ಮುಂಬೈ: ಬಾಲಿವುಡ್ ಹಿರಿಯ ಚಿತ್ರ ನಿರ್ದೇಶಕ ರಾಜ್ ಕುಮಾರ್ ಕೊಹ್ಲಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಅವರಿಗೆ ಹೃದಯಾಘಾತ ಕಾಣಿಸಿಕೊಂಡಿದ್ದು, ಬಳಿಕ ಮೃತಪಟ್ಟಿದ್ದಾರೆ. ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
70 ರ ದಶಕದಲ್ಲಿ ನಾಗಿನ್ ಮತ್ತು ಜಾನಿ ದುಷ್ಮನ್‌ನಂತಹ ಹಿಟ್ ಚಿತ್ರ ನಿರ್ದೇಶನದ ಮೂಲಕ ಅವರು ಭಾರತೀಯ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದರು. ಲೂಟೆರಾ, ಕಹಾನಿ ಹಮ್ ಸಬ್ ಕಿ (1970) ನೌಕರ್ ಬಿವಿ ಕಾ (1983) ಮತ್ತು ಇಂಟೆಕಾಮ್ (1988) ಅವರು ನಿರ್ದೇಶಿಸಿದ ಇತರ ಚಿತ್ರಗಳು. 1990ರಿಂದ ಚಿತ್ರ ನಿರ್ದೇಶನದಿಂದ ಅವರು ದೂರ ಉಳಿದಿದ್ದರು.
ಜಾನಿ ದುಷ್ಮನ್ ಅವರು ನಿರ್ದೇಶಿಸಿದ ಕೊನೆಯ ಚಿತ್ರ. ಪಂಜಾಬಿ ಚಿತ್ರ ತಾರೆಯನ್ನು ವಿವಾಹವಾಗಿದ್ದ ಕೊಹ್ಲಿ ಅವರಿಗೆ ಗೋಗಿ ಮತ್ತು ಅರ್ಮಾನ್ ಇಬ್ಬರು ಮಕ್ಕಳಿದ್ದಾರೆ. ಅರ್ಮಾನ್ ಕೂಡಾ ನಟರಾಗಿದ್ದು, 2002ರಲ್ಲಿ 'ಜಾನಿ ದುಷ್ಮನ್: ಏಕ್ ಅನೋಖಿ' ಕಹಾನಿ ಬಿಡುಗಡೆ ಮಾಡಿದ್ದರು.
Advertisement