ಸೂಪರ್ ಸ್ಟಾರ್ ರಜನಿಗೆ 73 ನೇ ಹುಟ್ಟುಹಬ್ಬ, 170 ನೇ ಸಿನಿಮಾದ ಟೈಟಲ್ 'ವೆಟ್ಟೈಯನ್'!
ನವದೆಹಲಿ: ಸೂಪರ್‌ಸ್ಟಾರ್ ರಜನಿಕಾಂತ್ ಅವರ 170 ನೇ ಚಿತ್ರಕ್ಕೆ "ವೆಟ್ಟೈಯನ್" ಎಂದು ಹೆಸರಿಡಲಾಗಿದೆ ಎಂದು ಲೈಕಾ ಪ್ರೊಡಕ್ಷನ್ಸ್ ಮಂಗಳವಾರ ಪ್ರಕಟಿಸಿದೆ. ಮಾರ್ಚ್‌ನಲ್ಲಿ ಘೋಷಣೆಯಾದ ತಮಿಳು ಚಿತ್ರವನ್ನು "ಜೈ ಭೀಮ್" ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ.
ರಜನಿ ಅವರ 73 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರೊಡಕ್ಷನ್ ಹೌಸ್ ಚಿತ್ರದ ಟೈಟಲ್ ಟೀಸರ್ ನ್ನು ಬಿಡುಗಡೆ ಮಾಡಿದೆ. ತಲೈವರ್ ಅವರ ಹುಟ್ಟುಹಬ್ಬದಂದೇ ಅವರ ಶಕ್ತಿ, ಶೈಲಿ ಮತ್ತು ಹೊರಣವನ್ನು ಹೊರಹಾಕಲಾಗುತ್ತಿದೆ ಎದು ಲೈಕಾ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದೆ.
"ವೆಟ್ಟಯ್ಯನ್", ಸಂದೇಶದೊಂದಿಗೆ ಮನರಂಜನಾತ್ಮಕ ಚಿತ್ರವಾಗಿದೆ. ಇದರಲ್ಲಿ ಅಮಿತಾಬ್ ಬಚ್ಚನ್, ಫಹದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಸಹ ನಟಿಸಲಿದ್ದಾರೆ.ಸುಭಾಸ್ಕರನ್ ನಿರ್ಮಿಸಲಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಲೋಕೇಶ್ ಕನಕರಾಜ್ ಮತ್ತು ಮಗಳು ಐಶ್ವರ್ಯಾ ರಜನಿಕಾಂತ್ ಅವರ "ಲಾಲ್ ಸಲಾಮ್" ಜೊತೆಗೆ ಇನ್ನೂ ಹೆಸರಿಡದ ಅನೇಕ ಸಿನಿಮಾಗಳು ರಜನಿ ಅವರ ಕೈಯಲ್ಲಿವೆ. ಇತ್ತೀಚೆಗೆ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ "ಜೈಲರ್" ನಲ್ಲಿ ಅವರು ಕಾಣಿಸಿಕೊಂಡರು. ಆಗಸ್ಟ್‌ನಲ್ಲಿ ಬಿಡುಗಡೆಯಾದ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