ಸಿನಿಮಾ ಇಂಡಸ್ಟ್ರಿಯಿಂದ ನಾನು ಸಾಕಷ್ಟು ಕಲಿತಿದ್ದೇನೆ: ನಟಿ ರಚಿತಾ ರಾಮ್
ಬುಲ್ ಬುಲ್ (2013) ಚಿತ್ರದ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದವರು ನಟಿ ರಚಿತಾ ರಾಮ್. ತಮ್ಮ ಮೊದಲ ಚಿತ್ರದಲ್ಲಿಯೇ ದರ್ಶನ್ ಅವರಂತಹ ಸ್ಟಾರ್ ಜೊತೆ ಕೆಲಸ ಮಾಡಿದರು. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು ಮತ್ತು ಅಂದಿನಿಂದ ಡಿಂಪಲ್ ಕ್ವೀನ್ ಅಥವಾ ಬುಲ್‌ಬುಲ್ ಎಂದೇ ಜನಪ್ರಿಯರಾದರು ರಚಿತಾ ರಾಮ್.
Published: 21st January 2023 01:10 PM | Last Updated: 21st January 2023 03:24 PM | A+A A-

ಕ್ರಾಂತಿ ಚಿತ್ರದ ಸ್ಟಿಲ್.
ಬುಲ್ ಬುಲ್ (2013) ಚಿತ್ರದ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದವರು ನಟಿ ರಚಿತಾ ರಾಮ್. ತಮ್ಮ ಮೊದಲ ಚಿತ್ರದಲ್ಲಿಯೇ ದರ್ಶನ್ ಅವರಂತಹ ಸ್ಟಾರ್ ಜೊತೆ ಕೆಲಸ ಮಾಡಿದರು. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು ಮತ್ತು ಅಂದಿನಿಂದ ಡಿಂಪಲ್ ಕ್ವೀನ್ ಅಥವಾ ಬುಲ್‌ಬುಲ್ ಎಂದೇ ಜನಪ್ರಿಯರಾದರು ರಚಿತಾ ರಾಮ್.
ಸಿನಿಮಾರಂಗದಲ್ಲಿನ ತಮ್ಮ ಪ್ರಯಾಣ ಸವಾಲಿನದ್ದಾಗಿತ್ತು ಎನ್ನುವ ರಚಿತಾ, ನಾನು ಯಶಸ್ಸು ಮತ್ತು ವೈಫಲ್ಯಗಳನ್ನು ನೋಡಿದೆ. ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳುವ ಚಲನಚಿತ್ರಗಳು ಇದ್ದವು. ಆದರೆ, ಅವು ಕೆಲವು ಉತ್ತಮ ಪಾತ್ರಗಳಾಗಿವೆ. ಅದು ನನ್ನ ನಟನೆ ಆಧಾರಿತ ಮತ್ತು ನನ್ನ ವೃತ್ತಿಜೀವನವನ್ನು ಉನ್ನತೀಕರಿಸಿತು. ಒಟ್ಟಾರೆ ಇಂಡಸ್ಟ್ರಿ ನನಗೆ ಕೆಲವು ಒಳ್ಳೆಯ ಪಾಠಗಳನ್ನು ಕಲಿಸಿದೆ ಎನ್ನುತ್ತಾರೆ.

ಕ್ರಾಂತಿ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿರುವ ರಚಿತಾ, ಈ ಚಿತ್ರವು ಅನೇಕ ರೀತಿಯಲ್ಲಿ ತನಗೆ ವಿಶೇಷವಾಗಿದೆ. ಬೆಳ್ಳಿತೆರೆಯಲ್ಲಿ ನನಗೆ ಲಾಂಚ್ ಆದ ನಟನೊಂದಿಗೆ ನಾನು ಕೆಲಸ ಮಾಡುತ್ತಿದ್ದೇನೆ. ಬುಲ್ ಬುಲ್, ಅಂಬರೀಶ ಮತ್ತು ಜಗ್ಗು ದಾದಾದಲ್ಲಿ ಅತಿಥಿ ಪಾತ್ರದ ನಂತರ ದರ್ಶನ್ ಅವರೊಂದಿಗೆ ನನ್ನ ನಾಲ್ಕನೇ ಸಿನಿಮಾ. ಆದರೆ, ಪ್ರತಿ ಬಾರಿಯೂ ದರ್ಶನ್ ಜೊತೆಗೆ ನಟಿಸುವುದು ನನಗೆ ಮೊದಲ ಸಲ ಎಂದೇ ಅನಿಸುತ್ತದೆ. ಬುಲ್ ಬುಲ್ ಸಿನಿಮಾದಲ್ಲಿದ್ದ ರೀತಿಯಲ್ಲಿಯೇ ಕ್ರಾಂತಿ ಸಿನಿಮಾ ಚಿತ್ರೀಕರಣವನ್ನು ಪ್ರಾರಂಭಿಸಿದೆ. 7 ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ಜೊತೆ ಕೈಜೋಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
'ಉತ್ಸಾಹದ ಜೊತೆಗೆ ಈ ಬಾರಿ ಅವರ ಮುಂದೆ ಡೈಲಾಗ್ ಹೇಳುವ ವಿಶ್ವಾಸ ನನಗಿತ್ತು. ನಾನು ಈ ವಿಚಾರವನ್ನು ಅವರಿಗೆ ತಿಳಿಸಿದೆ ಮತ್ತು ನಾನು ಈಗ ನಿಮ್ಮನ್ನು ಎದುರಿಸಬಲ್ಲೆ ಎಂದು ಹೇಳಿದೆ. ಅದಕ್ಕವರು ನಕ್ಕರು ಎನ್ನುತ್ತಾರೆ ರಚಿತಾ ರಾಮ್.
