ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣನಿಗೆ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್!
ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಸಂಗೀತ ಸಂಯೋಜಕರಲ್ಲಿ ಒಬ್ಬರಾದ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಶಿವರಾಜಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ.
Published: 23rd June 2022 01:15 PM | Last Updated: 24th June 2022 01:13 PM | A+A A-

ಅರ್ಜುನ್ ಜನ್ಯ, ಶಿವಣ್ಣ ಮತ್ತು ರಮೇಶ್ ರೆಡ್ಡಿ
ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಸಂಗೀತ ಸಂಯೋಜಕರಲ್ಲಿ ಒಬ್ಬರಾದ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಶಿವರಾಜಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ನಾತಿಚರಾಮಿ ಹಾಗೂ ಇನ್ನೂ ಬಿಡುಗಡೆಯಾಗ ಬೇಕಿರುವ ಗಾಳಿಪಟ 2 ನಿರ್ಮಾಣ ಮಾಡಿದ್ದ ರಮೇಶ್ ರೆಡ್ಡಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ದೇವರ ಆಶೀರ್ವಾದದಿಂದ ನನ್ನ ನಿರ್ದೇಶನದ ಮೊದಲ ಸಿನಿಮಾಗದಲ್ಲಿ ಶಿವರಾಜ ಕುಮಾರ್ ನಟಿಸುತ್ತಿರುವುದು ಸಂತಸ ತಂದಿದೆ ಎಂದು ಅರ್ಜುನ್ ಜನ್ಯ ಹೇಳಿದ್ದಾರೆ, ಬಾಲ್ಯದಿಂದಲೂ ನಾನು ಮಣಿರತ್ನಂ ಚಿತ್ರಗಳ ಅಭಿಮಾನಿಯಾಗಿದ್ದೆ. ಸಿನಿಮಾ ನಿರ್ಮಾಪಕನಾಗಬೇಕೆಂಬ ಆಸೆ ನನ್ನನ್ನು ಕಾಡುತ್ತಿತ್ತು, ಈಗ ನನ್ನ ಬಹುದಿನದ ಆಸೆ ಕೊನೆಗೂ ಈಡೇರಿದೆ ಶಿವಣ್ಣ ಕೂಡ ಒಪ್ಪಿದ್ದಾರೆ ಎಂದು ಹೇಳಿದ್ದಾರೆ.
ಚಿತ್ರಕಥೆ ಮತ್ತು ನಿರ್ದೇಶನದ ಜೊತೆಗೆ, ಅರ್ಜುನ್ ಜನ್ಯ ಸಿನಿಮಾಗೆ ಸಂಗೀತವನ್ನು ಸಹ ನಿರ್ವಹಿಸುತ್ತಿದ್ದಾರೆ. ನಿರ್ಮಾಪಕ ರಮೇಶ್ ರೆಡ್ಡಿ ಕೂಡ ಶಿವಣ್ಣನ ಜೊತೆ ಕೆಲಸ ಮಾಡಲು ಥ್ರಿಲ್ ಆಗಿದ್ದಾರೆ. ನಾನು ಮೇಸ್ತ್ರಿ ಕೆಲಸ ಮಾಡುತ್ತಿದ್ದ ದಿನಗಳಿಂದಲೂ ಶಿವಣ್ಣನವರ ದೊಡ್ಡ ಅಭಿಮಾನಿ. ಒಮ್ಮೆ ಆನಂದ್ ಅವರ ಸಿನಿಮಾ ನೋಡಿದ ನಂತರ ಸದಾಶಿವನಗರಕ್ಕೆ ಹೋಗಿದ್ದೆ. ಆದರೆ ದುರದೃಷ್ಟವಶಾತ್, ನಾನು ಅವನನ್ನು ಮನೆಯಲ್ಲಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಇಂದು, ದೇವರು ನನ್ನ ಬಹುಕಾಲದ ಆಸೆಯನ್ನು ಪೂರೈಸಿದ್ದಾನೆ ಮತ್ತು ನಾನು ತುಂಬಾ ಸಂತೋಷವಾಗಿದ್ದೇನೆ ಜನ್ಯ ಹೇಳಿದ್ದಾರೆ.
ಇದನ್ನೂ ಓದಿ: 'ಬೈರಾಗಿ' ಚಿತ್ರ ಶಿವಣ್ಣ ಜನ್ಮ ದಿನದ ಅಡ್ವಾನ್ಸ್ ಉಡುಗೊರೆ: ನಿರ್ಮಾಪಕ ಕೃಷ್ಣ ಸಾರ್ಥಕ್
ತಮ್ಮ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸದ ಅರ್ಜುನ್ ಜನ್ಯ, “ಶಿವಣ್ಣ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪ್ರಾರಂಭಿಸಲು ಅವರು ನಮಗೆ ಹೇಳಿದ್ದಾರೆ, ಅದರ ನಂತರ ಅವರು ತಮ್ಮ ಡೇಟ್ಸ್ ನೀಡಲಿದ್ದಾರೆ. ಪ್ರೀ-ಪ್ರೊಡಕ್ಷನ್‌ಗೆ ಇನ್ನೂ ಮೂರು ತಿಂಗಳು ಬೇಕು ಎಂದಿದ್ದಾರೆ.