುದೀಪ್ ನಟಿಸಿರುವ ವಿಕ್ರಾಂತ್ ರೋಣ ಜುಲೈ 28 ರಂದು ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, 3D ನಲ್ಲಿಯೂ ರಿಲೀಸ್ ಆಗಲಿದೆ.

ವಿಕ್ರಾಂತ್ ರೋಣ ಸಿನಿಮಾವನ್ನು 3ಡಿಯಲ್ಲಿ ಬಿಡುಗಡೆ ಮಾಡಬೇಕೆಂಬುದು ನಿರ್ದೇಶಕ ಅನೂಪ್ ಭಂಡಾರಿ ಅವರ ಬಹುದೊಡ್ಡ ಕನಸಾಗಿದೆ.

ವಿಕ್ರಾಂತ್ ರೋಣ ಸಿನಿಮಾದ 3D ಕೆಲಸವನ್ನು ಮುಂಬೈ ಮೂಲದ ರಾಜ್ ಎಸ್ ಮತ್ತು ಅನುಭಾ ಸಿನ್ಹಾ ವಹಿಸಿಕೊಂಡಿದ್ದಾರೆ, ಅವರು 48 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮತ್ತು ಬಹುತೇಕ ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾ ಕೆಲಸವನ್ನು ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಮಾಡಲಾಯಿತು. ಸಾಮಾನ್ಯವಾಗಿ 3ಡಿ ಕೆಲಸಕ್ಕೆ ಮೂರರಿಂದ- ನಾಲ್ಕು ತಿಂಗಳು ಸಮಯ ಬೇಕಾಗುತ್ತದೆ. ಆದರೆ ವಿಕ್ರಾಂತ ರೋಣ 13 ತಿಂಗಳ ಸಮಯ ತೆಗೆದುಕೊಂಡಿತು.

ಈ ಸಿನಿಮಾದಲ್ಲಿ 1000 ಕ್ಕೂ ಹೆಚ್ಚು VFX ಶಾಟ್‌ಗಳಿದ್ದು, ಆಸಕ್ತಿಕರವಾಗಿದೆ. ವಿಕ್ರಾಂತ್ ರೋಣ 3ಡಿ ಕೆಲಸಕ್ಕಾಗಿ ನಾವು ಮುಂಬೈ, ಬೆಂಗಳೂರು, ಕೊಚ್ಚಿ ಮತ್ತು ಪಾಟ್ನಾದಿಂದ 500 ಸದಸ್ಯರ ತಂಡವನ್ನು ಕರೆತಂದಿದ್ದೆವು.

ಕೋವಿಡ್‌ನಿಂದಾಗಿ ಹಲವು ನಿರ್ಬಂಧಗಳಿದ್ದ ಕಾರಣ ನಾವು ಈ ಯೋಜನೆಯನ್ನು ಕೈಗೆತ್ತಿಕೊಂಡ ಸಮಯ ನಿರ್ಣಾಯಕವಾಗಿತ್ತು. ಈ ಕೆಲಸವು ನಾವು ಮನೆಯಿಂದಲೇ ಮಾಡಬಹುದಾದ ಕೆಲಸವಲ್ಲ, ಮತ್ತು ಎಲ್ಲವನ್ನೂ ಸ್ಟುಡಿಯೋದಲ್ಲಿ ಮಾಡಬೇಕಾಗಿತ್ತು. ಹಾಡುಗಳನ್ನು ಕೂಡ 3ಡಿಗೆ ಬದಲಾಯಿಸಲು ಬಹಳ ಸಮಯ ತೆಗೆದುಕೊಂಡಿತ್ತು ಎಂದು ರಾಜ್ ತಿಳಿಸಿದ್ದಾರೆ.

ಹಾಲಿವುಡ್ ಚಿತ್ರಗಳಲ್ಲಿ 3ಡಿ ರೂಢಿಯಲ್ಲಿದೆಯಾದರೂ, ಅರಿವಿನ ಕೊರತೆಯಿಂದಾಗಿ ನಮ್ಮ ಭಾರತೀಯ ಚಿತ್ರಗಳಲ್ಲಿ ಅದು ಪ್ರಚಲಿತವಾಗಿಲ್ಲ ಎಂದು ರಾಜ್ ಹೇಳಿದ್ದಾರೆ. ಎರಡು ಕ್ಯಾಮೆರಾಗಳೊಂದಿಗೆ 3D ಫಿಲ್ಮ್ ಮಾಡಬೇಕು. ತಯಾರಕರು ಒಂದು ಕ್ಯಾಮೆರಾದಲ್ಲಿ ಚಲನಚಿತ್ರವನ್ನು ಚಿತ್ರೀಕರಿಸಿದರೆ, ನಾವು ಎರಡನೇ ಕಣ್ಣಿನಿಂದ ರಚಿಸಬಹುದು. ದಶಕಗಳಿಂದ ಪ್ರೇಕ್ಷಕರು 2ಡಿಯಲ್ಲಿ ಚಲನಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ. 3D ಗೆ ಪರಿವರ್ತನೆ ಮಾಡಲು ಕಷ್ಟವಾಗುತ್ತದೆ ಹಾಲಿವುಡ್ ನ ಶೇ,99 ರಷ್ಟು ಸಿನಿಮಾಗಳು 3ಡಿಯಲ್ಲಿವೆ.

ಭಾರತದಲ್ಲಿನ ಹೊಸ ಪೀಳಿಗೆಯ ಪ್ರೇಕ್ಷಕರು ಈ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿದ್ದಾರೆ, 3ಡಿ ಎಫೆಕ್ಚ್ ವೀಕ್ಷಕರಿಗೆ ಹೆಚ್ಚು ತಲ್ಲೀನಗೊಳಿಸುವ ಅನುಭವವನ್ನು ನೀಡುತ್ತದೆ. ಭಾರತದಲ್ಲಿನ ಥಿಯೇಟರ್‌ಗಳು ವಿಶೇಷವಾಗಿ ಸಿಂಗಲ್ ಸ್ಕ್ರೀನ್‌ಗಳು 2D ಸ್ವರೂಪದಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸುತ್ತಿವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com