ಸಿನಿಮಾ ಸುದ್ದಿ
ಮೆಗಾಸ್ಟಾರ್ ಚಿರಂಜೀವಿಗೆ 2022 ನೇ ಸಾಲಿನ ವರ್ಷದ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿ
ಖ್ಯಾತ ತೆಲುಗು ನಟ, ಮೆಗಾಸ್ಟರ್ ಚಿರಂಜೀವಿ 2022ನೇ ಸಾಲಿನ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪಣಜಿ: ಖ್ಯಾತ ತೆಲುಗು ನಟ, ಮೆಗಾಸ್ಟರ್ ಚಿರಂಜೀವಿ 2022ನೇ ಸಾಲಿನ ಭಾರತೀಯ ಚಲನಚಿತ್ರ ವ್ಯಕ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗೋವಾದಲ್ಲಿ ಆರಂಭವಾದ 53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಘೋಷಿಸಿದರು. ಆದರೆ, ಈ ಸಮಾರಂಭದಲ್ಲಿ ಚಿರಂಜೀವಿ ಪಾಲ್ಗೊಂಡಿರಲಿಲ್ಲ.
ಅನುರಾಗ್ ಠಾಕೂರ್ ತಮ್ಮ ಟ್ವೀಟರ್ ಖಾತೆಯಲ್ಲಿಯೂ ಚಿರಂಜೀವಿ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಈ ಅತ್ಯುನ್ನತ ಪ್ರಶಸ್ತಿ ದೊರೆತಿರುವುದರಿಂದ ಚಿರಂಜೀವಿ ಅಭಿಮಾನಿಗಳು ಅತೀವ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ನಾಲ್ಕು ದಶಕಗಳ ಕಾಲ ಸಿನಿಮಾ ರಂಗದಲ್ಲಿರುವ 66 ವರ್ಷದ ಚಿರಂಜೀವಿ, 10 ಫಿಲಂಫೇರ್ ಪ್ರಶಸ್ತಿ, ನಾಲ್ಕು ನಂದಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