ನಟನೆ ಬಳಿಕ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರ ನಿರ್ದೇಶನ; ನಟ ದುಲ್ಕರ್ ಸಲ್ಮಾನ್ ಹೇಳಿದ್ದಿಷ್ಟು...

ನಟ ದುಲ್ಕರ್ ಸಲ್ಮಾನ್ ಈಗಾಗಲೇ ತಮ್ಮ ಮಲಯಾಳಂ ಜೊತೆಗೆ, ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ನಟಿಸಿ ಯಶಸ್ವಿ ನಟನಾಗಿ ಹೊರಹೊಮ್ಮಿದ್ದಾರೆ. ದುಲ್ಕರ್ ಈವರೆಗೆ ಸಿನಿಮಾ ಮಾಡದ ಏಕೈಕ ಪ್ರಾದೇಶಿಕ ಉದ್ಯಮವೆಂದರೆ ಅದು ಕನ್ನಡ ಸಿನಿಮಾ ಇಂಡಸ್ಟ್ರಿ.
ದುಲ್ಕರ್ ಸಲ್ಮಾನ್ - ರಾಜ್ ಬಿ ಶೆಟ್ಟಿ
ದುಲ್ಕರ್ ಸಲ್ಮಾನ್ - ರಾಜ್ ಬಿ ಶೆಟ್ಟಿ
Updated on

ನಟ ದುಲ್ಕರ್ ಸಲ್ಮಾನ್ ಈಗಾಗಲೇ ತಮ್ಮ ಮಲಯಾಳಂ ಜೊತೆಗೆ, ತಮಿಳು, ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ನಟಿಸಿ ಯಶಸ್ವಿ ನಟನಾಗಿ ಹೊರಹೊಮ್ಮಿದ್ದಾರೆ. ದುಲ್ಕರ್ ಈವರೆಗೆ ಸಿನಿಮಾ ಮಾಡದ ಏಕೈಕ ಪ್ರಾದೇಶಿಕ ಉದ್ಯಮವೆಂದರೆ ಅದು ಕನ್ನಡ ಸಿನಿಮಾ ಇಂಡಸ್ಟ್ರಿ.

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ನಟ, ಇದು ಉದ್ದೇಶಪೂರ್ವಕ ಆಯ್ಕೆಯಲ್ಲ ಮತ್ತು ಕನ್ನಡ ಚಿತ್ರರಂಗದಿಂದ ರೋಮಾಂಚನಕಾರಿ ಸಂಗತಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರೊಂದಿಗಿನ ಸಂಭವನೀಯ ಸಹಯೋಗವನ್ನು ದುಲ್ಕರ್ ಸಲ್ಮಾನ್ ಬಹಿರಂಗಪಡಿಸಿದ್ದಾರೆ. ತಮ್ಮ ಸ್ವಂತ ಬ್ಯಾನರ್ ವೇಫೇರರ್ ಫಿಲ್ಮ್ಸ್ ಮಲಯಾಳಂ ಚಿತ್ರಕ್ಕಾಗಿ ರಾಜ್ ಅವರೊಂದಿಗೆ ಕೆಲಸ ಮಾಡಬಹುದೆಂದು ಸುಳಿವು ನೀಡಿದ್ದಾರೆ.

ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ದೇಶಿಸಿದ ರಾಜ್ ಅವರು ಈಗಾಗಲೇ 'ರುಧಿರಂ' ಚಿತ್ರದ ಮೂಲಕ ಮಲಯಾಳಂಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅಪರ್ಣಾ ಬಾಲಮುರಳಿ ಕೂಡ ನಟಿಸಿರುವ ಈ ಚಿತ್ರವನ್ನು ಜಿಶೋ ಲೋನ್ ಆಂಟೋನಿ ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com