ಈ ರೀತಿಯ ಕಥೆ ಆಯ್ಕೆಗೆ ಧೈರ್ಯ ಬೇಕು: 'ವಿಕ್ರಾಂತ್ ರೋಣ' ಯಶಸ್ಸಿನ ಬಗ್ಗೆ ಎಸ್‌ಎಸ್ ರಾಜಮೌಳಿ ಮಾತು!
ಭಾರತದ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಎಸ್‌ಎಸ್ ರಾಜಮೌಳಿ 'ವಿಕ್ರಾಂತ್ ರೋಣ' ಚಿತ್ರದ ಯಶಸ್ಸಿಗೆ ನಟ ಕಿಚ್ಚ ಸುದೀಪ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೆ ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Published: 31st July 2022 10:23 PM | Last Updated: 31st July 2022 10:23 PM | A+A A-

ರಾಜಮೌಳಿ-ಸುದೀಪ್
ಚೆನ್ನೈ: ಭಾರತದ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಎಸ್‌ಎಸ್ ರಾಜಮೌಳಿ 'ವಿಕ್ರಾಂತ್ ರೋಣ' ಚಿತ್ರದ ಯಶಸ್ಸಿಗೆ ನಟ ಕಿಚ್ಚ ಸುದೀಪ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೆ ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
'ವಿಕ್ರಾಂತ್ ರೋಣ' ಯಶಸ್ಸಿಗೆ ಅಭಿನಂದನೆಗಳು ಕಿಚ್ಚ ಸುದೀಪ್, ಈ ರೀತಿಯ ಕಥೆಗೆ ಆಯ್ಕೆಗೆ ಧೈರ್ಯ ಮತ್ತು ನಂಬಿಕೆ ಬೇಕು. ನೀವು ಮಾಡಿದ್ದೀರಿ ಮತ್ತು ಅದು ಫಲ ನೀಡಿದೆ. ಚಿತ್ರದ ಪ್ರಿಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಗುಡ್ಡಿ ಗೆಳೆಯ ಭಾಸ್ಕರ್ ಅವರ ಬಗ್ಗೆ ವಿಶೇಷವಾಗಿ ಹೇಳಲೇಬೇಕು ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.
ರಾಜಮೌಳಿ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸುದೀಪ್, 'ಧನ್ಯವಾದಗಳು ಎಸ್ ಎಸ್ ರಾಜಮೌಳಿ ಸರ್. ನಿಮ್ಮಿಂದ ಈ ಸಾಲುಗಳನ್ನು ಕೇಳಲು ನನಗೆ ತುಂಬಾ ಗೌರವವಾಗಿದೆ. ಭಾಸ್ಕರ್ ಸೇರಿದಂತೆ ನಮ್ಮೆಲ್ಲರಿಂದ ದೊಡ್ಡ ಧನ್ಯವಾದಗಳು ಮತ್ತು ಅಪ್ಪುಗೆ ಎಂದು ಹೇಳಿದ್ದಾರೆ.
Thank you @ssrajamouli sir. Extremely honoured to hear these lines from you.
— Kichcha Sudeepa (@KicchaSudeep) July 31, 2022
A big thanks and a hug from all of us ,,, including Bhaskarhttps://t.co/bGZ0RtJTYh
ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಮೊದಲ ದಿನವೇ 35 ಕೋಟಿ ರೂಪಾಯಿ ಗಳಿಸಿದೆ.