ಶಿವತೇಜಸ್ ನಿರ್ದೇಶನದ ದಿಲ್ ಪಸಂದ್ ನಲ್ಲಿ ಕೃಷ್ಣ ಜೊತೆ ಅಜಯ್ ರಾವ್!
ನಿರ್ದೇಶಕ ಶಿವ ತೇಜಸ್ ಅವರ ರೊಮ್ಯಾಂಟಿಕ್ ಕಾಮಿಡಿ, ದಿಲ್ ಪಸಂದ್ ನವೆಂಬರ್ 11 ರಂದು ಬಿಡುಗಡೆಯಾಗಲಿದೆ. ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ
Published: 24th October 2022 12:36 PM | Last Updated: 25th October 2022 02:37 PM | A+A A-

ಅಜಯ್ ರಾವ್
ನಿರ್ದೇಶಕ ಶಿವ ತೇಜಸ್ ಅವರ ರೊಮ್ಯಾಂಟಿಕ್ ಕಾಮಿಡಿ, ದಿಲ್ ಪಸಂದ್ ನವೆಂಬರ್ 11 ರಂದು ಬಿಡುಗಡೆಯಾಗಲಿದೆ. ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಈ ಚಿತ್ರದಲ್ಲಿ ನಟ ಅಜಯ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಅಜಯ್ ರಾವ್ ಕೃಷ್ಣ ಎಂದೇ ಫೇಮಸ್ ಆಗಿದ್ದಾರೆ. ಅಜಯ್ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದ ನಿರ್ಮಾಪಕ ಸುಮಂತ್ ಕ್ರಾಂತಿ, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂದಷ್ಟೇ ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಕೃಷ್ಣ ಸೀರಿಸ್ ಸಿನಿಮಾಗಳಲ್ಲಿ ನಟಿಸಿರುವ ಅಜೇಯ್ ರಾವ್ ಈಗ “ಡಾರ್ಲಿಂಗ್ ಕೃಷ್ಣ’ ಜೊತೆ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಪಾತ್ರವನ್ನು ನೀವು ಅತಿಥಿ ಅಥವಾ ಪ್ರಮುಖ ಪಾತ್ರ ಎಂದಾದರೂ ಕರೆಯಬಹುದು.
ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ ಅಭಿನಯದ 'ದಿಲ್ ಪಸಂದ್' ಬಿಡುಗಡೆಗೆ ದಿನಾಂಕ ಫಿಕ್ಸ್
ಈಗಾಗಲೇ ಹಾಡು, ಟೀಸರ್ ಮೂಲಕ ಗೆಲುವಿನ ಭರವಸೆ ಮೂಡಿಸಿರುವ ಸಿನಿಮಾ ಔಟ್ ಅಂಡ್ ಔಟ್ ಕಾಮಿಡಿ ಕಂ ಫ್ಯಾಮಿಲಿ ಡ್ರಾಮಾ. ಈ ಹಿಂದೆ “ಧೈರ್ಯಂ’, “ಮಳೆ’ ಸಿನಿಮಾಗಳನ್ನು ನಿರ್ದೇಶಿಸಿರುವ ಶಿವ ತೇಜಸ್ ಈ ಸಿನಿಮಾದ ನಿರ್ದೇಶಕರು. ರಶ್ಮಿ ಫಿಲಂಸ್ ಬ್ಯಾನರ್ ನಡಿ ಈ ಚಿತ್ರವನ್ನು ಸುಮನ್ ಕ್ರಾಂತಿ ನಿರ್ಮಿಸಿದ್ದಾರೆ.
ರಶ್ಮಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ದಿಲ್ ಪಸಂದ್, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಅರುಣಾ ಬಾಲರಾಜ್ ಮತ್ತು ಗಿರಿ ಶಿವಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತದೊಂದಿಗೆ, ದಿಲ್ ಪಸಂದ್ ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.