ಸ್ಯಾಂಡಲ್ ವುಡ್ ಗೆ ನನ್ನ ಎಂಟ್ರಿ ಸ್ವಲ್ಪ ತಡವಾಯಿತು: ನಟ ಜಯರಾಮ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಸಿನಿಮಾದ ಸೆಟ್​ ನಿಂದಲೇ ಈಗಾಗಲೇ ಇದು ಗಮನ ಸೆಳೆದಿದೆ.
ಘೋಸ್ಟ್ ಸಿನಿಮಾ ತಂಡ
ಘೋಸ್ಟ್ ಸಿನಿಮಾ ತಂಡ

ಮುಖ್ಯವಾಗಿ ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ್ದ ನಟ ಜಯರಾಮ್ ತಮಿಳು ಮತ್ತು ತೆಲುಗಿನಲ್ಲೂ ಛಾಪು ಮೂಡಿಸಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಸಿನಿಮಾ ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಸಿನಿಮಾದ ಸೆಟ್​ ನಿಂದಲೇ ಈಗಾಗಲೇ ಇದು ಗಮನ ಸೆಳೆದಿದೆ. ಈ ಚಿತ್ರದ ಚಿತ್ರೀಕರಣ ಈಗಾಗಲೇ ಶುರು ಆಗಿದೆ. ಇದೇ ತಿಂಗಳ 12 ರಂದು ಚಿತ್ರಕ್ಕೆ ಮುಹೂರ್ತ ಆಗಿತ್ತು. ಅಲ್ಲಿಂದ ಚಿತ್ರಿಕರಣ ಕೂಡ ಶುರು ಆಗಿದೆ. ಮೊದಲ ಹಂತದಲ್ಲಿಯೇ ಶಿವಣ್ಣನ ಪಾತ್ರದ ಪ್ರಮುಖ ಪಾತ್ರದ ಚಿತ್ರೀಕರಣ ಆಗಿದೆ.

ಮಲಯಾಳಂ ನಟ ಜಯರಾಂ ಘೋಸ್ಟ್ ಸಿನಿಮಾ ಮೂಲಕ ಕನ್ನಡಕ್ಕೆ ಪಾದರ್ಪಣೆ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಜಯರಾಮ ಘೋಸ್ಟ್ ಸಿನಿಮಾ ಚಿತ್ರೀಕರಣ ಸೆಟ್ ಆಗಮಿಸಿದ್ದಾರೆ.

"ನಾನು ಮತ್ತು ಶಿವರಾಜ್‌ಕುಮಾರ್‌ ಬಹಳ ದಿನಗಳಿಂದ ಪರಿಚಿತರು. ಒಂದೇ ಜ್ಯುವೆಲ್ಲರಿ ಕಂಪನಿಯ ಬ್ರಾಂಡ್‌ ಅಂಬಾಸಿಡರ್‌ ಆಗಿರುವುದರಿಂದ ಪ್ರತಿ ವರ್ಷ ಭೇಟಿಯಾಗುತ್ತಿದ್ದೆವು. ಆಗಾಗ ಸಿನಿಮಾದ ಬಗ್ಗೆ ಚರ್ಚಿಸುತ್ತಿದ್ದೆವು.

2019 ರಲ್ಲಿ ಕನ್ನಡ ಸಿನಿಮಾದಲ್ಲಿ  ಕೆಲಸ ಮಾಡಲು ಆಸಕ್ತಿ ಇದೆಯೇ ಎಂದು ಶಿವಣ್ಣ ಕೇಳಿದ್ದರು. ಕನ್ನಡ ಚಿತ್ರರಂಗದಲ್ಲಿ ನಟಿಸಲು ನಾನು  ಖುಷಿಯಾಗಿದ್ದೆ  ಆದರೆ ಅತಿಥಿ ಪಾತ್ರದಲ್ಲಿ ನಟಿಸಲು ಮನಸ್ಸಿರಲಿಲ್ಲ.

ನಾನು ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುವುದಾದರೆ ಅದು ಪ್ರಮುಖ ಪಾತ್ರದಲ್ಲಿ ಇರಬೇಕು ಎಂದು ಶಿವಣ್ಣ ಒತ್ತಾಯಿಸಿದರು, ಅಂತಿಮವಾಗಿ ಆರು ತಿಂಗಳ ಹಿಂದೆ ಅದು ಈಡೇರಿತು.

ಘೋಸ್ಟ್ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಜಯರಾಂ ಹೇಳಿದ್ದಾರೆ, ನಾನು  ಕನ್ನಡ ಭಾಷೆಯನ್ನು ಕಲಿತಿದ್ದೇನೆ,  ಸಿನಿಮಾಗೆ ನಾನೇ ಡಬ್ಬಿಂಗ್ ಮಾಡುತ್ತೇನೆ ಎಂದು ಜಯರಾಂ ಹೇಳಿದ್ದಾರೆ.

