ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಒಂದು ಪಕ್ಷಕ್ಕೆ ನಾನು ಸೀಮಿತ ಅಲ್ಲ, ಯಾರ ಪರವಾಗಿ ಟಿಕೆಟ್ ಕೇಳುವುದೂ ಇಲ್ಲ: ಕಿಚ್ಚ ಸುದೀಪ್ ಸ್ಪಷ್ಟನೆ

ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಯಾರ ಪರವಾಗಿ ಚುನಾವಣೆಯಲ್ಲಿ ಟಿಕೆಟ್ ಕೇಳುವುದೂ ಇಲ್ಲ, ಟಿಕೆಟ್ ಕೇಳುವಷ್ಟು ದೊಡ್ಡವನು ನಾನಲ್ಲ, ಅಬ್ಬಬ್ಬಾ ಅಂದರೆ ಸಿನಿಮಾ ನೋಡಲು ಟಿಕೆಟ್ ಕೊಡಿಸಬಹುದು ಅಷ್ಟೆ, ಸಿಎಂ ಬೊಮ್ಮಾಯಿಯವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಿರುವುದು ಸತ್ಯ ಎಂದು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.
ಕಿಚ್ಚ ಸುದೀಪ್
ಕಿಚ್ಚ ಸುದೀಪ್

ಬೆಂಗಳೂರು: ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಯಾರ ಪರವಾಗಿ ಚುನಾವಣೆಯಲ್ಲಿ ಟಿಕೆಟ್ ಕೇಳುವುದೂ ಇಲ್ಲ, ಟಿಕೆಟ್ ಕೇಳುವಷ್ಟು ದೊಡ್ಡವನು ನಾನಲ್ಲ, ಅಬ್ಬಬ್ಬಾ ಅಂದರೆ ಸಿನಿಮಾ ನೋಡಲು ಟಿಕೆಟ್ ಕೊಡಿಸಬಹುದು ಅಷ್ಟೆ, ಸಿಎಂ ಬೊಮ್ಮಾಯಿಯವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಿರುವುದು ಸತ್ಯ ಎಂದು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ತಮ್ಮ ನಿವಾಸದ ಮುಂದೆ ಸಿಎಂ ಬೊಮ್ಮಾಯಿಯವರ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಲು ತೆರಳುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸುವ ವೇಳೆ ಹೇಳಿದರು. ನಾನು ಸುದ್ದಿಗೋಷ್ಠಿಯಲ್ಲಿ ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತೇನೆ, ಈಗಲೇ ಎಲ್ಲದಕ್ಕೂ ಉತ್ತರ ನೀಡುವುದಕ್ಕೆ ಆಗುವುದಿಲ್ಲ. 

ನಾನು ಚಿತ್ರರಂಗಕ್ಕೆ ಬಂದಾಗಿನಿಂದ ನಮಗೆ ವೃತ್ತಿಯಲ್ಲಿ ಬೆಂಬಲ ನೀಡಿದವರು, ಸಹಾಯ ಮಾಡಿದವರ ನಿಲುವುಗಳಿಗೆ ಬೆಂಬಲ ನೀಡಬೇಕಾಗುತ್ತದೆ. ನನಗೆ ಎಲ್ಲ ಪಕ್ಷದಲ್ಲಿಯೂ ಹಿತೈಷಿಗಳಿದ್ದಾರೆ, ಆತ್ಮೀಯರಿದ್ದಾರೆ. ಕೆಲವು ನಿಲುವುಗಳನ್ನು ನಮ್ಮ ಪರ ನಿಂತುಕೊಂಡು ಬಂದವರಿಗೆ ತೋರಿಸಬೇಕಾಗುತ್ತದೆ, ನಾನು ಯಾವುದೇ ಪಕ್ಷಕ್ಕೆ ಸೀಮಿತ ವ್ಯಕ್ತಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಬೆದರಿಕೆ ಪತ್ರದ ವಿರುದ್ಧ ಕ್ರಮ: ಚಿತ್ರರಂಗ ಎಲ್ಲಾ ಉದ್ಯಮದಂತೆ ಒಳ್ಳೆಯವರು, ಕೆಟ್ಟವರು, ನಮಗೆ ಬೇಕಾದವರು, ಆದವರು, ಆಗದವರು ಇದ್ದಾರೆ. ನನ್ನ ಮನೆಯ ವಿಳಾಸ ಗೊತ್ತಿದೆ, ಹೀಗಾಗಿ ಬೆದರಿಕೆ ಪತ್ರ ಕಳುಹಿಸಿದ್ದಾರೆ. ಇದು ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಂದು ಗೊತ್ತಿದೆ. ಕ್ರಮ ತೆಗೆದುಕೊಳ್ಳಲು ದೂರು ನೀಡಿದ್ದೇವೆ, ಇಂತಹ ಬೆದರಿಕೆಗಳಿಗೆಲ್ಲ ಹೆದರುವವನು ನಾನಲ್ಲ ಎಂದರು. 

ನನಗೆ ಬಂದ ಬೆದರಿಕೆ ಪತ್ರಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ, ಇದು ಚಿತ್ರರಂಗದಲ್ಲಿರುವವರೇ ಮಾಡಿದ್ದಾರೆ.ಯಾರು ಮಾಡಿದ್ದಾರೆ ಎಂದು ಸಹ ನನಗೆ ಗೊತ್ತಿದೆ. ಅವರಿಗೆ ಯಾವ ಮಾರ್ಗದಲ್ಲಿ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇನೆ. ಆ ಬಗ್ಗೆ ಇವತ್ತು ಮಾತನಾಡುವುದಿಲ್ಲ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com