ಸರಳವಾಗಿ ನೆರವೇರಿದ ಅಭಿಷೇಕ್-ಸಪ್ತಮಿ ನಟನೆಯ 'ಕಾಳಿ' ಸಿನಿಮಾ ಮೂಹೂರ್ತ
ಕಾವೇರಿ ಹಿನ್ನೆಲೆ ಕಥೆ ಹೊಂದಿರುವ ಈ ಚಿತ್ರದಲ್ಲಿ ಕನ್ನಡ ಹುಡುಗ ಹಾಗೂ ತಮಿಳು ಹುಡುಗಿಯ ನವಿರಾದ ಪ್ರೇಮಕಥೆ ಇದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್, ಸಿನಿಪ್ರಿಯರಿಗೆ ಕುತೂಹಲ ಕೆರಳಿಸಿದೆ.
Published: 29th November 2022 11:33 AM | Last Updated: 29th November 2022 03:40 PM | A+A A-

ಕಾಳಿ ಸಿನಿಮಾ ಮೂಹೂರ್ತ
ಅಭಿಷೇಕ್ ಅಂಬರೀಷ್ ಸದ್ಯಕ್ಕೆ ಬ್ಯಾಡ್ ಮ್ಯಾನರ್ಸ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಪೈಲ್ವಾನ್ ನಿರ್ದೇಶಕ ಎಸ್ ಕೃಷ್ಣ ಅವರ 'ಕಾಳಿ' ಮುಹೂರ್ತದಲ್ಲಿ ಭಾಗವಹಿಸಿದ್ದು ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅಭಿಷೇಕ್ ಅಂಬರೀಷ್ ಮತ್ತು ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ಕಾಳಿ' ಚಿತ್ರದ ಮುಹೂರ್ತ ನವೆಂಬರ್ 29, ಸೋಮವಾರ ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದೆ. ಮುಹೂರ್ತದ ಫೋಟೋಗಳನ್ನು ಕೆಆರ್‌ಜಿ ಕನೆಕ್ಟ್ಸ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
'ಕಾಳಿ' ಚಿತ್ರವನ್ನು ಕೃಷ್ಣ ನಿರ್ದೇಶಿಸುತ್ತಿದ್ದು, ಸ್ವಪ್ನಕೃಷ್ಣ ನಿರ್ಮಿಸುತ್ತಿದ್ದಾರೆ. ಕೃಷ್ಣ ಸಿನಿಮಾಟೋಗ್ರಾಫರ್ ಆಗಿ ಹೆಸರು ಮಾಡಿದ್ದಾರೆ. ಜೊತೆಗೆ ಗಜಕೇಸರಿ, ಹೆಬ್ಬುಲಿ, ಪೈಲ್ವಾನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಕೃಷ್ಣ ನಿರ್ದೇಶನದ 'ಕಾಳಿ' ಯಲ್ಲಿ ಯಂಗ್ ರೆಬಲ್ ಸ್ಟಾರ್ ಗೆ 'ಕಾಂತಾರ' ಲೀಲಾ ಜೋಡಿ?
ಕಾವೇರಿ ಹಿನ್ನೆಲೆ ಕಥೆ ಹೊಂದಿರುವ ಈ ಚಿತ್ರದಲ್ಲಿ ಕನ್ನಡ ಹುಡುಗ ಹಾಗೂ ತಮಿಳು ಹುಡುಗಿಯ ನವಿರಾದ ಪ್ರೇಮಕಥೆ ಇದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್, ಸಿನಿಪ್ರಿಯರಿಗೆ ಕುತೂಹಲ ಕೆರಳಿಸಿದೆ.
ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ ಕಿರುತೆರೆಯಲ್ಲಿ ಹಲವು ಹಿಟ್ ಧಾರಾವಾಹಿಗಳನ್ನು ನಿರ್ಮಿಸಿದೆ. ಪುನೀತ್ ರಾಜ್ ಕುಮಾರ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡಬೇಕಿತ್ತು, ಆದರೆ ಅವರ ಅಕಾಲಿಕ ಮರಣದಿಂದಾಗಿ ಅದು ಕೈಗೂಡಲಿಲ್ಲ ಎಂದು ಹೇಳಿದ್ದಾರೆ.