ಕಬ್ಜ ಟೀಸರ್ ರಿಲೀಸ್: ಉಪ್ಪಿ- ಕಿಚ್ಚನ ಲುಕ್ ಗೆ ಫ್ಯಾನ್ಸ್ ಫಿದಾ; ಆರ್.ಚಂದ್ರು ಸಿನಿಮಾ ಬಗ್ಗೆ ನಟಿ ಶ್ರೀಯಾ ಶರಣ್ ಹೇಳಿದ್ದೇನು?
ಬಿಗ್ ಬಜೆಟ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಕಬ್ಜ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಭಾರಿ ಪ್ರಶಂಸೆ ವ್ಯಕ್ತವಾಗ್ತಿದೆ. ಉಪೇಂದ್ರ ಅಭಿಮಾನಿಗಳೂ ಸೇರಿದಂತೆ ಸಿನಿಪ್ರಿಯರು ವಿಭಿನ್ನ ಟೀಸರ್ಗೆ ಮನಸೋತಿದ್ದಾರೆ.
ಸೆಪ್ಟೆಂಬರ್ 17ರಂದು ರಿಲೀಸ್ ಆಗಿರುವ ಟೀಸರ್ ಈಗಾಗಲೇ ಒಂದೂವರೆ ಕೋಟಿಗೂ ಹೆಚ್ಚು ವೀಕ್ಷಣೆ ಗಳಿಸಿದೆ. ಪರಭಾಷೆಯಲ್ಲೂ ಚಿತ್ರಕ್ಕೆ ಜನಪ್ರಿಯತೆ ಗಳಿಸುತ್ತಿದೆ.
ನಟರಾದ ಉಪೇಂದ್ರ ಹಾಗೂ ಸುದೀಪ್ ಅವರ ಕಾಂಬಿನೇಶನ್‌ನ ‘ಕಬ್ಜ’ ಚಿತ್ರದ ಟೀಸರ್ ಬಿಡುಗಡೆ ಆದ 24 ಗಂಟೆ ಅವಧಿಯಲ್ಲಿ 12.5 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಆನಂದ್ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್ ಅಧಿಕೃತವಾಗಿ ಬಿಡುಗಡೆ ಆಗಿದ್ದು, ಈ ಒಂದೇ ಆನಂದ್ ಯೂಟ್ಯೂಬ್‌ನಲ್ಲೇ ಟೀಸರ್ 10 ಮಿಲಿಯನ್ ಗಡಿ ದಾಟುವ ಮೂಲಕ ಹೊಸ ದಾಖಲೆ ಮಾಡಿದೆ.
ಆರ್ ಚಂದ್ರು ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರದ ಟೀಸರ್ ದೃಶ್ಯಗಳು ಹಾಗೂ ಹಿನ್ನೆಲೆ ಸಂಗೀತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ರೀರೇಕಾರ್ಡಿಂಗ್‌ಗೆ ನೋಡುಗರರು ಫಿದಾ ಆಗಿದ್ದಾರೆ. ಭಾರ್ಗವ್ ಬಕ್ಷಿ ಎಂಬ ಪ್ರಮುಖ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಶ್ರೀಯಾ ಶರಣ್ ಕೂಡ ನಾಯಕಿಯಾಗಿ ನಟಿಸಿದ್ದಾರೆ.
ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಚಿತ್ರದಲ್ಲಿ ನಟನೆ ಮಾಡಿದ್ದು, ಉಪ್ಪಿ ಮಾಸ್ ಲುಕ್ನಲ್ಲಿ ಮಿಂಚಿದ್ದಾರೆ. ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಬೆಂಗಾಲಿ ಸೇರಿ 7 ಭಾಷೆಯಲ್ಲಿ ರಿಲೀಸ್ ಆಗಲಿದೆ. 7 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕಬ್ಡ ಟೀಸರ್ ನಮ್ಮನ್ನು ಸ್ವಾತಂತ್ರ್ಯಪೂರ್ವದ ಅವಧಿಗೆ (1942) ಕೊಂಡೊಯ್ಯುತ್ತದೆ. ವ್ಯಕ್ತಿಯ ಜೀವನದ ಆರಂಭ, ಭೂಗತ ಲೋಕದ ಡಾನ್‌ನ ಜೀವನದಲ್ಲಿ ಕೊನೆಗೊಳ್ಳುತ್ತದೆ. ಯೋಜನೆಯಲ್ಲಿ ತೊಡಗಿರುವ ತಂತ್ರಜ್ಞರ ಗುಣಮಟ್ಟ ಟೀಸರ್ ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಡಿಸೆಂಬರ್ ನಲ್ಲಿ ರಿಲೀಸ್ ಆಗಲಿದೆ.
ನನ್ನ ಪಾತ್ರದ ಬಗ್ಗೆ ನಾನು ಏನೂ ಹೇಳುವಂತಿಲ್ಲ. ಟೀಸರ್ ನೋಡಿದ ಮೇಲೆ ಅನಿಸಿದ್ದು. ತುಂಬಾ ಎಮೋಷನ್ ಆಗಿ ಸಾಗುವ ಪಾತ್ರ ನನ್ನದು. ಅತ್ಯಂತ ದುಬಾರಿ ಮತ್ತು ಆಪ್ತವಾದ ಪಾತ್ರವನ್ನು ನನಗೆ ಕೊಟ್ಟಿದ್ದಾರೆ. ‘ಕಬ್ಜ’ ಚಿತ್ರದಲ್ಲಿ ನಟಿಸುತ್ತಿದ್ದು ಖುಷಿ ಆಯಿತು.
ನನಗೆ ಆರ್ ಚಂದ್ರು ಅವರು ಕಥೆ ಹೇಳಲು ಬಂದಾಗ, ಕಥೆ ಕೇಳಿ, ನಿಜವಾಗಿಯೂ ಈ ರೀತಿ ಮಾಡಲು ಆಗುವುದಾ? ಅಂತಾ ಕೇಳಿದ್ದೆ. ಚಿತ್ರೀಕರಣ ನಡೆಯುತ್ತಿರುವಾಗ ಚಂದ್ರು ಅವರ ಕಾರ್ಯ ವೈಖರಿ ನೋಡಿ ಆಶ್ಚರ್ಯವಾಯಿತು.
“ನಾನು ಮೊದಲ ಬಾರಿಗೆ ಉಪೇಂದ್ರ ಅವರೊಂದಿಗೆ ಕೆಲಸ ಮಾಡುವಾಗ ನಾನು ಸೂಪರ್‌ಸ್ಟಾರ್‌ನೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ನನಗೆ ನೆನಪಿಸಿಕೊಳ್ಳಬೇಕಾಗಿತ್ತು. ಏಕೆಂದರೆ ಅವರು ತುಂಬಾ ಸರಳ ವ್ಯಕ್ತಿ ಮತ್ತು ಡೌನ್ ಟು ಅರ್ತ್ ವ್ಯಕ್ತಿತ್ವ ಎಂದು ಶ್ರೀಯಾ ಶರಣ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