ಫಾರೆಸ್ಟ್ ಗಾರ್ಡ್ ಪಾತ್ರ ಮಾಡಿದ್ದು ಹೆಮ್ಮೆಯ ವಿಷಯ: 'ಕಾಂತಾರ' ನಾಯಕಿ ಸಪ್ತಮಿ ಗೌಡ

ರಿಷಬ್ ಶೆಟ್ಟಿ, ಸಪ್ತಮಿ ಗೌಡ ಅಭಿನಯದ ಕಾಂತಾರ ಸಿನಿಮಾ ಭಾರೀ ಸದ್ದುಮಾಡುತ್ತಿದೆ. ಸೂರಿಯ ಪಾಪ್‌ಕಾರ್ನ್ ಮಂಕಿ ಟೈಗರ್‌ನೊಂದಿಗೆ ಸಪ್ತಮಿ ಗೌಡ ಮೊದಲ ದೊಡ್ಡ ಬ್ರೇಕ್ ಪಡೆದರು. ಗಿರಿಜಾ ಪಾತ್ರದಲ್ಲಿ ಅವರಿಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾದವು. 
ಸಪ್ತಮಿ ಗೌಡ, ರಿಷಬ್ ಶೆಟ್ಟಿ
ಸಪ್ತಮಿ ಗೌಡ, ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ, ಸಪ್ತಮಿ ಗೌಡ ಅಭಿನಯದ ಕಾಂತಾರ ಸಿನಿಮಾ ಭಾರೀ ಸದ್ದುಮಾಡುತ್ತಿದೆ. ಸೂರಿಯ ಪಾಪ್‌ಕಾರ್ನ್ ಮಂಕಿ ಟೈಗರ್‌ನೊಂದಿಗೆ ಸಪ್ತಮಿ ಗೌಡ ಮೊದಲ ದೊಡ್ಡ ಬ್ರೇಕ್ ಪಡೆದರು. ಗಿರಿಜಾ ಪಾತ್ರದಲ್ಲಿ ಅವರಿಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾದವು. 

ಪ್ರತಿ ಚಿತ್ರದಲ್ಲಿ ಭಿನ್ನ ಪಾತ್ರಗಳನ್ನು ನಿರ್ವಹಿಸಿಬೇಕೆಂಬ ನಂಬಿಕೆ ಸಪ್ತಮಿ ಗೌಡ ಅವರಲ್ಲಿ ಬಲವಾಯಿತು. ತಮ್ಮ ಎರಡನೇ ಚಿತ್ರದಲ್ಲಿ ಸಪ್ತಮಿ ಗೌಡ, ರಿಷಬ್ ಶೆಟ್ಟಿ ಅವರ ಕಾಂತಾರದಲ್ಲಿ ಅರಣ್ಯ ಸಿಬ್ಬಂದಿ ಲೀಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

"ಪಿಎಂಟಿಯಲ್ಲಿ ಗಿರಿಜಾ ಪಾತ್ರಕ್ಕೆ ನನಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ನಂತರ ಅಂತಹದ್ದೇ ಪಾತ್ರ ಬರಲಾರಂಭಿಸಿತು. ನನಗೆ ಸಂಪೂರ್ಣ ಭಿನ್ನ ಪಾತ್ರ ಮಾಡಬೇಕೆಂಬ ಬಯಕೆ ಹೆಚ್ಚಾಗಿದ್ದರಿಂದ ಕಾಂತಾರ ಪಾತ್ರ ನನಗೆ ಹಿಡಿಸಿತುಎಂದು ಕಾಂತಾರ ಚಿತ್ರದಲ್ಲಿ ಲೀಲಾ ಪಾತ್ರವನ್ನು ನಿರ್ವಹಿಸಿದ ಬಗ್ಗೆ ಹೇಳುತ್ತಾರೆ. ಚಿತ್ರದ ಆಡಿಷನ್ ಗೆ ಕರೆ ಬಂದಿದ್ದು ನನ್ನ ವೃತ್ತಿಜೀವನದ ಮುಖ್ಯ ಘಟ್ಟವಾಗಿತ್ತು ಎಂದು ನೆನಪಿಸಿಕೊಂಡರು. 

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ನಾವೆಲ್ಲರೂ ಮನೆಯಲ್ಲಿರುವಂತಹ ಸಂದರ್ಭದಲ್ಲಿ ಕರ್ನಾಟಕ ಪ್ರವಾಸೋದ್ಯಮ ಬಗ್ಗೆ ನಾನೊಂದು ಸಾಕ್ಷ್ಯಚಿತ್ರದಲ್ಲಿ ನಟಿಸುತ್ತಿದ್ದೆ. ಅದರಲ್ಲಿನ ಒಂದು ಫೋಟೋ ನಿರ್ದೇಶಕರ ಗಮನ ಸೆಳೆದು ನನ್ನನ್ನು ಆಡಿಶನ್ ಗೆ ಕರೆದರು ಎನ್ನುತ್ತಾರೆ. 

