ಡಿಸೆಂಬರ್ 30ಕ್ಕೆ 'ಪದವಿ ಪೂರ್ವ' ಚಿತ್ರ ರಿಲೀಸ್
ಹರಿಪ್ರಸಾದ್ ಜಯಣ್ಣ ಚೊಚ್ಚಲ ನಿರ್ದೇಶನದ 'ಪದವಿ ಪೂರ್ವ' ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರು ಫಿಲಂಸ್ ಜಂಟಿ ನಿರ್ಮಾಣದ ಈ ಸಿನಿಮಾ ಡಿಸೆಂಬರ್ 30 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ.
Published: 28th November 2022 04:23 PM | Last Updated: 28th November 2022 05:01 PM | A+A A-

ಪದವಿ ಪೂರ್ವ ಫೋಸ್ಟರ್
ಹರಿಪ್ರಸಾದ್ ಜಯಣ್ಣ ಚೊಚ್ಚಲ ನಿರ್ದೇಶನದ 'ಪದವಿ ಪೂರ್ವ' ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರು ಫಿಲಂಸ್ ಜಂಟಿ ನಿರ್ಮಾಣದ ಈ ಸಿನಿಮಾ ಡಿಸೆಂಬರ್ 30 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಡಾಲಿ ಧನಂಜಯ್ ಅಭಿನಯದ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಕೂಡಾ ಅಂದೇ ತೆರೆಗೆ ಅಪ್ಪಳಿಸಲಿದೆ.
ಫ್ರೆಂಡ್ ಶಿಪ್ ಸಾಂಗ್ ಮೂಲಕ ಸದ್ದು ಮಾಡುತ್ತಿರುವ ಪದವಿ ಪೂರ್ವದಲ್ಲಿ ಪೃಥ್ವಿ ಶಾಮನೂರು, ಅಂಜಲಿ ಅನಿಸ್ ಮತ್ತು ಯಶ ಶಿವಕುಮಾರ್ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ರಂಗಾಯಣ ರಘು, ರಾಮ ರಾಮ ರೇ ಖ್ಯಾತಿಯ ನಟರಾಜ್ ಭಟ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ರೊಮ್ಯಾಂಟಿಕ್ ಕನ್ನಡ ಮ್ಯೂಸಿಕ್ ಆಲ್ಬಂನಲ್ಲಿ 'ಪದವಿಪೂರ್ವ' ನಟಿ ಯಶ ಶಿವಕುಮಾರ್
ಯೋಗರಾಜ್ ಭಟ್, ಅದಿತಿ ಪ್ರಭುದೇವ, ದಿವ್ಯಾ ಉರುಡುಗ, ಪ್ರಭು ಮುಂಡ್ಕೂರ್, ಶ್ರೀ ಮಹಾದೇವ್ ಕೂಡಾ ಅತಿಥಿ ಪಾತ್ರದಲ್ಲಿ ಇದ್ದಾರೆ. ಸಂತೋಷ್ ರೈ ಪಾಟಜಿ ಅವರ ಛಾಯಾಗ್ರಹಣವಿರುವ ' ಪದವಿ ಪೂರ್ವ ಚಿತ್ರಕ್ಕೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ.