ಡಿಸೆಂಬರ್ 13ರಂದು ಅಲ್ಲು ಅರ್ಜುನ್ ಜೊತೆಗಿನ 'ಪುಷ್ಪ 2: ದಿ ರೂಲ್' ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಬಿಡುಗಡೆಯಾದ 'ಅನಿಮಲ್' ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದಾರೆ. ಈ ನಡುವೆ ಅವರು ಡಿಸೆಂಬರ್ 13 ರಂದು ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರೊಂದಿಗೆ 'ಪುಷ್ಪ 2: ದಿ ರೂಲ್' ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ

ಮುಂಬೈ: ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಬಿಡುಗಡೆಯಾದ 'ಅನಿಮಲ್' ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದಾರೆ. ಈ ನಡುವೆ ಅವರು ಡಿಸೆಂಬರ್ 13 ರಂದು ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರೊಂದಿಗೆ 'ಪುಷ್ಪ 2: ದಿ ರೂಲ್' ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.

ಉದ್ಯಮದ ಮೂಲದ ಪ್ರಕಾರ, ನಟಿ ಹೈದರಾಬಾದ್‌ನಲ್ಲಿ ಸೀಕ್ವೆಲ್‌ಗಾಗಿ ಚಿತ್ರೀಕರಣದಲ್ಲಿ ತೊಡಗಲಿದ್ದಾರೆ.

ಚಿತ್ರದ ಮೊದಲ ಭಾಗದಲ್ಲಿ, ನಟಿ ಶ್ರೀವಲ್ಲಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲು ಅರ್ಜುನ್ ಅವರೊಂದಿಗಿನ ಸಾಮಿ ಸಾಮಿ ಹಾಗೂ ಶ್ರೀವಲ್ಲಿ ಹಾಡುಗಳು ದೊಡ್ಡ ಹಿಟ್ ಆಗಿದ್ದವು. 

'ಅನಿಮಲ್ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಅವರು ಸ್ವೀಕರಿಸುತ್ತಿರುವ ಪ್ರೀತಿ ಮತ್ತು ಪ್ರಶಂಸೆಯಿಂದ ತುಂಬಾ ಸಂತೋಷವಾಗಿದೆ. ಅನಿಮಲ್‌ ಚಿತ್ರದ ಭಾರಿ ಯಶಸ್ಸಿನ ನಂತರ, ರಶ್ಮಿಕಾ ಅವರು ಬಹು ನಿರೀಕ್ಷಿತ ಮತ್ತು ಬ್ಲಾಕ್‌ಬಸ್ಟರ್ ಸಿನಿಮಾ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2: ದಿ ರೂಲ್' ಚಿತ್ರೀಕರಣವನ್ನು ಡಿಸೆಂಬರ್ 13ರಂದು ಹೈದರಾಬಾದ್‌ನಲ್ಲಿ ಪ್ರಾರಂಭಿಸಲಿದ್ದಾರೆ' ಎಂದು ಮೂಲಗಳು ತಿಳಿಸಿವೆ. 

ಈಮಧ್ಯೆ, ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿರುವ ಅನಿಮಲ್, ಚಿತ್ರದಲ್ಲಿ ಸ್ತ್ರೀ ಪಾತ್ರವನ್ನು ತೋರಿಸಿರುವ ರೀತಿಗೆ ಕೆಲ ವರ್ಗದ ಪ್ರೇಕ್ಷಕರಿಂದ ಟೀಕೆಗೊಳಗಾಗಿದೆ. ರಶ್ಮಿಕಾ ಇತ್ತೀಚೆಗೆ ಚಿತ್ರದಲ್ಲಿನ ಗೀತಾಂಜಲಿ ಪಾತ್ರದ ಕುರಿತು ಬರೆದಿದ್ದರು ಮತ್ತು ಆಕೆಯನ್ನು ಕುಟುಂಬದ ಶಕ್ತಿ ಕೇಂದ್ರ ಎಂದು ಕರೆದಿದ್ದರು.

ರಶ್ಮಿಕಾ ಅವರು ಮಹಿಳಾ ಪ್ರಧಾನ ಚಿತ್ರ 'ದಿ ಗರ್ಲ್‌ಫ್ರೆಂಡ್' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com