ವಿಜಯ್ ಅವರ ಮುಂದಿನ ಚಿತ್ರ 'ದಳಪತಿ 67' ಚಿತ್ರದ ತಾರಾ ಬಳಗಕ್ಕೆ ನಟಿ ತ್ರಿಶಾ ಸೇರ್ಪಡೆ

ವಾರಿಸು ಚಿತ್ರದ ಯಶಸ್ಸಿನಲ್ಲಿರುವ ನಟ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಕಾಂಬಿನೇಷನ್‌ನಲ್ಲಿ ಮುಂದಿನ ಸಿನಿಮಾ ದಳಪತಿ 67 ಘೋಷಣೆಯಾಗಿದ್ದು, ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾದ ತಾರಾಗಣಕ್ಕೆ ನಟಿ ತ್ರಿಶಾ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ವಿಜಯ್ ಅವರ ಮುಂದಿನ ಚಿತ್ರ 'ದಳಪತಿ 67' ಚಿತ್ರದ ತಾರಾ ಬಳಗಕ್ಕೆ ನಟಿ ತ್ರಿಶಾ ಸೇರ್ಪಡೆ
Updated on

ವಾರಿಸು ಚಿತ್ರದ ಯಶಸ್ಸಿನಲ್ಲಿರುವ ನಟ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಕಾಂಬಿನೇಷನ್‌ನಲ್ಲಿ ಮುಂದಿನ ಸಿನಿಮಾ ದಳಪತಿ 67 ಘೋಷಣೆಯಾಗಿದ್ದು, ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾದ ತಾರಾಗಣಕ್ಕೆ ನಟಿ ತ್ರಿಶಾ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ದಳಪತಿ 67 ರ ಪ್ರೊಡಕ್ಷನ್ ಹೌಸ್ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್‌ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. 

ಪ್ರಕಟಣೆಯ ಪೋಸ್ಟರ್‌ನಲ್ಲಿ ನಟಿಯ ಉಲ್ಲೇಖವಿದ್ದು, 'ನನ್ನ ಕೆಲವು ನೆಚ್ಚಿನ ಜನರು ಮತ್ತು ಅಪಾರ ಪ್ರತಿಭಾವಂತ ತಂಡವನ್ನು ಒಳಗೊಂಡಿರುವ ಈ ಐಕಾನಿಕ್ ಪ್ರಾಜೆಕ್ಟ್‌ನ ಭಾಗವಾಗಿರುವುದಕ್ಕೆ ಕೃತಜ್ಞನಾಗಿದ್ದೇನೆ. ರೋಮಾಂಚನಕಾರಿ ಸಮಯಗಳು ಮುಂದಿವೆ' ಎಂದು ಹೇಳಿದ್ದಾರೆ. 

ಈ ಸಿನಿಮಾಗೆ ಅಧಿಕೃತವಾಗಿ ಶೀರ್ಷಿಕೆ ಇಲ್ಲದಿದ್ದರೂ, ವಿಜಯ್ ಎದುರು ನಾಯಕಿಯಾಗಿ ತ್ರಿಶಾ ನಟಿಸುವ ನಿರೀಕ್ಷೆಯಿದೆ. 14 ವರ್ಷಗಳ ನಂತರ ತ್ರಿಷಾ ಮತ್ತು ವಿಜಯ್ ಮತ್ತೆ ದಳಪತಿ 67 ಮೂಲಕ ಒಟ್ಟಿಗೆ ನಟಿಸುತ್ತಿದ್ದಾರೆ. ಇರೊಂದಿಗೆ ನಟರಾದ ಅರ್ಜುನ್, ಸಂಜಯ್ ದತ್, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್ ಮತ್ತು ಸ್ಯಾಂಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಟರಾದ ಸಂಜಯ್ ದತ್ ಮತ್ತು ಮ್ಯಾಥ್ಯೂ ಥಾಮಸ್ ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಮನೋಜ್ ಪರಮಹಂಸ ಛಾಯಾಗ್ರಹಣ ಚಿತ್ರಕ್ಕಿದ್ದು, ಫಿಲೋಮಿನ್ ರಾಜ್ ಅವರ ಸಂಕಲನವಿದೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com