ಮೊದಲ ಶೆಡ್ಯೂಲ್ ಬೆಂಗಳೂರಿನಲ್ಲಿ ಮುಗಿದಿದ್ದು, ಎರಡನೇ ಶೆಡ್ಯೂಲ್ ಮೈಸೂರಿನಲ್ಲಿ ಶೂಟಿಂಗ್ ನಡೆಯಲಿದೆ,  ನನ್ನ ಚೊಚ್ಚಲ ಕನ್ನಡ ಸಿನಿಮಾದಿಂದ ಕರ್ನಾಟಕದ ಜನತೆ ಸಂತಸಗೊಂಡಿದ್ದಾರೆ.  ನಾನು ಅವರಿಗೆಲ್ಲಾ ವಿಶೇಷವಾಗಿ ಧನ್ಯವಾದ ಅರ್ಪಿಸುತ್ತೇನೆ, ಶಿವಣ್ಣನ ಅಭಿಮಾನಿಗಳಿಂದ ಬಹಳಷ್ಟು ಪ್ರೀತಿಯನ್ನು ಸ್ವೀಕರಿಸುತ್ತಿದ್ದೇನೆ  ಎಂದು ಹೇಳಿದ್ದಾರೆ.

ಕರ್ನಾಟಕದೊಂದಿಗೆ ತಮ್ಮ  ಸಂಬಂಧ ಸ್ಮರಿಸಿಕೊಂಡ, ಜಯರಾಮ್ ಅವರು ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದಾಗ 1987-88 ಕ್ಕೆ ಹಿಂತಿರುಗಿದರು. ನನ್ನ ನಟನಾ ವೃತ್ತಿಜೀವನದ ಆರಂಭದ ದಿನಗಳು. ಆ ದಿನಗಳಲ್ಲಿ ನಾವು ಹೆಚ್ಚಾಗಿ ಸಣ್ಣ-ಬಜೆಟ್ ಚಿತ್ರಗಳನ್ನು ಮಾಡುತ್ತಿದ್ದೆವು. 4 ರಿಂದ 5 ಹಾಡುಗಳು ಇರುತ್ತಿದ್ದವು. ಹಾಗಾಗಿ ಯಾವುದೇ ಹಾಡನ್ನು ಶ್ರೀಮಂತವಾಗಿ ಚಿತ್ರಿಸಬೇಕಾದರೆ, ನಮ್ಮ ಕನಸಿನ ತಾಣ ಮೈಸೂರಿನ ಬೃಂದಾವನ ಗಾರ್ಡನ್ಸ್ ಆಗಿತ್ತು.

ನನ್ನ ಹಾಡಿನ ಹಿನ್ನಲೆಯಲ್ಲಿ ಕಾರಂಜಿಗಳು ಇರಬೇಕು ಎಂದು ನಾನು ನಿರ್ಮಾಪಕರನ್ನು ಎಷ್ಟು ವಿನಂತಿಸುತ್ತಿದ್ದೆ ಎಂದು ನನಗೆ ನೆನಪಿದೆ, ಎಂದು ಜಯರಾಂ ಅವರು ತಮ್ಮ ಬೆಂಗಳೂರಿನೊಂದಿಗಿನ ದೀರ್ಘಕಾಲದ ಬಾಂಧವ್ಯವನ್ನು ಹಂಚಿಕೊಳ್ಳುತ್ತಾರೆ.

ನಾನು ಎಸ್ ಎಸ್ ಎಲ್ ಸಿ ಓದುತ್ತಿದ್ದಾಗ ನಮ್ಮ ಶಾಲೆಯಿಂದ ಬೆಂಗಳೂರಿಗೆ ಟ್ರಿಪ್ ಇತ್ತು. ಬ್ರಿಗೇಡ್ ರಸ್ತೆಯು ನಗರದ ಪ್ರಮುಖ ಪ್ರಮುಖ ಸ್ಥಳಗಳಲ್ಲಿ ಒಂದಾಗಿತ್ತು, ನಾನು ಆಗಾಗ್ಗೆ ಶಾಪಿಂಗ್ ಮಾಡಲು ಹೋಗುತ್ತಿದ್ದೆ. ಇಂದು, ನಗರದ ಮೂಲಸೌಕರ್ಯಗಳು ಬದಲಾಗಿದೆ, ಆದರೆ ಅದರ ಆಕರ್ಷಣೆಯನ್ನು ಕಳೆದುಕೊಂಡಿಲ್ಲ. ಬೆಂಗಳೂರು ಇನ್ನೂ ಸುಂದರ ನಗರವಾಗಿದೆ.

ಅಷ್ಟೆ ಅಲ್ಲ, ಪ್ರಕೃತಿ ಪ್ರಿಯರೂ ಆಗಿರುವ, ವನ್ಯಜೀವಿಗಳ ಬಗ್ಗೆ ಒಲವು ಹೊಂದಿರುವ ಜಯರಾಂ ಅವರು ಆಗಾಗ ಬನ್ನೇರುಘಟ್ಟ, ನಾಗರಹೊಳೆ, ಬಂಡೀಪುರ, ಕಬಿನಿಗೆ ಭೇಟಿ ನೀಡುತ್ತಿದ್ದರು. ಇದಕ್ಕೂ ಮೊದಲೇ  ಸ್ಯಾಂಡಲ್ ವುಡ್  ನಲ್ಲಿ ನಟಿಸಬೇಕಿತ್ತು, ಆದರೆ ನನ್ನ ಎಂಟ್ರಿ ತಡವಾಗಿ ಆಗಿದೆ ಎಂದು ಜಯರಾಂ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com