ಕೆಜಿಎಫ್ 2-ಕಾಂತಾರ ಸಿನಿಮಾ ಹಿಂದಿಕ್ಕಿ ಪ್ರಶಸ್ತಿ ಗೆದ್ದ ‘ಚಾರ್ಲಿ 777’; ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಹೇಳಿದ್ದೇನು?

2021ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಘೋಷಣೆಯಾಗಿದೆ. ಕನ್ನಡ ಭಾಷೆ ವಿಭಾಗದಲ್ಲಿ ಕಿರಣ್ ರಾಜ್ ಕೆ ನಿರ್ದೇಶನದ ಹಾಗೂ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಈ ನಿಟ್ಟಿನಲ್ಲಿ ರಕ್ಷಿತ್ ಹಾಗೂ ಕಿರಣ್ ರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.
777 ಚಾರ್ಲಿ ಚಿತ್ರದ ಸ್ಟಿಲ್
777 ಚಾರ್ಲಿ ಚಿತ್ರದ ಸ್ಟಿಲ್

ಬೆಂಗಳೂರು: 2021ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗುರುವಾರ ಘೋಷಣೆಯಾಗಿದೆ. ಕನ್ನಡ ಭಾಷೆ ವಿಭಾಗದಲ್ಲಿ ಕಿರಣ್ ರಾಜ್ ಕೆ ನಿರ್ದೇಶನದ ಹಾಗೂ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಈ ನಿಟ್ಟಿನಲ್ಲಿ ರಕ್ಷಿತ್ ಹಾಗೂ ಕಿರಣ್ ರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದು, 'ಈ ಸುದ್ದಿಯನ್ನು ಕೇಳಿದ ಬಳಿಕ ನಮಗಾದ ಸಂತೋಷವನ್ನು ಯಾವುದೇ ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ನಾನು ಈಗ ಭಾವಪರವಶನಾಗಿದ್ದೇನೆ ಮತ್ತು ನಿನಮ್ರತೆಯ ಭಾವದಲ್ಲಿ ಮುಳುಗಿದ್ದೇನೆ. ಎಲ್ಲರಿಗೂ ಆಭಾರಿಯಾಗಿದ್ದೇನೆ. ಪರಮಃ ಸ್ಟುಡಿಯೋ ಸೇರಿದಂತೆ ಇದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ. ಕಿರಣ್ ರಾಜ್ ಅವರಿಗೆ ಅಭಿನಂದನೆಗಳು. ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದೆ' ಎಂದು ಬರೆದುಕೊಂಡಿದ್ದಾರೆ.

ರಕ್ಷಿತ್ ಅವರ ಪೋಸ್ಟ್ ಅನ್ನು ಹಂಚಿಕೊಂಡಿರುವ ನಿರ್ದೇಶಕ ಕಿರಣ್ ರಾಜ್, 'ಧನ್ಯವಾದಗಳು ರಕ್ಷಿತ್ ಸರ್. ನೀವಿಲ್ಲದೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ. ನನ್ನ ಕನಸುಗಳಿಗೆ ರೆಕ್ಕೆ ಮೂಡಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com