ರಚಿತಾ ಅವರು ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ ಬಗ್ಗೆ ಮಾತನಾಡುವ ಅವರು, 'ಒಂದು, ದರ್ಶನ್ ಜೊತೆ ಮತ್ತೆ ಕೆಲಸ ಮಾಡುವುದು ಮತ್ತು ವಿ ಹರಿಕೃಷ್ಣ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುವ ಅವಕಾಶ. ಇದಲ್ಲದೆ, ಕಮರ್ಷಿಯಲ್ ಸ್ಕ್ರಿಪ್ಟ್‌ನೊಂದಿಗೆ ನಿರ್ದೇಶಕರ ವಿಧಾನವನ್ನು ನಾನು ಇಷ್ಟಪಟ್ಟೆ. ಅವರು ನನ್ನ ಪಾತ್ರವನ್ನು ಮಾತ್ರ ವಿವರಿಸಲಿಲ್ಲ, ಬದಲಿಗೆ ಸಂಪೂರ್ಣ ಕಥೆಯನ್ನು ಮತ್ತು ಪ್ರತಿ ನಟನ ಪಾತ್ರದ ಬಗ್ಗೆ ಹೇಳಿದರು. ಇದು ಕಥೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು ಎಂದು ಹೇಳಿದರು.
ಇದನ್ನೂ ಓದಿ: ಈ ಪೀಳಿಗೆಯಲ್ಲಿ 10 ವರ್ಷ ಕಮರ್ಷಿಯಲ್ ಹೀರೋಯಿನ್ ಆಗಿ ಉಳಿದುಕೊಂಡದ್ದು ದೊಡ್ಡ ಸಾಧನೆ: 'ಕ್ರಾಂತಿ' ನಾಯಕಿ ಬಗ್ಗೆ ದರ್ಶನ್ ಮಾತು
ಅಕ್ಷರ ಕ್ರಾಂತಿಯ ಕಥಾವಸ್ತುವನ್ನು ಹೊಂದಿರುವ ಈ ಚಿತ್ರವು ಸಮಾಜಕ್ಕೆ ಮತ್ತು ಸರ್ಕಾರಕ್ಕೆ ಸಂದೇಶವನ್ನು ನೀಡುತ್ತದೆ. ಕಂಟೆಂಟ್ ಹೊಂದಿರುವ ಕಮರ್ಷಿಯಲ್ ಎಂಟರ್‌ಟೈನರ್ ಈ ಕಾಲದಲ್ಲಿ ಅಪರೂಪವಾಗಿದ್ದು, ಈ ಚಿತ್ರವು ಸಮಾಜದ ಮೇಲೆ ಪ್ರಭಾವ ಬೀರಿದರೆ ಮತ್ತು ವಿವಿಧ ಸರ್ಕಾರಿ ಶಾಲೆಗಳಲ್ಲಿ ಬದಲಾವಣೆ ತಂದರೆ ನನಗೆ ಸಂತೋಷವಾಗುತ್ತದೆ ಎಂದು ಅವರು ಹೇಳುತ್ತಾರೆ.
ರಚಿತಾ ರಾಮ್ ಅವರ ತಾಯಿ ಶಾಲೆಯನ್ನು ನಡೆಸುತ್ತಿರುವುದರಿಂದ ಶಿಕ್ಷಕಿಯ ಜವಾಬ್ದಾರಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ಆಕೆಯ ತಂದೆ ಭರತ ನಾಟ್ಯಂ ಶಿಕ್ಷಕರಾಗಿದ್ದಾರೆ. 'ನಾನು ನನ್ನ ತಾಯಿಯೊಂದಿಗೆ ನೇರವಾಗಿ ತೊಡಗಿಸಿಕೊಂಡಿಲ್ಲವಾದರೂ, ಈ ವೃತ್ತಿಯಲ್ಲಿ ಒಳಗೊಂಡಿರುವ ಪಾತ್ರ ಮತ್ತು ಜವಾಬ್ದಾರಿಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ' ಎಂದು ಚಿತ್ರದಲ್ಲಿ ವಿಜ್ಞಾನ ಶಿಕ್ಷಕಿ ಉಷಾ ಪಾತ್ರದಲ್ಲಿ ನಟಿಸಿರುವ ರಚಿತಾ ಹೇಳುತ್ತಾರೆ.
