'ಕಾಂತಾರ'ಕ್ಕೆ ಕಾನೂನು ಸಂಕಷ್ಟ: 'ವರಾಹ ರೂಪಂ' ಹಾಡು ಪ್ರಸಾರ ಮಾಡದಂತೆ ಕೇರಳ ಸೆಷನ್ಸ್ ಕೋರ್ಟ್ ಆದೇಶ

ಕರಾವಳಿಯ ಭೂತ-ದೈವಕೋಲದ ಕಥೆಯನ್ನು ಹೊಂದಿರುವ ಕನ್ನಡ ಭಾಷೆಯಲ್ಲಿ ತಯಾರಾದ ಕಾಂತಾರ ಚಿತ್ರ ಯಶಸ್ವಿಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈಗ ಬಿಡುಗಡೆಯಾಗಿ ಬೇರೆ ಭಾಷೆಗಳಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. 
ಕಾಂತಾರ ಚಿತ್ರದ ಸ್ಟಿಲ್
ಕಾಂತಾರ ಚಿತ್ರದ ಸ್ಟಿಲ್

ತಿರುವನಂತಪುರ: ಕರಾವಳಿಯ ಭೂತ-ದೈವಕೋಲದ ಕಥೆಯನ್ನು ಹೊಂದಿರುವ ಕನ್ನಡ ಭಾಷೆಯಲ್ಲಿ ತಯಾರಾದ ಕಾಂತಾರ ಚಿತ್ರ(Kantara film) ಯಶಸ್ವಿಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈಗ ಬಿಡುಗಡೆಯಾಗಿ ಬೇರೆ ಭಾಷೆಗಳಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. 

ಈ ಮಧ್ಯೆ ಕಾಂತಾರ ಚಿತ್ರದ ಜನಪ್ರಿಯ ಗೀತೆ ವರಾಹ ರೂಪಂ (Varaha Roopam) ಹಾಡಿನ ಸಂಗೀತ ಸ್ವಂತದ್ದಲ್ಲ, ಮಲಯಾಳಂನ ನವರಸಂ ಹಾಡಿನ ನಕಲು ಎಂಬ ಆರೋಪ ಚಿತ್ರ ಯಶಸ್ಸು ಕಾಣುತ್ತಿದ್ದಂತೆ ಕೇಳಿಬಂತು. ಅಷ್ಟಕ್ಕೇ ನಿಲ್ಲದೆ ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಗೀತೆ ಮೂಲಕ ಕಾಪಿರೈಟ್ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ಮೂಲ ಹಾಡು ತಯಾರಿಸಿದ ಕೇರಳದ ತೈಕ್ಕುಡಂ ಬ್ರಿಡ್ಜ್​ ಎಂಬ ಸಂಗೀತ ಕಂಪನಿ ಕೋರ್ಟ್ ಮೊರೆ ಹೋಗಿತ್ತು. 

ಇದೀಗ ಯಶಸ್ಸು, ಜನಪ್ರಿಯತೆ ನಡುವೆ ಕಾಂತಾರ ಚಿತ್ರಕ್ಕೆ ಕಾನೂನು ಸಂಕಟ ಎದುರಾಗಿದೆ. ತೈಕ್ಕುಡಂ ಬ್ರಿಡ್ಜ್(Thaikkudam Bridge) ದೂರು ಹಿನ್ನೆಲೆ ಕೇರಳದ ಸೆಷನ್ಸ್ ಕೋರ್ಟ್​ ವರಾಹರೂಪಂ ಹಾಡು ಪ್ರಸಾರಕ್ಕೆ ತಡೆ ನೀಡಿದ್ದು, ಪ್ರಸಾರ ಮಾಡಬೇಕಾದರೆ ತೈಕ್ಕುಡಂ ಬ್ರಿಡ್ಜ್ ಅನುಮತಿ ಬೇಕು ಎಂದು ಹೇಳಿದೆ. ಇದನ್ನು ಸ್ವತಃ ತೈಕ್ಕುಡಂ ಬ್ರಿಡ್ಜ್ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದೆ.

ಕೋಝಿಕ್ಕೋಡ್ ನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಅಮೆಜಾನ್, ಯೂಟ್ಯೂಬ್, ಸ್ಪೂಟಿಫೈ, ವೈಂಕ್ ಮ್ಯೂಸಿಕ್, ಜಿಯೊಸವನ್ ಮತ್ತು ಇತರ ಆನ್ ಲೈನ್ ಮಾಧ್ಯಮಗಳಿಗೆ ಕಾಂತಾರ ಚಿತ್ರದ ವರಾಹ ರೂಪಂ ಹಾಡನ್ನು ತೈಕ್ಕುಡಂ ಬ್ರಿಡ್ಜ್ ಅನುಮತಿಯಿಲ್ಲದೆ ಪ್ರಸಾರ ಮಾಡಬಾರದು ಎಂದು ಆದೇಶ ನೀಡಿದ್ದಾರೆ. 

ವರಾಹರೂಪಂ ಹಾಡಿನ ಸಂಗೀತ ಮೂಲ ಅಲ್ಲ, ಮಲಯಾಳಂ ಹಾಡಿನ ನಕಲು ಎಂದು ಸುಪ್ರೀಂ ಕೋರ್ಟ್​ ವಕೀಲ ಸತೀಶ್ ಮೂರ್ತಿ ಅರ್ಜಿ ಸಲ್ಲಿಸಿದ್ದರು. ಕೋರ್ಟ್​ ಎಲ್ಲಿಯೂ ಹಾಡು ಪ್ರಸಾರ ಮಾಡದಂತೆ ತಡೆ ನೀಡಿದೆ. ಯೂಟ್ಯೂಬ್, ಸ್ಪೊಟಿಪೈ ಸೇರಿ ಹಲವೆಡೆ ಪ್ರಸಾರ ಮಾಡದಂತೆ ತಡೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com