<strong>ಫಾರೆಸ್ಟ್ ಗಾರ್ಡ್ ಪಾತ್ರದಲ್ಲಿ ಸಪ್ತಮಿ ಗೌಡ </strong>
ಫಾರೆಸ್ಟ್ ಗಾರ್ಡ್ ಪಾತ್ರದಲ್ಲಿ ಸಪ್ತಮಿ ಗೌಡ 

ಚಿತ್ರದಲ್ಲಿ ಕಿಶೋರ್, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಸೇರಿದಂತೆ ಚಿತ್ರದಲ್ಲಿ ಎಲ್ಲರೂ ಉತ್ತಮ ನಟರು, ಉಳಿದವರು ರಂಗಭೂಮಿ ಹಿನ್ನೆಲೆಯಿಂದ ಬಂದವರು.ನನಗೆ ಕೇವಲ ಒಂದು ಚಿತ್ರದಲ್ಲಿ ನಟಿಸಿದ ಅನುಭವ ಮಾತ್ರ ಇದ್ದದ್ದು, ಹಿರಿಯ ಕಲಾವಿದರೊಂದಿಗೆ ಹೊಂದಿಕೆಯಾಗುವುದು ಕಠಿಣ ಎಂದು ಭಾವಿಸಿದೆ. ಚಿತ್ರದ ಶೂಟಿಂಗ್ ಗೆ ಮೊದಲು ವರ್ಕ್ ಶಾಪ್ ಮಾಡಿಸಿದರು. ಲೀಲಾ ಪಾತ್ರವನ್ನು ಅರ್ಥ ಮಾಡಿಕೊಳ್ಳುತ್ತಾ ಹೋದೆ, ಕರಾವಳಿ ಸಂಸ್ಕೃತಿಯನ್ನು ಅರಿತುಕೊಂಡ ನಂತರ ಅಲ್ಲಿನ ಆಡುಭಾಷೆಯ ಮೇಲೆ ಹಿಡಿತ ಸಾಧಿಸಿದ ಮೇಲೆಯೇ ಪಾತ್ರಕ್ಕೆ ಸಿದ್ಧಗೊಳಿಸಿದರು. ನಟಿಸುವಾಗ ನಿರ್ದೇಶಕರನ್ನು ನಿರಾಶೆಗೊಳಿಸಲಿಲ್ಲ ಎಂಬ ತೃಪ್ತಿಯಿದೆ ಎಂದರು. 

ಲೀಲಾ ಪಾತ್ರವು ವಿಶಿಷ್ಟವಾಗಿದೆ. 90 ರ ದಶಕದ ಮೊದಲ ಮಹಿಳಾ ಅಧಿಕಾರಿಯ ಬಗ್ಗೆ ಕಥೆ ಹೇಳುತ್ತದೆ. ಅರಣ್ಯ, ಸಿಬ್ಬಂದಿಗಳ ಜೊತೆ ಒಡನಾಟ ನಡೆಸಿ ಅವರ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಶೂಟಿಂಗ್‌ನಲ್ಲಿದ್ದಾಗ ಅಧಿಕಾರಿಯನ್ನು ಭೇಟಿಯಾಗಬೇಕಾಯಿತು. ಸಮವಸ್ತ್ರವನ್ನು ಧರಿಸಿದಾಗ ಹೆಮ್ಮೆ ಮೂಡುತ್ತಿತ್ತು. ಶೂಟಿಂಗ್ ಮುಗಿದ ನಂತರವೂ ಸಮವಸ್ತ್ರವನ್ನು ತೊಳೆಯದೆ ಹಾಗೆ ಇಟ್ಟುಕೊಂಡಿದ್ದೇನೆ. ರಿಷಬ್ ಶೆಟ್ಟಿ ಅವರ ಜೊತೆ ಕೆಲಸ ಮಾಡುವುದು ಒಂದು ಸುವರ್ಣಾವಕಾಶ ಎಂದ ಸಪ್ತಮಿ, ಹೊಂಬಾಳೆ ಫಿಲಂಸ್‌ ಜೊತೆಗಿನ ಕೆಲಸ ಕೇಕ್ ಮೇಲೆ ಐಸ್ ಇಟ್ಟಂತೆ ಎಂದು ಹೇಳಿ ಮಾತು ಮುಗಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com