ಪ್ರೀತಿಯ ಸೆಲಬ್ರಿಟಿಗಳಿಗೆ ವಿಶೇಷ ಉಡುಗೊರೆ ಕೊಟ್ಟ ದರ್ಶನ್: ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ಚಾಲೆಂಜಿಂಗ್ ಸ್ಟಾರ್; ದೇವ್ರಿಗಿಂತ ಹೆಚ್ಚಾದ್ರಿ ನೀವು!

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಎದೆ ಮೇಲೆ 'ನನ್ನ ಸೆಲೆಬ್ರಿಟೀಸ್' ಎಂದು ಟ್ಯಾಟು ಹಾಕಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಟ್ರಿಬ್ಯೂಟ್ ಸಲ್ಲಿಸಿದ್ದಾರೆ. ದರ್ಶನ್ ತಮ್ಮ ಎದೆ ಮೇಲೆ ಈ ರೀತಿಯ ಟ್ಯಾಟು ಹಾಕಿಸಿಕೊಂಡು ಫೋಟೊಗೆ ಪೋಸ್ ಕೊಟ್ಟಿದ್ದಾರೆ.
ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ನಟ ದರ್ಶನ್
ಎದೆ ಮೇಲೆ ಹಚ್ಚೆ ಹಾಕಿಸಿಕೊಂಡ ನಟ ದರ್ಶನ್

ಬೆಂಗಳೂರು: ಸಿನಿಮಾ ನಟನಿಗಾಗಿ ಆತನ ಅಭಿಮಾನಿಗಳು ತಮ್ಮ ಕೈ ಮೇಲೆ, ಎದೆ ಮೇಲೆ ಟ್ಯಾಟು ಹಾಕಿಸಿಕೊಂಡು ತಮ್ಮ ಅಭಿಮಾನವನ್ನು ತೋರಿಸಿಕೊಳ್ಳುವುದು ಕಾಮನ್. ಆದರೆ ತನ್ನ ಅಭಿಮಾನಿಗಳಿಗಾಗಿ ನಟನೋರ್ವ ಟ್ಯಾಟು ಹಾಕಿಸಿಕೊಳ್ಳುವುದು ಅತಿ ಅಪರೂಪ. ಅದರಲ್ಲೂ ಸ್ಟಾರ್ ನಟರು ತಮ್ಮ ಅಭಿಮಾನಿಗಳ ಹೆಸರನ್ನು ಎದೆ ಮೇಲೆ ಟ್ಯಾಟು ಹಾಕಿಸಿಕೊಳ್ಳುವುದು ತೀರಾ ಕಷ್ಟ.

ಆದರೆ  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಎದೆ ಮೇಲೆ 'ನನ್ನ ಸೆಲೆಬ್ರಿಟೀಸ್' ಎಂದು ಟ್ಯಾಟು ಹಾಕಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಟ್ರಿಬ್ಯೂಟ್ ಸಲ್ಲಿಸಿದ್ದಾರೆ. ದರ್ಶನ್ ತಮ್ಮ ಎದೆ ಮೇಲೆ ಈ ರೀತಿಯ ಟ್ಯಾಟು ಹಾಕಿಸಿಕೊಂಡು ಫೋಟೊಗೆ ಪೋಸ್ ಕೊಟ್ಟಿದ್ದಾರೆ.

ಬಹುಶಃ ಚಿತ್ರೋದ್ಯಮದ ಇತಿಹಾಸದಲ್ಲಿ ಅಭಿಮಾನಿಗಳ ಪ್ರೀತಿಯನ್ನು ಹಚ್ಚೆಯ ಮೂಲಕ ಎದೆಗೆ ಇಳಿಸಿಕೊಂಡ ನಟ ದರ್ಶನ್‌ ಮೊದಲಿಗರು ಇರಬಹುದೆನೋ! ಈ ಮೂಲಕ ಹೊಸ ಬದಲಾವಣೆಗೆ ದರ್ಶನ್‌ ನಾಂದಿ ಹಾಡಿದ್ದಾರೆ.

ತಾವು ಟ್ಯಾಟು ಹಾಕಿಸಿಕೊಳ್ಳುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ದರ್ಶನ್ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ.  ನಟ ದರ್ಶನ್ ತಮಗಾಗಿ ಹಾಕಿಸಿಕೊಂಡಿರುವ ಟ್ಯಾಟು ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನಿಮ್ಮ ಅಭಿಮಾನಿಯಾಗಿದ್ದಕ್ಕೂ ಸಾರ್ಥಕವಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಪಾಲಿಗೆ ನೀವು ದೇವ್ರಿಗಿಂತ ಹೆಚ್ಚಾದ್ರಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com