ಶಂಕರ್ ಆರಾಧ್ಯ ನಿರ್ದೇಶನದ 'ಮಾಯಾನಗರಿ'ಯಲ್ಲಿ ಪ್ರಮುಖ ಪಾತ್ರ; ಸಂತಸ ಹಂಚಿಕೊಂಡ ಭಾರತ್ ಸಾಗರ್

ಚಿತ್ರರಂಗಕ್ಕೆ ಪ್ರವೇಶಿಸಿದ ನಂತರ ಕೆಲವು ಆರಂಭಿಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಡಿಸೆಂಬರ್ 15 ರಂದು ಬಿಡುಗಡೆಯಾಗಲಿರುವ ಶಂಕರ್ ಆರಾಧ್ಯ ಅವರ ಮಾಯಾನಗರಿಯಲ್ಲಿ ಅವಕಾಶ ಸಿಕ್ಕಿದ್ದಕ್ಕಾಗಿ ಸಂತಸದಿಂದಿದ್ದಾರೆ. 
ಭರತ್ ಸಾಗರ್
ಭರತ್ ಸಾಗರ್
Updated on

ಮಲೆನಾಡಿನ ಗಲ್ಲಿಯಿಂದ ಹಿಡಿದು ಸಿನಿಮಾದ ಭವ್ಯ ವೇದಿಕೆಯವರೆಗೂ ನಡೆದುಬಂದಿರುವ ಭರತ್ ಸಾಗರ್ ಸಿನಿಮಾದಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಕನಸು ಕಂಡಿದ್ದವರು. ಅವರಿಗೆ ರಂಗಭೂಮಿ ನಟನೆಯಲ್ಲಿ ಅಪಾರ ಅನುಭವ ಇದೆ. ಚಿತ್ರರಂಗಕ್ಕೆ ಪ್ರವೇಶಿಸಿದ ನಂತರ ಕೆಲವು ಆರಂಭಿಕ ಸವಾಲುಗಳನ್ನು ಎದುರಿಸುತ್ತಿದ್ದರೂ, ಡಿಸೆಂಬರ್ 15 ರಂದು ಬಿಡುಗಡೆಯಾಗಲಿರುವ ಶಂಕರ್ ಆರಾಧ್ಯ ಅವರ ಮಾಯಾನಗರಿಯಲ್ಲಿ ಅವಕಾಶ ಸಿಕ್ಕಿದ್ದಕ್ಕಾಗಿ ಸಂತಸದಿಂದಿದ್ದಾರೆ. ನಟ ಅನಿಶ್ ತೇಜೇಶ್ವರ್ ಮತ್ತು ಶ್ರಾವ್ಯ ರಾವ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.

'ನಾನು ಸತತವಾಗಿ ಸಿನಿಮಾದಲ್ಲಿ ಅವಕಾಶಗಳನ್ನು ಹುಡುಕುತ್ತಿರುವಾಗ, ನನಗೆ ಮಾಯಾನಗರಿ ಆಡಿಷನ್‌ಗೆ ಕರೆ ಬಂದಿತು. ನಾನು ತಡಮಾಡದೆ, ಆಡಿಷನ್‌ಗೆ ಹೋದೆ ಮತ್ತು ನಂತರ ಎಲ್ಲವೂ ಬದಲಾಯಿತು. ಇಷ್ಟು ಬೇಗ ಅಂತಹ ಪ್ರಮುಖ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟವೆಂದು ಪರಿಗಣಿಸಬಹುದು. ಎಲ್ಲಾ ಕ್ರೆಡಿಟ್‌ ಶಂಕರ್ ಸರ್ ಅವರಿಗೆ ಸಲ್ಲಬೇಕು' ಎಂದು ಭರತ್ ಹೇಳುತ್ತಾರೆ.

ಮಾಯಾನಗರಿ ಸಿನಿಮಾ ಕಾಮಿಡಿ, ರೊಮ್ಯಾನ್ಸ್ ಮತ್ತು ಆ್ಯಕ್ಷನ್ ಅಂಶಗಳ ಮಿಶ್ರಣವಾಗಿದೆ. ಶಂಕರ್ ಆರಾಧ್ಯ ಅವರ ಚೊಚ್ಚಲ ನಿರ್ದೇಶನದಲ್ಲಿ ಅನೀಶ್ ಅವರು ಯುವ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಶಂಕರ್ ಬರೆದಿದ್ದಾರೆ. ಸ್ಯಾಂಡಲ್ ವುಡ್ ಪಿಕ್ಚರ್ಸ್ ಮತ್ತು ಶ್ವೇತಾ ಶಂಕರ್ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ ಮತ್ತು ಶ್ರೀನಿವಾಸ್ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com