ದರ್ಶನ್ ಅಭಿಮಾನಿಗಳಿಗೆ ಸಿಹಿಸುದ್ದಿ; ದಾಖಲೆ ಬರೆದ ನಟ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ
ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡಿದ್ದ ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ, ಬಿಡುಗಡೆಯ ನಂತರವೂ ಸದ್ದು ಮಾಡುತ್ತಲೇ ಇದೆ. ಗಣರಾಜ್ಯೋತ್ಸವದಂದು (ಜ. 26) ಬಿಡುಗಡೆಯಾದ ಈ ಚಿತ್ರವು 100 ಕೋಟಿ ಕ್ಲಬ್ ಪಟ್ಟಿಗೆ ಸೇರಿದೆ ಎಂದು ವರದಿಯಾಗಿದೆ.
Published: 30th January 2023 01:03 PM | Last Updated: 30th January 2023 05:36 PM | A+A A-

ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಮತ್ತು ರಚಿತಾ ರಾಮ್
ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡಿದ್ದ ನಟ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ, ಬಿಡುಗಡೆಯ ನಂತರವೂ ಸದ್ದು ಮಾಡುತ್ತಲೇ ಇದೆ. ಗಣರಾಜ್ಯೋತ್ಸವದಂದು (ಜ. 26) ಬಿಡುಗಡೆಯಾದ ಈ ಚಿತ್ರವು 100 ಕೋಟಿ ಕ್ಲಬ್ ಪಟ್ಟಿಗೆ ಸೇರಿದೆ ಎಂದು ವರದಿಯಾಗಿದೆ.
ನಮ್ಮ ಮೂಲಗಳ ಪ್ರಕಾರ, ಕಮರ್ಷಿಯಲ್ ಎಂಟರ್‌ಟೈನರ್ ಕ್ರಾಂತಿ ಬಾಕ್ಸ್ ಆಫೀಸ್‌ನಲ್ಲಿ ಅಧಿಕೃತವಾಗಿ 100 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿದೆ. ಅಲ್ಲದೆ, ಇದರ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳು ಕೂಡ ಭಾರಿ ಬೆಲೆಗೆ ಮಾರಾಟವಾಗಿವೆ ಎನ್ನಲಾಗಿದೆ. ಈನಡುವೆ ಥಿಯೇಟರ್‌ಗಳಲ್ಲಿಯೂ ಗಳಿಕೆ ಕಾಣುತ್ತಲೇ ಸಾಗಿದೆ.
ವಿ ಹರಿಕೃಷ್ಣ ಬರೆದು ನಿರ್ದೇಶಿಸಿರುವ ಕ್ರಾಂತಿಯು ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಸರ್ಕಾರಿ ಶಾಲೆಗಳನ್ನು ರಕ್ಷಿಸುವ ಬಲವಾದ ಸಂದೇಶವನ್ನು ಹೊಂದಿರುವ ಮಾಸ್ ಮಿಶ್ರಣವಾಗಿದೆ.
ಚಿತ್ರದ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ಮಾಪಕಿ ಶೈಲಜಾ ನಾಗ್, ದರ್ಶನ್ ಅವರ ಮಾಸ್ ಫ್ಯಾನ್ ಫಾಲೋಯಿಂಗ್ ಚಿತ್ರವು ರಾಜ್ಯದಾದ್ಯಂತ ಸಿಂಗಲ್ ಥಿಯೇಟರ್‌ಗಳಲ್ಲಿ ಅಸಾಧಾರಣ ಹಿಟ್ ಆಗಲು ಸಹಾಯ ಮಾಡಿದೆ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಸಹ ಪ್ರೇಕ್ಷಕರನ್ನು ಕರೆತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕ್ರಾಂತಿ ಎಂದರೆ ಬದಲಾವಣೆ; ವೃತ್ತಿ- ವೈಯಕ್ತಿಕ ಬದುಕಿನಲ್ಲಿ ಏಕಾಂಗಿಯಾಗಿ ಹೋರಾಡುವುದನ್ನು ಜೀವನ ಕಲಿಸಿದೆ: ದರ್ಶನ್
ದರ್ಶನ್ ಸಿಂಗಲ್ ಸ್ಕ್ರೀನ್‌ಗಳಲ್ಲಿ ಪ್ರಮುಖ ಕ್ರೌಡ್ ಪುಲ್ಲರ್ ಆಗಿರುವುದರಿಂದ, ಆನ್‌ಲೈನ್ ಬುಕಿಂಗ್‌ಗೆ ಆಯ್ಕೆ ಮಾಡಿಕೊಳ್ಳುವ ಬದಲು ತಾವೇ ಟಿಕೆಟ್‌ಗಳನ್ನು ಖರೀದಿಸಲು ಜನರು ಸಾಲಿನಲ್ಲಿ ನಿಂತಿರುವುದು ಆಸಕ್ತಿದಾಯಕವಾಗಿದೆ ಎಂದು ಮೀಡಿಯಾ ಹೌಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಬಿ ಸುರೇಶ ಅವರೊಂದಿಗೆ ಚಿತ್ರವನ್ನು ನಿರ್ಮಿಸಿರುವ ಶೈಲಜಾ ಹೇಳುತ್ತಾರೆ.
ಚಿತ್ರವು ಬಿಕೆಟಿ (ಬೆಂಗಳೂರು, ಕೋಲಾರ ಮತ್ತು ತುಮಕೂರು), ಎಂಎಂಸಿಎಚ್ ಕೇಂದ್ರಗಳು (ಮೈಸೂರು, ಮಂಡ್ಯ, ಮಡಿಕೇರಿ ಮತ್ತು ಹಾಸನ), ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಬೆಳಗಾವಿ ಮತ್ತು ಹೈದರಾಬಾದ್-ಕರ್ನಾಟಕ ಮುಂತಾದ ಪ್ರದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಹೇಳುವ ಶೈಲಜಾ, ಅಂತಿಮವಾಗಿ, ನಮ್ಮ ಪ್ರಯತ್ನಗಳು ಫಲ ನೀಡಿವೆ ಮತ್ತು ನನಗೆ ಖುಷಿಯಾಗಿದೆ. ಕ್ರಾಂತಿ ಸಿನಿಮಾವು ಯಜಮಾನ ನಂತರ ದರ್ಶನ್ ಅವರೊಂದಿಗಿನ ನಮ್ಮ ಎರಡನೇ ಚಿತ್ರವಾಗಿದೆ. ಇದು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸುತ್ತಿದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ಸಿನಿಮಾ ಇಂಡಸ್ಟ್ರಿಯಿಂದ ನಾನು ಸಾಕಷ್ಟು ಕಲಿತಿದ್ದೇನೆ: ನಟಿ ರಚಿತಾ ರಾಮ್
ರವಿಚಂದ್ರನ್ ಮತ್ತು ಸುಮಲತಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕ್ರಾಂತಿಯಲ್ಲಿ ರಚಿತಾ ರಾಮ್, ಸಂಯುಕ್ತ ಹೊರ್ನಾಡ್, ವೈನಿಧಿ ಜಗದೀಶ್ ಮತ್ತು ಸಾಧು ಕೋಕಿಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕರುಣಾಕರ್ ಅವರ ಛಾಯಾಗ್ರಹಣದೊಂದಿಗೆ, ಹರಿಕೃಷ್ಣ ಅವರೇ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.