ಸಂಕ್ರಾಂತಿಗೆ ಆದಿಪುರುಷ್ ಜೊತೆ ವಾರಿಸು ಬಾಕ್ಸ್ ಆಫೀಸ್ ಪೈಪೋಟಿ!
ದೀಪಾವಳಿ ಸಂದರ್ಭದಲ್ಲಿ ವಿಜಯ್ ದಳಪತಿ ಅಭಿನಯದ ಬಹು ನಿರೀಕ್ಷಿತ ವಾರಿಸು ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರ ಘೋಷಿಸಿದ್ದಾರೆ. ಮುಂದಿನ ವರ್ಷದ ಸಂಕ್ರಾಂತಿ ಹಬ್ಬದಂದು ವಾರಿಸು ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.
Published: 24th October 2022 03:35 PM | Last Updated: 25th October 2022 02:34 PM | A+A A-

ಪ್ರಭಾಸ್, ವಿಜಯ್
ಚೆನ್ನೈ: ದೀಪಾವಳಿ ಸಂದರ್ಭದಲ್ಲಿ ವಿಜಯ್ ದಳಪತಿ ಅಭಿನಯದ ಬಹು ನಿರೀಕ್ಷಿತ ವಾರಿಸು ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರ ಘೋಷಿಸಿದ್ದಾರೆ. ಮುಂದಿನ ವರ್ಷದ ಸಂಕ್ರಾಂತಿ ಹಬ್ಬದಂದು ವಾರಿಸು ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ.
ದೀಪಾವಳಿ ದಿನದಂದು ವಿಜಯ್ ಅವರ ಹೊಸ ಫೋಸ್ಟರ್ ಒಂದು ಬಿಡುಗಡೆಯಾಗಿದೆ. ನೆಲದ ಮೇಲೆ ನೋವಿನಲ್ಲಿ ಮಲಗಿರುವ ಜನರ ಮಧ್ಯೆ ವಿಜಯ್ ಸುತ್ತಿಗೆ ಹಿಡಿದು ನಡೆಯುತ್ತಿರುವ ಆಕರ್ಷಕ ಫೋಸ್ಟರ್ ಇದಾಗಿದೆ. ತಮಿಳಿನ ಜೊತೆಗೆ ತೆಲುಗಿನಲ್ಲಿಯೂ ಅದೇ ದಿನ ವಾರಸು ಬಿಡುಗಡೆಯಾಗಲಿದೆ. ವಾರಿಸು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಪ್ರಭು, ಶರತ್ ಕುಮಾರ್, ಶ್ರೀಕಾಂತ್ ಮತ್ತಿತರರು ನಟಿಸಿದ್ದಾರೆ.
Happy Diwali nanba
Next week la irundhu summa pattasa irukum #VarisuPongal #Thalapathy @actorvijay sir @directorvamshi @iamRashmika @MusicThaman @KarthikPalanidp @Cinemainmygenes @scolourpencils @vaishnavi141081 #Varisu pic.twitter.com/M9KuWSfhuE— Sri Venkateswara Creations (@SVC_official) October 24, 2022
ಸಂಕ್ರಾಂತಿ ಸಂದರ್ಭದಲ್ಲಿ ಪ್ರಭಾಸ್ ನಟನೆಯ ಆದಿಪುರುಷ್ ಜೊತೆಗೆ ವಾರಿಸು ಬಾಕ್ಸ್ ಆಫೀಸ್ ಪೈಪೋಟಿ ನಡೆಸಲಿದೆ. ರಾಮಾಯಣ ಮಹಾಕಾವ್ಯ ಆಧಾರಿತ ಆದಿಪುರುಷ್ ಚಿತ್ರಕ್ಕೆ ಓಂ ರಾವತ್ ಕಥೆ ಬರೆದು, ಅವರೇ ನಿರ್ದೇಶಿಸಿದ್ದು, ಸೈಫ್ ಅಲಿಖೈನ್, ಕೃತಿ ಸಾನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಕ್ರಾಂತಿಗೂ ಎರಡು ದಿನ ಮುನ್ನ ಜನವರಿ 12 ರಂದು ಈ ಎರಡು ಚಿತ್ರಗಳು ಬಿಡುಗಡೆಯಾಗಲಿವೆ.