ನಟ ರಮೇಶ್ ಅರವಿಂದ್ ಸೇರಿ ಮೂವರಿಗೆ ರಾಣಿ ಚೆನ್ನಮ್ಮ ವಿ.ವಿ ಗೌರವ ಡಾಕ್ಟರೇಟ್: ನಾಳೆ ಪ್ರದಾನ
ಖ್ಯಾತ ನಟ, ವಾಗ್ಮಿ ರಮೇಶ್ ಅರವಿಂದ್ (Ramesh Aravind) ಸೇರಿ ಮೂವರಿಗೆ ಬೆಳಗಾವಿಯ ರಾಣಿ ಚೆನ್ನಮ್ಮ (Rani Chennamma) ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Honorary Doctorate) ಘೋಷಿಸಲಾಗಿದೆ.
Published: 13th September 2022 11:57 AM | Last Updated: 13th September 2022 02:04 PM | A+A A-

ನಟ ರಮೇಶ್ ಅರವಿಂದ್
ಬೆಂಗಳೂರು: ಖ್ಯಾತ ನಟ, ವಾಗ್ಮಿ ರಮೇಶ್ ಅರವಿಂದ್ (Ramesh Aravind) ಸೇರಿ ಮೂವರಿಗೆ ಬೆಳಗಾವಿಯ ರಾಣಿ ಚೆನ್ನಮ್ಮ (Rani Chennamma) ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Honorary Doctorate) ಘೋಷಿಸಲಾಗಿದೆ.
ಕನ್ನಡ ಚಿತ್ರರಂಗಕ್ಕೆ (Sandalwood) ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಮೇಶ್ ಅವರನ್ನು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲಾಗಿದೆ.
. #RaniChannammaUniversity tol felicitate @Ramesh_aravind
with a honorary doctorate on #Sept14 pic.twitter.com/EwaPV6Th7e— A Sharadhaa (@sharadasrinidhi) September 13, 2022
ರಮೇಶ್ ಅರವಿಂದ್ ಅವರ ಜೊತೆ ಸಮಾಜ ಸೇವೆ ಕ್ಷೇತ್ರದಲ್ಲಿ ವಿ.ರವಿಚಂದರ್, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈದ ಮಾತೆ ಅಕ್ಕ ಅನ್ನಪೂರ್ಣ ತಾಯಿಗೆ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೊಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.
ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರಚಂದ ಗೆಹ್ಲೋಟ್ ವಹಿಸಲಿದ್ದು, ಆಂಧ್ರ ಪ್ರದೇಶದ ಕೇಂದ್ರಿಯ ಬುಡಕಟ್ಟು ವಿವಿ ಕುಲಪತಿ ಪ್ರೊ. ಟಿ.ವಿ ಕಟ್ಟಿಮನಿ ಅವರಿಂದ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಣ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ರಾಣಿ ಚೆನ್ನಮ್ಮ ವಿವಿ ಕುಲಪತಿ ಪ್ರೊ. ರಾಮಚಂದ್ರೆಗೌಡ ತಿಳಿಸಿದ್ದಾರೆ.