ಕ್ರಾಂತಿ ಎಂಬ ಶೀರ್ಷಿಕೆಯ ಪಾತ್ರದಲ್ಲಿ ದರ್ಶನ್ ನಟಿಸುವುದರೊಂದಿಗೆ, ಹರಿಕೃಷ್ಣ ಅವರು ಚಿತ್ರದ ಪ್ರತಿಯೊಬ್ಬ ನಟರಿಗೂ ಪ್ರಾಮುಖ್ಯತೆ ನೀಡಿದ್ದಾರೆ. ಸಂಗೀತ ಸಂಯೋಜಕ ಹರಿಕೃಷ್ಣ ಮತ್ತು ನಿರ್ದೇಶಕ ಹರಿಕೃಷ್ಣ ಎಂದಾಗ ಇಬ್ಬರಲ್ಲಿ ಆಯ್ಕೆ ಮಾಡುವುದು ಕಷ್ಟ. ಅವರು ನಿರ್ದೇಶನಕ್ಕಾಗಿ ಕ್ಯಾಮೆರಾ ಹಿಂದೆ ಬಂದಾಗ ಸಿದ್ಧತೆ ಮಾಡಿಕೊಂಡಿರುತ್ತಾರೆ. ಅವರ ಕಡೆಯಿಂದ ಸಾಕಷ್ಟು ಹೋಮ್‌ವರ್ಕ್ ಇತ್ತು ಮತ್ತು ನಾವು ದೃಶ್ಯಗಳು, ಕಾಸ್ಟ್ಯೂಮ್ಸ್ ಮತ್ತು ಸಂಭಾಷಣೆಗಳನ್ನು ಶೂಟಿಂಗ್ ಸಮಯದಲ್ಲಿಯೂ ಸುಧಾರಿಸಿದ್ದೇವೆ ಎಂದು ರಚಿತಾ ಹೇಳುತ್ತಾರೆ.
ಇದನ್ನೂ ಓದಿ: ಮಂಡ್ಯ: ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು!
ಚಿತ್ರದಲ್ಲಿ ನನ್ನ ಎರಡು ಹಾಡುಗಳಿವೆ. ಇದು ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗುತ್ತದೆ. ಆದರೆ, ಮಾತನಾಡುವ ಭಾಗಗಳಲ್ಲಿ ಕೆಲಸ ಮಾಡುವುದನ್ನು ನಾನು ಯಾವಾಗಲೂ ಆನಂದಿಸುತ್ತೇನೆ. ಒಟ್ಟಾರೆಯಾಗಿ, ಕ್ರಾಂತಿ ತಂಡದೊಂದಿಗೆ ಪ್ರಯಾಣಿಸಲು ಮತ್ತು ನಿರ್ಮಾಪಕಿ ಶೈಲಜಾ ನಾಗ್ ಮತ್ತು ಬಿ ಸುರೇಶ ಅವರೊಂದಿಗೆ ಕೆಲಸ ಮಾಡಿದ್ದು ನನಗೆ ಸಂತೋಷವಾಗಿದೆ.
2023ನೇ ವರ್ಷದಲ್ಲಿ ರಚಿತಾ ಅವರ ಹಲವು ಸಿನಿಮಾಗಳು ಮುಂದಿದ್ದು, ವೀರಂ, ಬ್ಯಾಡ್ ಮ್ಯಾನರ್ಸ್, ಮ್ಯಾಟಿನಿ, ಶಬರಿ ಮತ್ತು ಲವ್ ಮಿ ಅಥವಾ ಹೇಟ್ ಮಿ ಮುಂತಾದ ಚಿತ್ರಗಳಿವೆ.
'ನನಗೆ ತೆಲುಗಿನಲ್ಲಿ ಮತ್ತೊಂದು ಪ್ರಾಜೆಕ್ಟ್ ಇದೆ, ಅದು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಿಡುಗಡೆಯ ನಂತರ ನಾನು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಬಹುದು. ನಾನು ಈ ವರ್ಷ ತಮಿಳಿನಲ್ಲೂ ನನ್ನ ಚೊಚ್ಚಲ ಪ್ರವೇಶ ಮಾಡುತ್ತೇನೆ' ಎಂದು ಅವರು ಹೇಳುತ್ತಾರೆ.