ಮಲಯಾಳಂನ ಖ್ಯಾತ ನಟಿ ಆರ್‌. ಸುಬ್ಬಲಕ್ಷ್ಮಿ ನಿಧನ

ಮಲಯಾಳಂನ ಖ್ಯಾತ ನಟಿ ಆರ್‌. ಸುಬ್ಬಲಕ್ಷ್ಮಿ (87) ಅವರು ನಿಧನರಾಗಿದ್ದಾರೆ. ಗುರುವಾರ ರಾತ್ರಿ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರ್. ಸುಬ್ಬಲಕ್ಷ್ಮಿ
ಆರ್. ಸುಬ್ಬಲಕ್ಷ್ಮಿ
Updated on

ತಿರುವನಂತಪುರ: ಮಲಯಾಳಂನ ಖ್ಯಾತ ನಟಿ ಆರ್‌. ಸುಬ್ಬಲಕ್ಷ್ಮಿ (87) ಅವರು ನಿಧನರಾಗಿದ್ದಾರೆ. ಗುರುವಾರ ರಾತ್ರಿ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಿರಿಯ ನಟಿ ಸುಬ್ಬಲಕ್ಷ್ಮಿ ಸಂಗೀತ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಮಾಡಿದ್ದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸಿನಮಾ ರಂಗದಲ್ಲಿ ಮಾತ್ರವಲ್ಲ, ಚಿತ್ರಕಲೆ ಮತ್ತು ಸಂಗೀತ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಸುಬ್ಬಲಕ್ಷ್ಮಿ.

ಮಲಯಾಳಂನ ಅನೇಕ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿದ್ದ ಸುಬ್ಬಲಕ್ಷ್ಮಿ ಅವರು, ಇತ್ತೀಚಿನ ದಿನಗಳಲ್ಲಿ ಅಜ್ಜಿ ಪಾತ್ರಕ್ಕೆ ಫಿಕ್ಸ್ ಆಗಿದ್ದರು. ಸಾಕಷ್ಟು ಚಿತ್ರಗಳಲ್ಲಿ ಅಜ್ಜಿಯಾಗಿಯೇ ಫೇಮಸ್ ಆದವರು. ಪಾಂಡಿಪ್ಪ, ನಂದನಂ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು.  

ಸುಬ್ಬಲಕ್ಷ್ಮಿ ಅವರು, ಕರ್ನಾಟಿಕ್‌ ಸಂಗೀತಗಾರ್ತಿ ಮತ್ತು ವರ್ಣಚಿತ್ರಕಾರರೂ ಆಗಿದ್ದಾರೆ. ಮಲಯಾಳಂ ಸಿನಿಮಾದಲ್ಲಿ ವಿಶಿಷ್ಟ ಪೋಷಕ ನಟಿಯರಲ್ಲಿ ಒಬ್ಬರಾಗಿದ್ದರು, ನಾಜೂಕು ಮತ್ತು ನಟನಾ ಕೌಶಲ್ಯದಿಂದ ಅಜ್ಜಿಯ ಪಾತ್ರಗಳನ್ನು ಮನಮುಟ್ಟುವಂತೆ ನಿರ್ವಹಿಸುತ್ತಿದ್ದರು.  ನಟಿಯ ನಿಧನಕ್ಕೆ ನಟರು ಮಾತ್ರವಲ್ಲ, ಕೇರಳದ ಮುಖ್ಯಮಂತ್ರಿಗಳು ಕೂಡ ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com